Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಪದವಿ ಕೋರ್ಸ್​ಗಳ ಶುಲ್ಕ ಶೇ10 % ಏರಿಕೆ

ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ನೀಡಿ ಪ್ರಸಕ್ತ ವರ್ಷದಲ್ಲಿ ಶೇ 10 ರಷ್ಟು ಶುಲ್ಕ ಏರಿಕೆ ಮಾಡಲು ಉನ್ನತ್ತ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಬಿಎ, ಬಿಕಾಂ, ಬಿಎಸ್​ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ 10ರಷ್ಟು ಏರಿಕೆ ಆಗಲಿದೆ.

ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಪದವಿ ಕೋರ್ಸ್​ಗಳ ಶುಲ್ಕ ಶೇ10 % ಏರಿಕೆ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on:Jan 03, 2024 | 12:33 PM

ಬೆಂಗಳೂರು, ಜ.03: ಕಾಂಗ್ರೆಸ್ ಸರ್ಕಾರ (Congress Government) ಬಂದ ಬಳಿಕ ಎಲ್ಲವೂ ದುಬಾರಿಯಾಯ್ತು ಎಂದು ಜನ ಹೇಳುತ್ತಿರುವಾಗಲೇ ರಾಜ್ಯ ಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಬಿಗ್ ಶಾಕ್ ಕೊಟ್ಟಿದೆ (College Fees Hike). ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್​ಗಳ ಶುಲ್ಕ ಶೇ10% ಏರಿಕೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಉನ್ನತ್ತ ಶಿಕ್ಷಣ ಇಲಾಖೆ ಅವಕಾಶ ಕೊಟ್ಟಿದೆ. ಶುಲ್ಕ ಏರಿಕೆಗೆ ಅವಕಾಶ ನೀಡಿ ಬಡ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ.

ರಾಜ್ಯ ಸರ್ಕಾರ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಹಾಗೂ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಶೇ10% ರಷ್ಟು ಶುಲ್ಕ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಪಿಯುಸಿ ಮುಗಿಸಿ ಉನ್ನತ್ತ ಶಿಕ್ಷಣ ಪಡೆಯುವ ಕನಸ್ಸು ಹೊತ್ತು ಪದವಿಗೆ ಬರುವ ವಿದ್ಯಾರ್ಥಿಗಳಿಗೆ ಈಗ ಆರ್ಥಿಕ ಹೊರೆ ಬೀಳಲಿದೆ. ಬಿಎ, ಬಿಕಾಂ, ಬಿಎಸ್​ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ 10ರಷ್ಟು ಏರಿಕೆಗೆ ಅವಕಾಶ ನೀಡಿದೆ. ಈಗಾಗಲೇ ಈ ಪರಿಷ್ಕೃತ ಶುಲ್ಕ ಪಟ್ಟಿಯನ್ನ ಯೂನಿವರ್ಸಿಟಿಗಳಿಗೆ ನೀಡಿ ಈ ಬಗ್ಗೆ ಸಿದ್ಧತೆಗೆ ಸರ್ಕಾರ ಸೂಚನೆ ನೀಡಿದೆ. ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ನೀಡಿ ಪ್ರಸಕ್ತ ವರ್ಷದಲ್ಲಿ ಶೇ10% ರಷ್ಟು ಶುಲ್ಕ ಏರಿಕೆ ಮಾಡಲು ಉನ್ನತ್ತ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಮುಂದಿನ ವರ್ಷ ಪದವಿ ವಿದ್ಯಾರ್ಥಿಗಳಿಗೆ ಮತಷ್ಟು ಶುಲ್ಕ ಏರಿಕೆಯ ಬರೆ ಬೀಳಲಿದೆ.

ಇದನ್ನೂ ಓದಿ: ಫಾಸ್ಟ್‌ಟ್ಯಾಗ್‌ ಬಳಕೆಗೆ ಗುಡ್ ಬೈ! ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ದವಾದ ಜಿಪಿಎಸ್ ಟೋಲ್ ಸಿಸ್ಟಂ..

ಇನ್ನು ಪಂಚ ಗ್ಯಾರಂಟಿಗೆ ಹಣ ಸಂಗ್ರಹಿಸಲು ಈಗಾಗಲೇ ತರಿಗೆ ಏರಿಕೆಯಾಯ್ತು, ರಾಜಸ್ವ ಏರಿಕೆಯಾಯ್ತು, ಕರೆಂಟ್ ಬಿಲ್ ಏರಿಕೆಯಾಯ್ತು, ಮದ್ಯದ ಬೆಲೆ ಏರಿಕೆಯಾಯ್ತು ಈಗ ಕಾಲೇಜು ಶುಲ್ಕ ಏರಿಕೆಗೆ ಸರ್ಕಾರ ಅವಕಾಶ ನೀಡಿದೆ ಎಂದು ಕೆಲ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಏಕರೂಪ ಶುಲ್ಕ ಸಮಿತಿ 2022/23 ರ ಅನ್ವಯ ಶುಲ್ಕ ಏರಿಕೆ ಮಾಡಲಾಗಿದೆ. BA – 11700 rs, BA specilization – 16200, BSW – 16400, B.Com – 19700, B.Com Specilization – 24700, BBA – 28700, BBA – Specilization – 31700, B.Sc – 21790, B.Sc Specilization – 25700, BCA -30700, B.Ed – 12750, BO.Ed – 42750, BA LLB – 27750, MA – 15250, MVA – 17250, MSW – 21250, MA ( MCJ ) – 21750, MA ( Foreign Lang ) – 23250, M.Com -19750, M.Com Specilization -64750, MTTM – 67750, MBA ( D )59750, MBA ( E )79750.

Non-kar – NRI – BA – 12000, BS Specilization – 12000, BSW 12000

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:15 am, Wed, 3 January 24