ಹೂ ಕುಂಡ​ಗಳಲ್ಲಿರುವ ಶೋಕಿ ಗಿಡಗಳಾಗಬೇಡಿ; ಹೆಮ್ಮರವಾಗಿ ಬೆಳೆದು ಆಶ್ರಿತರಿಗೆ ನೆರಳು ನೀಡಿ- ಜೆ ಎಚ್​ ಪಟೇಲರ ಕಿವಿಮಾತು ಆದರ್ಶ ಎಂದ ಸಿಎಂ ಬೊಮ್ಮಾಯಿ

JH Patel: ಫ್ಲವರ್​ ಪಾಟ್​ಗಳಲ್ಲಿರುವ ಶೋಕಿ ಗಿಡಗಳಾಗಬೇಡಿ; ಹೆಮ್ಮರವಾಗಿ ಬೆಳೆದು ಆಶ್ರಿತರಿಗೆ ನೆರಳು ನೀಡಿ- ಜೆ ಎಚ್​ ಪಾಟೀಲರ ಕಿವಿಮಾತು ಆದರ್ಶ

ಹೂ ಕುಂಡ​ಗಳಲ್ಲಿರುವ ಶೋಕಿ ಗಿಡಗಳಾಗಬೇಡಿ; ಹೆಮ್ಮರವಾಗಿ ಬೆಳೆದು ಆಶ್ರಿತರಿಗೆ ನೆರಳು ನೀಡಿ- ಜೆ ಎಚ್​ ಪಟೇಲರ ಕಿವಿಮಾತು ಆದರ್ಶ ಎಂದ ಸಿಎಂ ಬೊಮ್ಮಾಯಿ
ಫ್ಲವರ್​ ಪಾಟ್​ಗಳಲ್ಲಿರುವ ಶೋಕಿ ಗಿಡಗಳಾಗಬೇಡಿ; ಹೆಮ್ಮರವಾಗಿ ಬೆಳೆದು ಆಶ್ರಿತರಿಗೆ ನೆರಳು ನೀಡಿ- ಜೆ ಎಚ್​ ಪಾಟೀಲರ ಕಿವಿಮಾತು ಆದರ್ಶ

ಬೆಂಗಳೂರು: ಮಾಧ್ಯಮ ಲೋಕದ ಇತಿಹಾಸದಲ್ಲೇ ಟಿವಿ9 ವಿಶಿಷ್ಟ ಪ್ರಯತ್ನ ನಡೆಸಿದ್ದು, ಜನರ ಸಮಸ್ಯೆ ನೇರ ಆಲಿಸಿ ಅಲ್ಲೇ ಪರಿಹಾರ ಕಲ್ಪಿಸಲು ಕಾಮನ್ ಮ್ಯಾನ್​ಗೂ-CMಗೂ ಟಿವಿ9 ವೇದಿಕೆ ಸೃಷ್ಟಿಸಿದೆ. ಟಿವಿ9 ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ವೀಕ್ಷಕರು ಮುಕ್ತ ಮಾತುಕತೆ ನಡೆಸಿದ್ದಾರೆ. ವಿಪಕ್ಷಗಳ ಟೀಕೆಗೂ ಉತ್ತರ ನೀಡುತ್ತಾ, ತಜ್ಞರ ಸಲಹೆಗೂ ಮನ್ನಣೆ ನೀಡುತ್ತಾ CM ಸ್ಪೀಕಿಂಗ್ ಇದೀಗ ಟಿವಿ9ನಲ್ಲಿ ನಡೆದಿದೆ.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ ಎಚ್ ಪಟೇಲರನ್ನು ಸ್ಮರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಫ್ಲವರ್​ ಪಾಟ್​ಗಳಲ್ಲಿರುವ ಶೋಕಿ ಗಿಡಗಳಾಗಬೇಡಿ; ಆಳವಾಗಿ ಬೇರೂರಿ ಹೆಮ್ಮರವಾಗಿ ಬೆಳೆದು ಆಶ್ರಿತರಿಗೆ ನೆರಳು ನೀಡಿ’ ಎಂದು ಜೆಎಚ್​ ಪಟೇಲರ ಕಿವಿಮಾತನ್ನು ನೆನಪಿಸಿಕೊಂಡರು. ಹಿರಿಯರ ಮಾತನ್ನು ಆದರ್ಶವಾಗಿ ತೆಗೆದುಕೊಂಡು ಅಳವಡಿಸಿಕೊಳ್ಳುವುದಾಗಿ ಹೇಳಿದರು.

