Global Airport Rankings: ಕಾರ್ಯಕ್ಷಮತೆ, ಸಮಯೋಚಿತ ಸೇವೆ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕವಾಗಿ 3ನೇ ರ‍್ಯಾಂಕ್

| Updated By: Ganapathi Sharma

Updated on: Jan 03, 2024 | 11:07 AM

ಶೇ 84.08 ರಷ್ಟು ಅಂಕ ಗಳಿಸುವ ಮೂಲಕ, ಬೆಂಗಳೂರಿನ ವಿಮಾನ ನಿಲ್ದಾಣವು ಅತ್ಯುತ್ತಮವಾದವುಗಳಲ್ಲಿ ಉತ್ತಮ ಸ್ಥಾನ ಗಳಿಸಿದ್ದರೆ, ಅಮೆರಿಕದ ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೈದರಾಬಾದ್ ವಿಮಾನ ನಿಲ್ದಾಣ ನಂತರದ ಸ್ಥಾನಗಳಲ್ಲಿವೆ.

Global Airport Rankings: ಕಾರ್ಯಕ್ಷಮತೆ, ಸಮಯೋಚಿತ ಸೇವೆ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕವಾಗಿ 3ನೇ ರ‍್ಯಾಂಕ್
ಬೆಂಗಳೂರು ವಿಮಾನ ನಿಲ್ದಾಣ
Follow us on

ಬೆಂಗಳೂರು, ಜನವರಿ 3: ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸಮಯೋಚಿತ ಸೇವೆ ವಿಭಾಗದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport Bengaluru) ಜಾಗತಿಕವಾಗಿ 3ನೇ ರ‍್ಯಾಂಕ್ ಪಡೆದಿದೆ. ಜಾಗತಿಕ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳ ವಾರ್ಷಿಕ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಕೇಂದ್ರೀಕರಿಸಿದ ‘ಸಿರಿಯಮ್’ ಬಿಡುಗಡೆ ಮಾಡಿದ ವರದಿಯು ಭಾರತೀಯ ವಾಯುಯಾನ ಘಟಕಗಳ ಗಮನಾರ್ಹ ಸ್ಥಾನಮಾನವನ್ನು ಎತ್ತಿ ತೋರಿಸಿದೆ. ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ಮೂರು ಭಾರತೀಯ ವಿಮಾನ ನಿಲ್ದಾಣಗಳು ತಮ್ಮ ಸಮರ್ಥ ನಿರ್ವಹಣೆ ಮತ್ತು ಸಮಯಪಾಲನೆಗಾಗಿ ವಿಶ್ವದ ಅಗ್ರ 10 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಕಂಡುಕೊಂಡಿವೆ.

ಶೇ 84.08 ರಷ್ಟು ಅಂಕ ಗಳಿಸುವ ಮೂಲಕ, ಬೆಂಗಳೂರಿನ ವಿಮಾನ ನಿಲ್ದಾಣವು ಅತ್ಯುತ್ತಮವಾದವುಗಳಲ್ಲಿ ಉತ್ತಮ ಸ್ಥಾನ ಗಳಿಸಿದ್ದರೆ, ಅಮೆರಿಕದ ಮಿನ್ನಿಯಾಪೋಲಿಸ್ ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೈದರಾಬಾದ್ ವಿಮಾನ ನಿಲ್ದಾಣ ನಂತರದ ಸ್ಥಾನಗಳಲ್ಲಿವೆ.

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣವು ಶೇ 83.91 ರಷ್ಟು ಅಂಕ ಗಳಿಸಿ ಮಧ್ಯಮ ಗಾತ್ರದ ವಿಮಾನ ನಿಲ್ದಾಣಗಳಲ್ಲಿ 9 ನೇ ಸ್ಥಾನದಲ್ಲಿದೆ.

ಇಂಡಿಗೋ ವಿಮಾನಯಾನ ಸಂಸ್ಥೆಯು ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯ ವಿಮಾನಗಳನ್ನು ನಿರ್ವಹಿಸುವಲ್ಲಿ ಮುಂಚೂಣಿಯಲ್ಲಿದೆ. ಇದು ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಗಳಲ್ಲಿ 8 ನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ವಾಯುಯಾನ ಉದ್ಯಮದಲ್ಲಿ ದೇಶದ ಬೆಳೆಯುತ್ತಿರುವ ಪ್ರಭಾವವನ್ನು ಒತ್ತಿಹೇಳಿದೆ. ‘ಸಿರಿಯಮ್‌’ನ ಮೌಲ್ಯಮಾಪನವು, ಆಗಮನ ಅಥವಾ ನಿರ್ಗಮನದಲ್ಲಿ 15-ನಿಮಿಷದ ವಿಳಂಬವನ್ನು ಸಮಯಪಾಲನೆಯ ಮೇಲೆ ಪರಿಣಾಮ ಬೀರುವ ಅಂಶವೆಂದು ಪರಿಗಣಿಸಿದೆ. ಜಾಗತಿಕ ಮಟ್ಟದಲ್ಲಿ ವಾಯುಯಾನ ಕಾರ್ಯಕ್ಷಮತೆಯನ್ನು ನಿರ್ಣಯಿಸುವಲ್ಲಿ ಅನ್ವಯಿಸಲಾದ ಕಠಿಣ ಮಾನದಂಡಗಳನ್ನು ಇದು ತೋರಿಸುತ್ತದೆ.

ಇದನ್ನೂ ಓದಿ: 5 ದಿನಗಳಲ್ಲಿ ಬೆಂಗಳೂರು ಏರ್​ಪೋರ್ಟ್​ ಕಸ್ಟಮ್ಸ್‌ ಅಧಿಕಾರಿಗಳಿಂದ 2 ಕೋಟಿ ರೂ. ಮೊತ್ತದ ಚಿನ್ನಾಭರಣ ವಶ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ದೊರೆತಿರುವ ಮೂರನೇ ಸ್ಥಾನವು ವಿಮಾನ ನಿಲ್ದಾಣದ ಉತ್ಕೃಷ್ಟತೆಗೆ ಮತ್ತು ಸ್ಥಿರವಾದ ಬದ್ಧತೆಗೆ ಮತ್ತೊಂದು ಪುರಾವೆಯಾಗಿದೆ. ಇದು ಉನ್ನತ-ಶ್ರೇಣಿಯ ವಾಯುಯಾನ ಕೇಂದ್ರವಾಗಿ ವಿಮಾನ ನಿಲ್ದಾಣದ ಸ್ಥಾನಮಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ವಿಮಾನ ನಿಲ್ದಾಣ ಆಡಳಿತ ಅಭಿಪ್ರಾಯಪಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