Ganesh Chaturthi 2021: ಸಾರ್ವಜನಿಕ ಗಣೇಶೋತ್ಸವಕ್ಕೆ ಸಿಗುತ್ತಾ ಅನುಮತಿ? ಇಂದು ಸಭೆ ಕರೆದ ಸಿಎಂ ಬೊಮ್ಮಾಯಿ‌

ಗೌರಿ ಗಣೇಶ ಹಬ್ಬ ಆಚರಣೆಗೆ ಕೌಂಟ್ಡೌನ್ ಶುರುವಾಗಿದೆ. ಕೊರೊನಾ ಕಾಟವೂ ಕಡಿಮೆ ಆಗಿದೆ. ಹೀಗಾಗಿ ಯುವಕರು ಏರಿಯಾದಲ್ಲಿ ಗಣೇಶ ಕೂರಿಸಿ, ಎಂಜಾಯ್ ಮಾಡೋಕೆ ಸೈಲೆಂಟಾಗಿ ಪ್ಲ್ಯಾನ್ ಮಾಡ್ತಿದ್ದಾರೆ. ಸರ್ಕಾರ ಗಣೇಶ ಉತ್ಸವಕ್ಕೆ ಅನುಮತಿ ಕೊಡುತ್ತಾ ಅಂತಾ ಕಾಯುತ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಇವತ್ತು ಒಂದು ನಿರ್ಧಾರಕ್ಕೆ ಬರಲಿದೆ. ಅದ್ರ ಡಿಟೇಲ್ಸ್ ಇಲ್ಲಿದೆ.

Ganesh Chaturthi 2021: ಸಾರ್ವಜನಿಕ ಗಣೇಶೋತ್ಸವಕ್ಕೆ ಸಿಗುತ್ತಾ ಅನುಮತಿ? ಇಂದು ಸಭೆ ಕರೆದ ಸಿಎಂ ಬೊಮ್ಮಾಯಿ‌
ಗಣೇಶ ವಿಗ್ರಹ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: Aug 30, 2021 | 7:36 AM

ಬೆಂಗಳೂರು: ಡಿಜೆ ಮ್ಯೂಸಿಕ್.. ತಮಟೆ ಸೌಂಡ್.. ಜೊತೆಯಲ್ಲಿ ಗಲ್ಲಿ ಬಾಯ್ಸ್.. ಊರಿನ ತುಂಬಾ ಹಬ್ಬವೋ ಹಬ್ಬ.. ನಿಜಕ್ಕೂ ಗಣೇಶ ಹಬ್ಬ ಎಂಟ್ರಿ ಕೊಟ್ರೆ ಮುಗೀತ್.. ಒಂದು ತಿಂಗಳು ಯುವಕರು ಫುಲ್ ಎಂಜಾಯ್ ಮಾಡ್ತಾರೆ. ಆದ್ರೆ, ಕೊರೊನಾ ಕಾಟದಿಂದ ಕಳೆದ ವರ್ಷ ಉತ್ಸವಕ್ಕೆ ಬ್ರೇಕ್ ಬಿದ್ದಿತ್ತು. ಆದ್ರೆ, ಈ ವರ್ಷ ಸೋಂಕಿನ ಸಂಖ್ಯೆ ಕಡಿಮೆ ಆಗಿರೋದ್ರಿಂದ ಸಾಮೂಹಿಕ ಗಣೇಶೋತ್ಸವಕ್ಕೆ ಅನುಮತಿ ಸಿಗುತ್ತಾ ಅಂತಾ ಎಲ್ರು ಕಾಯುತ್ತಿದ್ದಾರೆ.

