AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಪಬ್​ ಮುಂದೆ ಯುವಕ ಯುವತಿಯರ ಗಲಾಟೆ: ವಿಡಿಯೋ ವೈರಲ್

ಬೆಂಗಳೂರು ನಗರದ ಪಬ್‌ ಒಂದರಲ್ಲಿ ಯುವಕ-ಯುವತಿಯರ ಮಧ್ಯೆ ಜೋರು ಗಲಾಟೆ ನಡೆದಿದೆ. ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಬರ್ಗರ್‌ ಸೈನೆರ್‌ (Burger Seigneur) ಪಬ್ ಎದುರು ಯುವಕ-ಯುವತಿಯರ ಮಧ್ಯೆ ಗಲಾಟೆ ನಡೆದಿದ್ದು, ಈ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಬೆಂಗಳೂರಿನ ಪಬ್​ ಮುಂದೆ ಯುವಕ ಯುವತಿಯರ ಗಲಾಟೆ: ವಿಡಿಯೋ ವೈರಲ್
Jagadisha B
| Edited By: |

Updated on:Oct 22, 2023 | 2:48 PM

Share

ಬೆಂಗಳೂರು, (ಅಕ್ಟೋಬರ್ 22): ಡ್ರಂಕನ್ & ಡ್ಯಾಡಿ ಪಬ್ ಮುಂದೆ ಯುವತಿಯರ ಹುಚ್ಚಾಟ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಪಬ್​ವೊಂದರ ಮುಂದೆ ಮತ್ತೊಂದು ಗಲಾಟೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು.. ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಬರ್ಗರ್‌ ಸೈನೆರ್‌ (Burger Seigneur) ಪಬ್ ಎದುರು ಯುವಕ-ಯುವತಿಯರ ಮಧ್ಯೆ ಗಲಾಟೆ ನಡೆದಿದ್ದು, ಈ ವಿಡಿಯೊ ಈಗ ವೈರಲ್‌ ಆಗಿದೆ. ಕಾಲೇಜು ಯುವಕರು ಹಾಗೂ ಯುವತಿಯರು ರಾತ್ರಿ ಪಬ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಹೋಗುವಾಗ ಈ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಮೊದಲು ಕೆಲ ಯುವಕರು ಯುವತಿಯರಿಗೆ ಅಶ್ಲೀಲ ಪದಗಳಿಂದ ನಿಂದಿಸಿದೆ ಎನ್ನಲಾಗಿದೆ.. ಇದರಿಂದ ಕೆರಳಿದ ಯುವತಿಯರು, ಯುವಕರ ಮೇಲೆ ಮುಗಿಬಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇದೇ ವೇಳೆ ಯುವತಿಯರ ಗೆಳೆಯರು ಹಾಗೂ ಚುಡಾಯಿಸಿದ ಯುವಕರ ಮಧ್ಯೆ ತಳ್ಳಾಟ, ನೂಕಾಟ ನಡೆದಿದೆ. ಯುವತಿಯರು ಕೂಡ ಯುವಕರನ್ನು ತಳ್ಳುವ ದೃಶ್ಯಗಳು ವಿಡಿಯೋನಲ್ಲಿ ಸೆರೆಯಾಗಿವೆ. ರಸ್ತೆ ಬಳಿಯೇ ಎರಡೂ ಗುಂಪುಗಳು ಹೊಡೆದಾಡಿಕೊಂಡಿದ್ದು, ಕುಡಿದ ಮತ್ತಿನಲ್ಲಿ ರಂಪಾಟ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನಿಮ್ಮಲ್ಲಿ ನರ್ಸ್‌ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ: ಕಾಂಗ್ರೆಸ್​ ಶಾಸಕನ ಮಾತು ವೈರಲ್

ಯುವಕನೊಬ್ಬ ಗಾರ್ಡನ್‌ ಏರಿಯಾದಲ್ಲಿ ಬಿದ್ದಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕ ಹಾಗೂ ಯುವತಿಯರ ರಂಪಾಟದ ವಿಡಿಯೊ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಡರಾತ್ರಿವರೆಗೆ ಪಾರ್ಟಿ ಮಾಡಿ, ಕುಡಿದ ಮತ್ತಿನಲ್ಲಿ ಹೀಗೆ ಮಾಡುವುದು ಅಸಭ್ಯತನದ ಪರಮಾವಧಿ ಎಂದು ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಯುವತಿಯರನ್ನು ಅಸಭ್ಯ ಪದಗಳಿಂದ ನಿಂದಿಸಿರುವ ಯುವಕರ ನಡೆಯ ಕುರಿತು ಕೂಡ ಆಕ್ರೋಶ ವ್ಯಕ್ತವಾಗಿದೆ.

ಕೊನೆಗೆ ಪಬ್‌ ಸಿಬ್ಬಂದಿ ಯುವಕ-ಯುವತಿಯರ ನಡುವಿನ ಜಗಳ ಬಿಡಿಸಿ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Published On - 2:46 pm, Sun, 22 October 23

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು