ಬೆಂಗಳೂರು ಸೆ.17: ಒಂದು ದಿನ ಕಳೆದರೇ (ಸೆ.18) ರಂದು ರಾಜ್ಯಾದ್ಯಂತ ಗಣೇಶ ಚತುರ್ಥಿ (Ganesh Chaturthi) ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮನೆ, ಬೀದಿಯಲ್ಲಿ ಗಣಪತಿಯನ್ನು ಕೂರಿಸಲು ಜನರು ಈಗಾಗಲೆ ಸಿದ್ದತೆ ನಡೆಸಿದ್ದಾರೆ. ಮನೆಗಳಲ್ಲಿ ಬಣ್ಣದ ಲೈಟು ಇತ್ಯಾದಿಗಳಿಂದ ಶೃಂಗರಿಸಲಾಗುತ್ತಿದೆ. ಬೀದಿಗಳಲ್ಲಿ ಪೆಂಡಾಲ್ ಹಾಕಿ ವೇದಿಕೆಯನ್ನು ತಯಾರು ಮಾಡುತ್ತಿದ್ದಾರೆ. ರಾಜಧಾನಿಯಲ್ಲೂ ಗೌರಿ-ಗಣೇಶ (Gowri-Ganesha) ಹಬ್ಬಕ್ಕೆ ತಯಾರಿ ಜೋರಾಗಿದೆ. ಈ ಸಂಬಂಧ ಸಾಮಾಗ್ರಿಗಳ ಖರೀದಿಗೆ ಕೆ.ಆರ್.ಮಾರ್ಕೆಟ್ಟೆಯಲ್ಲಿ ಜನ ತುಂಬಿದ್ದಾರೆ.
ಹಬ್ಬದ ವಸ್ತುಗಳ ಖರೀದಿಗೆ ಮುಂದಾದ ನಗರದ ಜನರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ. ಒಂದಡೆ ಬರಗಾಲ, ಮತ್ತೊಂದಡೆ ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರ ಗಗನಕ್ಕೇರಿದೆ.
ಇದನ್ನೂ ಓದಿ: ಗಣೇಶ ಚತುರ್ಥಿ ಹಬ್ಬ ಹಿನ್ನೆಲೆ ಖಾಸಗಿ ಬಸ್ಗಳ ಟಿಕೆಟ್ ದರದಲ್ಲಿ ಭಾರೀ ಹೆಚ್ಚಳ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