Eye Donation: ಹೊಸ ವರ್ಷದಂದು ಕಣ್ಣುದಾನ ಮಾಡಿ ಮಾದರಿಯಾದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್

ಹೊಸ ವರ್ಷದ ಶುಭ ದಿನದಂದು ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಮಾಡಿ ಪೊಲೀಸರಿಗೆ ಕಮಿಷನರ್ ದಯಾನಂದ್ ಅವರು ಹಲವರಿಗೆ ಮಾದರಿ ಆಗಿದ್ದಾರೆ. ನಾರಾಯಣ ನೇತ್ರಾಲಯ ರಾಜ್ ಕುಮಾರ್ ನೇತ್ರದಾನ ಕೇಂದ್ರ ಕಮಿಷನರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದೆ.

Eye Donation: ಹೊಸ ವರ್ಷದಂದು ಕಣ್ಣುದಾನ ಮಾಡಿ ಮಾದರಿಯಾದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್
ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್
Follow us
Shivaprasad
| Updated By: ಆಯೇಷಾ ಬಾನು

Updated on: Jan 03, 2024 | 9:55 AM

ಬೆಂಗಳೂರು, ಜ.03: ಹೊಸ ವರ್ಷಕ್ಕೆ (New Year) ವಿಶ್ ಮಾಡಲು ಬರುವ ಕಿರಿಯ ಅಧಿಕಾರಿಗಳು ಬೊಕ್ಕೆ, ಸಿಹಿ ತಿನಿಸು ತರದೆ ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು ಸೂಚನೆ ನೀಡುವ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ (B Dayanand) ಅವರು ಎಲ್ಲರಿಗೂ ಮಾದರಿಯಾಗಿದ್ದರು. ಈಗ ಅದೇ ಹೆಜ್ಜೆಯಲ್ಲಿ ಸಾಗಿ ಮತ್ತೊಂದು ಮಾದರಿ ಕಾರ್ಯ ಮಾಡಿದ್ದಾರೆ. ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ (Dr Rajkumar Eye Bank) ಕಣ್ಣುದಾನ ಮಾಡಿದ್ದಾರೆ.

ಹೊಸ ವರ್ಷದ ಶುಭ ದಿನದಂದು ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಮಾಡಿ ಪೊಲೀಸರಿಗೆ ಕಮಿಷನರ್ ದಯಾನಂದ್ ಅವರು ಹಲವರಿಗೆ ಮಾದರಿ ಆಗಿದ್ದಾರೆ. ನಾರಾಯಣ ನೇತ್ರಾಲಯ ರಾಜ್ ಕುಮಾರ್ ನೇತ್ರದಾನ ಕೇಂದ್ರ ಕಮಿಷನರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದೆ. ಜೊತೆಗೆ ಅಂದೇ ಅನೇಕ ಪೊಲೀಸ್ ಅಧಿಕಾರಿಗಳು ಕಣ್ಣುದಾನ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತ ದಯಾನಂದ್ ಅವರು ತನ್ಮ ಎಕ್ಸ್(ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ನಗರ ಕಮಿಷನರ್​ ಮಾದರಿ ನಡೆ; ಬೊಕ್ಕೆ, ಸಿಹಿತಿನಿಸು ಬೇಡ, ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದರು

ಹೊಸ ವರ್ಷ ಮತ್ತು ಕೆಲ ವಿಶೇಷ ದಿನಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಕಿರಿಯ ಅಧಿಕಾರಿಗಳು ಹೂ ಗುಚ್ಚ, ಸಿಹಿ ತಿನಿಸು ನೀಡಿ ಶುಭಾಶಯ ಕೋರೋದು ವಾಡಿಕೆ. ಆದರೆ ಹೂವು ಗುಚ್ಛ ತರುವುದು ಬೇಡ. ಅದರ ಬದಲಿಗೆ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವಂತೆ ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ್ ಅವರು ವರ್ಚುವಲ್‌ ಸಭೆಯಲ್ಲಿ ಮನವಿ ಮಾಡಿದ್ದರು. ಕಮಿಷನರ್‌ ಅವರ ಮಾತುಗಳಿಂದ ಪ್ರೇರಣೆಗೊಂಡ ಪೊಲೀಸ್‌ ಅಧಿಕಾರಿಗಳು, ಹೊಸ ವರ್ಷದಂದು ತಮ್ಮ ವಿಭಾಗದ ವ್ಯಾಪ್ತಿಯಲ್ಲಿರುವ ಅನಾಥಾಶ್ರಮಗಳಿಗೆ ತೆರಳಿ ಮಕ್ಕಳಿಗೆ ಹಣ್ಣು ವಿತರಿಸಿದರು.

ಪೊಲೀಸ್ ಕಮಿಷನರ್‌ ದಯಾನಂದ್ ಅವರು ಕೂಡ ಕೆಲವು ಅನಾಥಾಶ್ರಮಗಳಿಗೆ ತೆರಳಿ ಮಕ್ಕಳಿಗೆ ಹಣ್ಣು ವಿತರಿಸಿದರು. ಪೊಲೀಸ್ ಕಮಾಂಡ್ ಸೆಂಟರ್ ಹಾಗೂ ಸಿಎಆರ್ ಕಾರ್ಯಾಲಯಕ್ಕೆ ಆ್ಯಸಿಡ್ ದಾಳಿ ಪ್ರಕರಣದ ಸಂತ್ರಸ್ತರು ಹಾಗೂ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರನ್ನು ಆಹ್ವಾನಿಸಿ, ಹೊಸ ವರ್ಷವನ್ನು ಆಚರಿಸಲಾಯಿತು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