ಇಂದು ಮಹತ್ವದ ಸಭೆ ಕರೆದ ಸಿಎಂ ಬೊಮ್ಮಾಯಿ‌ ರಾಜ್ಯದಲ್ಲಿ ಸಂಪೂರ್ಣವಾಗಿ ಕೊರೊನಾ ಸೋಂಕು ಕಡಿಮೆಯಾಗಿಲ್ಲ. ಮೂರನೇ ಅಲೆ ಭೀತಿ ಬೇರೆ ಎದುರಾಗಿದೆ. ಇದ್ರ ಬೆನ್ನಲ್ಲೇ ಗೌರಿ ಗಣೇಶ ಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿದೆ. ಆದ್ರೆ, ಸಾಮೂಹಿಕ ಗಣೇಶ ಆಚರಣೆ ಬಗ್ಗೆ ಸರ್ಕಾರ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ರಾಜ್ಯದ ಜನ ಸಾಮೂಹಿಕವಾಗಿ ಗಣೇಶೋತ್ಸವ ಆಚರಣೆ ಮಾಡ್ಬೇಕಾ ಅಥವಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಈ ಗೊಂದಲಕ್ಕೆ ಇವತ್ತು ಸಂಜೆ ತೆರೆ ಬೀಳುವ ಸಾಧ್ಯತೆ ಇದೆ. ಯಾಕಂದ್ರೆ, ಸಾಮೂಹಿಕ ಗಣೇಶ ಆಚರಣೆ ವಿಚಾರವಾಗಿ ಇವತ್ತು ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಕರೆದಿದ್ದಾರೆ. ಇವತ್ತು ಸಂಜೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 4 ಗಂಟೆಗೆ ಸಭೆ ನಡೆಯಲಿದ್ದು, ಸಿಎಂ, ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಆರೋಗ್ಯ ಸಚಿವರು, ಬಿಬಿಎಂಪಿ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ಕೂಡ ಭಾಗಿಯಾಗಲಿದ್ದಾರೆ. ಇಷ್ಟೇ ಅಲ್ಲ, ಗಣೇಶೋತ್ಸವ ಆಚರಣೆಗೆ ಕೆಲ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.

ಇನ್ನು ಕಳೆದ ವರ್ಷ ರಾಜ್ಯದಲ್ಲಿ ಕೊವಿಡ್ ಅಟ್ಟಹಾಸ ಹೆಚ್ಚಾಗಿತ್ತು. ಇದ್ರಿಂದ ಸಾಮೂಹಿಕ ಗಣೇಶ ಆಚರಣೆಗೆ ಸರ್ಕಾರ ಅವಕಾಶ ಕೊಟ್ಟಿರಲಿಲ್ಲ. ಆದ್ರೆ, ಈ ಬಾರಿ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಇದ್ದು, ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಸಾಕಷ್ಟು ಒತ್ತಡ ಇದೆ. ಅಷ್ಟೇ ಅಲ್ಲದೆ ಗಣೇಶ ಆಚರಣೆಗೆ ಅವಕಾಶ ಕೊಡುವಂತೆ ವಿಪಕ್ಷ ನಾಯಕರು ಹಾಗೂ ಸ್ವಪಕ್ಷದವರು ಕೂಡ ಸಿಎಂಗೆ ಒತ್ತಡ ಹಾಕುತ್ತಿದ್ದಾರೆ. ಇದರ ಜೊತೆಗೆ ಹಬ್ಬ ಆಚರಣೆಗೆ ಸಾಕಷ್ಟು ವಿರೋಧವೂ ಕೂಡ ಕೇಳಿ ಬರುತ್ತಿದೆ. ಹೀಗಾಗಿ ಇವತ್ತು ಗಣೇಶ ಹಬ್ಬ ಆಚರಣೆ ವಿಚಾರವಾಗಿ ಸಿಎಂ ಮಹತ್ವದ ಸಭೆ ಕರೆದಿದ್ದು, ಮಹತ್ವದ ನಿರ್ಧಾರಕ್ಕೆ ಬರಲಿದ್ದಾರೆ.

ಸದ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಸಾಕಷ್ಟು ಪರ-ವಿರೋಧ ಮತ್ತು 3ನೇ ಅಲೆ ಅತಂಕ ಎದುರಾಗಿದೆ. ಹೀಗಾಗಿ ಇವತ್ತಿನ ಸಭೆಯಲ್ಲಿ ಸಿಎಂ ಯಾವ ನಿರ್ಧಾರಕ್ಕೆ ಬರಲಿದ್ದಾರೆ ಅನ್ನೋ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: 1 ರಿಂದ 8ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುವ ಕುರಿತು ಮಹತ್ವದ ಸಭೆ: ಚರ್ಚೆಯಾಗಲಿರುವ ಪ್ರಮುಖ ಸಂಗತಿಗಳೇನು?