ಬೆಂಗಳೂರು: ಗಣೇಶೋತ್ಸವ ಸಮಿತಿಗಳ ಪ್ರತಿಭಟನೆಗೆ ಬಿಬಿಎಂಪಿ ಮಣಿದಿದೆ. ಬೇಡಿಕೆ ಬಂದಲ್ಲಿ ಒಂದು ವಾರ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ಮೂರ್ತಿಗಳನ್ನು ಕೂರಿಸಲು ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ. ವಿಶೇಷ ಆಯುಕ್ತರ ಮಾತಿಗೆ ಒಪ್ಪಿದ ಗಣೇಶ ಉತ್ಸವ ಸಮಿತಿ, ಮೂರ್ತಿ ತಯಾರಕರ ಧರಣಿಯನ್ನು ಹಿಂಪಡೆದಿದ್ದಾರೆ. 3 ದಿನದ ಆಚರಣೆಯ ನಿಯಮವನ್ನೂ ಬಿಬಿಎಂಪಿ ಹಿಂಪಡೆದಿದೆ ಎಂದು ತಿಳಿದುಬಂದಿದೆ. ಆದರೆ ಈಕುರಿತು ಅಧಿಕೃತ ಆದೇಶ ಇನ್ನೂ ಬಿಡುಗಡೆಗೊಂಡಿಲ್ಲ.
ಈಕುರಿತು ಟಿವಿ9 ಜತೆ ಮಾತನಾಡಿದ ಬೆಂಗಳೂರು ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ರಾಜ್, ಯಾವುದೇ ಸರ್ಕಾರ ಧಾರ್ಮಿಕ ವಿಚಾರಕ್ಕೆ ತಲೆ ಹಾಕಬಾರದು ಎಂಬ ವಿಷಯಕ್ಕೆ ಜಯ ಸಿಕ್ಕಿದೆ. ಗಣಪತಿ ಮೂರ್ತಿ ಎತ್ತರದ ಬಗ್ಗೆ ಕೂಡ ಬಿಬಿಎಂಪಿ ನಿಯಮ ಹಿಂಪಡೆದಿದೆ. ಕಲ್ಯಾಣಿಗಳಲ್ಲಿ ವಿಸರ್ಜನೆ ಅವಕಾಶ ಕೊಟ್ಟಿದೆ. ಗಣೇಶ ಹಬ್ಬ ಆಚರಿಸಲು ಚೌತಿ ಯಿಂದ ಚರ್ತುದರ್ಶಿವರೆಗೆಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲಾ ರೀತಿಯ ಅನುಕೂಲ ಮಾಡಿಕೊಳ್ಳುತ್ತೇವೆ ಹಾಗೂ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ವಾರ್ಡ್ ನಲ್ಲಿ ಎಲ್ಲಾ ಸಮಿತಿಗೂ ಗಣೇಶ ಕೂರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:
ತಿಲಕರಿಂದ ಸ್ಫೂರ್ತಿಗೊಂಡು ಉತ್ತರ ಕರ್ನಾಟಕದಲ್ಲೇ ಮೊದಲು ಶುರುವಾಯ್ತು ಸಾರ್ವಜನಿಕ ಗಣೇಶೋತ್ಸವ
ಬಿಬಿಎಂಪಿ ಕಚೇರಿಯಲ್ಲಿ ಗಣೇಶ ಮೂರ್ತಿ ಸ್ಥಾಪನೆ, ಪಟಾಕಿ ಹೊಡೆದು ಪ್ರತಿಭಟನೆ; ಸಂಜೆಯೊಳಗೆ ಅಂತಿಮ ತೀರ್ಮಾನ ಎಂದ ಸಿಎಂ
(Ganesh Chaturthi 2021 Bengaluru Guidelines changed On Ganesh in one word rule aborted BBMP )
Published On - 3:45 pm, Thu, 9 September 21