ಬೆಂಗಳೂರು: ಬೆಂಗಳೂರಿನಲ್ಲಿ 16 ವರ್ಷದ ಬಾಲಕಿ ಮೇಲೆ ಗ್ಯಾಂಗ್ರೇಪ್ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಾಲಕಿ ಮೇಲೆ 8 ಜನರಿಂದ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಮೊದಲು ವಿಡಿಯೋ ಮಾಡಿ ದೌರ್ಜನ್ಯ ನಡೆಸಿದ್ದ. ನಂತರ, ಈ ವಿಚಾರ ತಿಳಿಸಿದ್ರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ. ಬಳಿಕ ವಿಡಿಯೋ ತೋರಿಸಿ ಸ್ನೇಹಿತರ ಜೊತೆ ಗ್ಯಾಂಗ್ರೇಪ್ ಮಾಡಿದ್ದ ಎಂದು ತಿಳಿದುಬಂದಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ವಿಷಯ ತಿಳಿದು ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಪೋಷಕರ ದೂರಿನನ್ವಯ ಪೊಲೀಸರು 7 ಜನರನ್ನ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರಿಂದ ಶೋಧಕಾರ್ಯ ಭರದಿಂದ ಸಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಕೂಲಿ ಕೆಲಸಕ್ಕೆ ಬಂದು ಚಿನ್ನದ ಸರ ಕದ್ದಿದ್ದ ಆರೋಪಿ ಬಂಧನ
ಕೂಲಿ ಕೆಲಸಕ್ಕೆ ಬಂದು ಚಿನ್ನದ ಸರ ಕದ್ದಿದ್ದ ಆರೋಪಿ ಬಂಧನ ಮಾಡಲಾಗಿದೆ. ವೆಂಕಟೇಶ್ ಎಂಬಾತನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಲಘುಮೇನಹಳ್ಳಿ ಕ್ರಾಸ್ನ ಜಯಕಾಂತ್ ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. 120 ಗ್ರಾಂ ಮಾಂಗಲ್ಯ ಸರ ಕದ್ದು ಎಸ್ಕೇಪ್ ಆಗಿದ್ದ ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಾರವಾರ: ತಂತಿ ಬೆಲೆಗೆ ಸಿಲುಕಿ ಹೆಣ್ಣು ಚಿರತೆ ಸಾವು
ತಂತಿ ಬೆಲೆಗೆ ಸಿಲುಕಿ ಹೆಣ್ಣು ಚಿರತೆ ಸಾವನ್ನಪ್ಪಿದ ದುರ್ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾರ ತಾಲೂಕಿನ ಹಡಿನಬಾಳ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ. ಬೇಲಿಗೆ ಹಾಕಿದ್ದ ತಂತಿಗೆ ಸಿಲುಕಿ ಉಸುರುಗಟ್ಟಿ ಚಿರತೆ ಸಾವನ್ನಪ್ಪಿದೆ. ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಹಾಕಿದ್ದ ತಂತಿಗೆ ಚಿರತೆ ಬಲಿಯಾಗಿದೆ. ಸ್ಥಳಕ್ಕೆ ಹೊನ್ನಾವರ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಮೊದಲು, ಕೆಲ ದಿನಗಳ ಹಿಂದಷ್ಟೇ ಉತ್ತರ ಕನ್ನಡದ ಯಲ್ಲಾಪುರ ಭಾಗದಲ್ಲಿ ಗರ್ಭಿಣಿ ಚಿರತೆಯೊಂದು ಸಾವನ್ನಪ್ಪಿತ್ತು.
ರಾಯಚೂರು: ಸೀಬೆ ಹಣ್ಣಿನ ತೋಟಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು
ಕಿಡಿಗೇಡಿಗಳು ಸೀಬೆ ಹಣ್ಣಿನ ತೋಟಕ್ಕೆ ಬೆಂಕಿಯಿಟ್ಟ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಸಂಭವಿಸಿದೆ. ನಾಲ್ಕು ಎಕರೆ ಸೀಬೆ ತೋಟ ಸುಟ್ಟು ಕರಕಲಾಗಿದೆ. ಚನ್ನಬಸವ ಪಾಟೀಲ್ ಎಂಬುವವರಿಗೆ ಸೇರಿದ ಸೀಬೆ ತೋಟಕ್ಕೆ ಬೆಂಕಿ ಇಡಲಾಗಿದೆ. ಇಸ್ರೇಲ್ ಮಾದರಿಯಲ್ಲಿ ಬೆಳೆಯಲಾಗಿದ್ದ ಸೀಬೆಗೆ ಬೆಂಕಿ ಇಟ್ಟು ನಾಶಪಡಿಸಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಹಣ ಪಾವತಿಸಿ ಮೊಬೈಲ್ ಬುಕ್ ಮಾಡಿದರೆ ಸಿಕ್ಕಿದ್ದು ರಟ್ಟಿನ ಚೂರುಗಳು.. ಆನ್ಲೈನ್ ಶಾಪಿಂಗ್ ಗ್ರಾಹಕರೇ ಎಚ್ಚರ!
ಇದನ್ನೂ ಓದಿ: ಮುಸ್ಲಿಂರ ಜೊತೆ ಮದುವೆಯಾಗುವ ಕುಟುಂಬವನ್ನು ಬಹಿಷ್ಕರಿಸಿ; ಸರ್ಕಾರಿ ಲೆಟರ್ ಹೆಡ್ನಲ್ಲೇ ಪತ್ರ!
Published On - 11:34 am, Sat, 9 April 22