ಭೂಮಿಯಲ್ಲಿ ನಾವು ಗಿಡಗಳಾಗಿ ಉಳಿಯಬಾರದು. ಬಲವಾಗಿ ಬೇರೂರುವ ಮರಗಳಾಗಿ ಬೆಳೆಯಬೇಕು. ಎಲ್ಲರಿಗೂ ನೆರಳು ನೀಡುವಂತಾಗಬೇಕೆಂದು ಜೆ.ಹೆಚ್.ಪಟೇಲ್ ಹೇಳಿದ್ದ ಮಾತನ್ನು ಟಿವಿ9 ಸ್ಟುಡಿಯೋದಲ್ಲಿ ಸ್ಮರಿಸಿದ ಸಿಎಂ ಸಿಎಂ ಬೊಮ್ಮಾಯಿ ಅರು ಜೆ.ಹೆಚ್.ಪಟೇಲ್ ಮಾತು ಈಗ ಅನುಸರಿಸುತ್ತಿದ್ದೇನೆ. ಹೂ ಕುಂಡ​ಗಳಲ್ಲಿರುವ ಶೋಕಿ ಗಿಡಗಳಾಗುವುದು ಬೇಡ. ಹೆಮ್ಮರವಾಗಿ ಬೆಳೆದು ಆಶ್ರಿತರಿಗೆ ನೆರಳು ನೀಡುವಂತಾಗಬೇಕು ಎಂದು ಬೊಮ್ಮಾಯಿ ಆಶಿಸಿದರು.

ಒಬ್ಬ ಅಣ್ಣ, ತಮ್ಮ, ತಂದೆಯಾಗಿ ರಕ್ಷಣೆಗೆ ನಿಲ್ಲುವೆ: ಸಿಎಂ ಬೊಮ್ಮಾಯಿ

ಪೊಲೀಸರು ಸಮಯಪ್ರಜ್ಞೆಯಿಂದ ಕೆಲಸ ಮಾಡಬೇಕು. ಪೊಲೀಸರು ಶೇ. 99ರಷ್ಟು ಒಳ್ಳೆಯ ಕೆಲಸ ಮಾಡಿರುತ್ತಾರೆ. ಯಾವುದೋ ಒಂದೆರಡು ಕೆಲಸದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತೆ. ಹಾಗಂತ ಪೊಲೀಸ್ ಇಲಾಖೆಯನ್ನು ದೂರಲು ಆಗಲ್ಲ ಎಂದು ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ಕಾಲೇಜುಗಳಲ್ಲಿ ಸೆಲ್ಫ್ ಡಿಫೆನ್ಸ್ ಪ್ರೋಗ್ರಾಂ ಮಾಡಿದ್ದೇವೆ. ಕೊರೊನಾ ಹಿನ್ನೆಲೆ ಆ ಕಾರ್ಯಕ್ರಮ ಮಾಡಲು ಆಗಿಲ್ಲ. ಶೀಘ್ರದಲ್ಲಿಯೇ ಸೆಲ್ಫ್ ಡಿಫೆನ್ಸ್ ಪ್ರೋಗ್ರಾಂ ಮಾಡುತ್ತೇವೆ. ವಿದ್ಯಾರ್ಥಿನಿಯರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಹೆಣ್ಣು ಮಕ್ಕಳ ರಕ್ಷಣೆಗಾಗಿ ಹೊಸ ಕಾರ್ಯಕ್ರಮ ಇದಾಗಿದೆ. ಹೆಣ್ಣುಮಕ್ಕಳ ಸುರಕ್ಷತೆಗೆ ಎಲ್ಲ ಕ್ರಮ ತೆಗೆದುಕೊಳ್ಳುತ್ತೇನೆ. ಒಬ್ಬ ಅಣ್ಣ, ತಮ್ಮ, ತಂದೆಯಾಗಿ ಕ್ರಮ ತೆಗೆದುಕೊಳ್ತೇನೆ ಎಂದು
ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಹೆಣ್ಣು ಮಕ್ಕಳಿಗೆ ಭರವಸೆ ನೀಡಿದರು.

ಸಿಎಂ ಬೊಮ್ಮಾಯಿ ಸ್ವಂತ ಊರಾದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿರುವ ವಿಚಾರವನ್ನು ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಗಮನ ಸೆಳೆದಾಗ ಅದಕ್ಕೆ ಸಿಎಂ ಬೊಮ್ಮಾಯಿ ನೀಡಿದ ಪ್ರತಿಕ್ರಿಯೆ ಹೀಗಿತ್ತು:

