ಬೆಂಗಳೂರು ರಸ್ತೆ ಸ್ವಚ್ಛತೆಗೆ ಟೆಕ್ನಾಲಜಿ ಟಚ್ಗೆ ಪ್ಲಾನ್, ಟ್ರಯಲ್ ಮಾಡಿರೋ ಜಿಬಿಎ!

ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಸ್ಥಿತಿ ಹೇಳ ತೀರದು. ಒಂದೆಡೆ ಗುಂಡಿ, ಮತ್ತೊಂದೆಡೆ ಧೂಳು ಟ್ರಾಫಿಕ್​​ನಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಇದೀಗ ಬೆಂಗಳೂರು ನಗರದಲ್ಲಿ ರಸ್ತೆಗಳ ಸ್ವಚ್ಛತೆಗಾಗಿ ತಂತ್ರಜ್ಞಾನದ ಸ್ಪರ್ಶ ನೀಡಲು ಮಹಾನಗರ ಪಾಲಿಕೆಗಳು ಮುಂದಾಗಿದ್ದು, ಈಗಾಗಲೇ ಜಿಬಿಎ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಟ್ರಯಲ್ ಮಾಡಿದೆ.

ಬೆಂಗಳೂರು ರಸ್ತೆ ಸ್ವಚ್ಛತೆಗೆ ಟೆಕ್ನಾಲಜಿ ಟಚ್ಗೆ ಪ್ಲಾನ್, ಟ್ರಯಲ್ ಮಾಡಿರೋ ಜಿಬಿಎ!
Sweeping Machines (1)
Edited By:

Updated on: Sep 08, 2026 | 9:44 PM

ಬೆಂಗಳೂರು, (ಸೆಪ್ಟೆಂಬರ್ 08): ಬೆಂಗಳೂರು ನಗರದಲ್ಲಿ ರಸ್ತೆಗಳ ಸ್ವಚ್ಛತೆಗಾಗಿ ತಂತ್ರಜ್ಞಾನದ ಸ್ಪರ್ಶ ನೀಡಲು ಮಹಾನಗರ ಪಾಲಿಕೆಗಳು ಮುಂದಾಗಿವೆ. ಇದರೊಂದಿಗೆ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಧೂಳು ಮತ್ತು ಕಸದ ಹಾವಳಿಗೆ ಬ್ರೇಕ್ ಹಾಕಲು ಪಾಲಿಕೆ ಮುಂದಾಗಿದೆ.  ಹೌದು. ಬೆಂಗಳೂರು ದಕ್ಷಿಣ ಹಾಗೂ ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳನ್ನು ಸ್ವಚ್ಛಗೊಳಿಸಲು ಅತ್ಯಾಧುನಿಕ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಫೀಲ್ಡ್ ಟ್ರಯಲ್ ಮತ್ತು ತಾಂತ್ರಿಕ ಮೌಲ್ಯಮಾಪನ ಪ್ರಕ್ರಿಯೆ ಭರದಿಂದ ಸಾಗಿದೆ.

48 ಯಂತ್ರಗಳನ್ನು ಖರೀದಿ ಮಾಡಲು ನಿರ್ಧಾರ

ಬೆಂಗಳೂರು ದಕ್ಷಿಣ ಹಾಗೂ ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯ ಪ್ರಮುಖ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಅತ್ಯಾಧುನಿಕ ‘ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ’ ಫೀಲ್ಡ್ ಟ್ರಯಲ್ ಭರದಿಂದ ಸಾಗಿದೆ. ಕ್ಯಾಬಿನೆಟ್ ಅನುಮೋದನೆಯಂತೆ ಒಟ್ಟು 48 ಯಂತ್ರಗಳನ್ನು ಖರೀದಿ ಮಾಡಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಈಗಾಗಲೇ ಔಟರ್ ರಿಂಗ್ ರೋಡ್, ವೈಟ್‌ಫೀಲ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮುಖ್ಯ ರಸ್ತೆ ಹಾಗೂ ಮೇಲ್ಸೇತುವೆಗಳ ಮೇಲೆ ಪ್ರಾಯೋಗಿಕವಾಗಿ ಈ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಜಯನಗರದ ಸೌತ್ ಎಂಡ್ ಸರ್ಕಲ್ ಹಾಗೂ ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ತಾಂತ್ರಿಕ ಮೌಲ್ಯಮಾಪನ ತಂಡವು ಪ್ರತ್ಯಕ್ಷ ಪರಿಶೀಲನೆ ನಡೆಸಿದೆ.

ಇದನ್ನೂ ಓದಿ: ಗ್ಯಾಸ್, ಸಕ್ಕರೆ-ಬೆಲ್ಲ ಬೆಲೆ ಏರಿಕೆ ಎಫೆಕ್ಟ್​: ಕಾಫಿ-ಟೀ ಪ್ರಿಯರಿಗೆ ಬಿಗ್ ಶಾಕ್!

ವಾಹನ ಸಂಚಾರವೂ ಸುಗಮ

ಒಟ್ಟು 5 ದಿನಗಳ ಕಾಲ ನಡೆಸಲಾಗುವ ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಂತ್ರಗಳ ಸಾಮರ್ಥ್ಯ ಮತ್ತು ಪರಿಣಾಮಕಾರಿಯಾದ ಕೆಲಸವನ್ನು ಪರಿಶೀಲಿಸಲಾಗುತ್ತದೆ. ಈ ಆಧುನಿಕ ತಂತ್ರಜ್ಞಾನ ಸಂಪೂರ್ಣವಾಗಿ ಜಾರಿಗೆ ಬಂದರೆ ದಕ್ಷಿಣ ಹಾಗೂ ಉತ್ತರ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಧೂಳಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಇದರಿಂದ ಸಾರ್ವಜನಿಕ ಆರೋಗ್ಯ ಸುಧಾರಿಸುವುದಲ್ಲದೆ, ವಾಹನ ಸಂಚಾರವೂ ಸುಗಮವಾಗಲಿದೆ.
🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE
ಒಟ್ಟಾರೆಯಾಗಿ, ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಇಂತಹ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯ ತುರ್ತಾಗಿ ಇತ್ತು. ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳು ಯಶಸ್ವಿಯಾಗಿ ಜಾರಿಗೆ ಬಂದರೆ, ಧೂಳಿನಿಂದ ಮುಕ್ತಿ ಸಿಗುವುದಷ್ಟೇ ಅಲ್ಲದೇ ನಮ್ಮ ರಸ್ತೆಗಳು ಮತ್ತಷ್ಟು ಸುಂದರ ಹಾಗೂ ಸ್ವಚ್ಛವಾಗಲಿವೆ ಎಂಬುದರಲ್ಲಿ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us