ಶಿಗ್ಗಾಂವಿ, ಬಂಕಾಪುರಕ್ಕೆ ವರದಾ ನದಿಯಿಂದ ನೀರು ವ್ಯವಸ್ಥೆಯಿದೆ. ಉಳಿದ ಕೆಲವೆಡೆ ಮಾತ್ರ ಕುಡಿಯುವ ನೀರಿನ ಘಟಕಗಳಿವೆ, ಹಾಗಂತ ಎಲ್ಲ ಕಡೆ ಸಮಸ್ಯೆ ಇದೆ ಎನ್ನುವುದಕ್ಕೆ ಆಗಲ್ಲ. ಶುದ್ಧ ನೀರಿನ ಘಟಕಗಳಲ್ಲಿ ಬಹಳ ಲೋಪಗಳು ಇವೆ. ನೀರಿನ ಘಟಕ ಆರಂಭಿಸುವಾಗಲೇ ಈ ಮಾತು ಹೇಳಿದೆ. ನೀರಿನ ಘಟಕಗಳ ನಿರ್ವಹಣೆ ಖಾಸಗಿಯವರಿಗೆ ಕೊಟ್ಟಿದ್ದಾರೆ.

ಒಂದು ಲೀಟರ್ ನೀರಿಗೆ 2 ರೂ. ಪಡೆದು ನಿರ್ವಹಣೆ ಮಾಡಲಾಗುತ್ತಿದೆ. ಕೆಲವರಿಗೆ ನಿರ್ವಹಣೆ ಮಾಡಲಾಗದೆ ಬಾಗಿಲು ಹಾಕಿದ್ದಾರೆ. ಹಿಂದಿನ ಸರ್ಕಾರದಲ್ಲಿ ಹಾಕಿರುವ ಕೆಲವು ಘಟಕಗಳು ಇವೆ. ಅಂತಹ ನೀರಿನ ಘಟಕಗಳು ಹಾಳಾಗಿವೆ. ಬೋರ್‌ವೆಲ್ ಇಲ್ಲದ ಕಡೆಯೂ ನೀರಿನ ಘಟಕ ಹಾಕಿದ್ದಾರೆ. ಇದರಿಂದ ಸಮಸ್ಯೆಯಾಗಿದೆ ಎಂದು ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ ಶುದ್ಧ ಕುಡಿಯುವ ನೀರು ಘಟಕದ ಟಿವಿ9 ಸ್ಟೋರಿ ಇಂಪ್ಯಾಕ್ಟ್ – ಸ್ಟುಡಿಯೋ ಲೈವ್ ನಲ್ಲೇ ಸಿಎಂ ಖಡಕ್ ಸೂಚನೆ

ಕುಡಿಯುವ ನೀರಿನ ಘಟಕ ಹಾಕಿ ಎಷ್ಟು ದಿನ ಆಗಿದೆ? ಇಂದು ಸಂಜೆಯ ವೇಳೆಗೆ ಮಾಹಿತಿ ನೀಡಿ ಎಂದು ಹಾವೇರಿ ಡಿಸಿ ಸಂಜಯ್ ಶೆಟ್ಟಣ್ಣನವರ್‌ಗೆ ಸಿಎಂ ಬೊಮ್ಮಾಯಿ ಇದೇ ವೇಳೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಹಾವೇರಿ ಜಿಲ್ಲಾಧಿಕಾರಿ ಸಂಜೆಯೊಳಗೆ ವರದಿ ಸಲ್ಲಿಸುತ್ತೇನೆಂದು ಮುಖ್ಯಮಂತ್ರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಹಾಳಾಗಿರುವ ಎಲ್ಲ ಘಟಕಗಳ ಮಾಹಿತಿ ನೀಡಿ. ದುರಸ್ತಿ ಮಾಡುವ ಕೆಲಸವೂ ಆಗಬೇಕೆಂದು ಸೂಚನೆ ನೀಡಿದ ಸಿಎಂ ಬೊಮ್ಮಾಯಿ ಕೆಲವು ಘಟಕಗಳಲ್ಲಿ ನೀರೇ ಬರುವುದಿಲ್ಲ, ಅದೇಕೆ ಬೇಕು? ಅಂತಹ ಘಟಕಗಳನ್ನು ತೆಗೆದುಹಾಕಿ ಎಂದೂ ಸೂಚಿಸಿದರು.

Also Read:

24 ಗಂಟೆಯಲ್ಲಿ ಪರಿಹಾರ ನಿಧಿ ಚೆಕ್​ ವಿತರಣೆಗೆ ಟಿವಿ9 ಸ್ಟುಡಿಯೋ ದಲ್ಲಿ ಜಿಲ್ಲಾಧಿಕಾರಿಗೆ ಆದೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ

(Will follow JH Patel words says Karnataka Chief Minister Basavaraj Bommai during Exclusive Interview with TV9 Kannada)

Click on your DTH Provider to Add TV9 Kannada