ಗುತ್ತಿಗೆ ಆಧಾರದ ಮೇಲೆ ಮೆಟ್ರೋ ಫೀಡರ್ ಬಸ್ ನೀಡಲಿದೆ BMTC- ದೂರಕ್ಕೆ ತಕ್ಕಂತೆ ದರ ನಿಗದಿ
ಈಗಾಗಲೇ ಬಿಎಂಟಿಸಿ ವತಿಯಿಂದ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಸೇವೆ ನೀಡಲಾಗುತ್ತಿದೆ. ಬಸ್‌ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ. ಇದೀಗ ಈ ಸೇವೆಯನ್ನು ಶಾಲಾ-ಕಾಲೇಜುಗಳಿಗೆ, ಕಾರ್ಖಾನೆಗಳಿಗೂ ವಿಸ್ತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ.

ಬೆಂಗಳೂರು, ಜ.03: ಇನ್ಮುಂದೆ ನಮ್ಮ ಮೆಟ್ರೋ (Namma Metro) ಸ್ಟೇಷನ್ನಿಂದ ಖಾಯಂ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಬಸ್ಗಳು ಓಡಾಡಲಿವೆ. ಮೊದಲ ಬಾರಿಗೆ ಮೆಟ್ರೋ ಫೀಡರ್ ಬಸ್ಗಳನ್ನು (Metro Feeder Bus) ಕಂಪನಿಗಳಿಗೆ ಖಾಯಂ ಗುತ್ತಿಗೆ ಆಧಾರದಲ್ಲಿ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ನಿರ್ಧರಿಸಿದೆ. ಈಗಾಗಲೇ ಬಿಎಂಟಿಸಿ ವತಿಯಿಂದ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಸೇವೆ ನೀಡಲಾಗುತ್ತಿದೆ. ಬಸ್‌ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ. ಇದೀಗ ಈ ಸೇವೆಯನ್ನು ಶಾಲಾ-ಕಾಲೇಜುಗಳಿಗೆ, ಕಾರ್ಖಾನೆಗಳಿಗೂ ವಿಸ್ತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ.
ಖಾಯಂ ಗುತ್ತಿಗೆ ಆಧಾರದಲ್ಲಿ ಮೆಟ್ರೋ ಫೀಡರ್ ಬಸ್ಗಳನ್ನು ನೀಡಲು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ರಿಯಾಯಿತಿ ದರದಲ್ಲಿ ಬಸ್ ಸೇವೆ ಒದಗಿಸಲು ಬಿಎಂಟಿಸಿ ನಿರ್ಧರಿಸಿದೆ. 4 ಸಾವಿರ ರೂಪಾಯಿಂದ 12 ಸಾವಿರದವರೆಗೆ ಪ್ರತಿ ದಿನದ ಬಾಡಿಗೆ ನಿಗದಿ ಮಾಡಲಾಗಿದೆ. ಒಪ್ಪಂದದ ಮೇರೆಗೆ ಈಗಾಗಲೇ ಶಾಲೆ, ಕಾಲೇಜು, ಕಾರ್ಖಾನೆಗಳು ಸೇರಿದಂತೆ ಇನ್ನಿತರ ಸಂಸ್ಥೆಗಳಿಗೆ ಬಿಎಂಟಿಸಿ ಬಸ್ ನೀಡಲಾಗುತ್ತಿದೆ. ಅದೇ ರೀತಿ ಮೆಟ್ರೋ ಫೀಡರ್ ಬಸ್ಗಳನ್ನು ಖಾಯಂ ಗುತ್ತಿಗೆ ನೀಡಲಾಗುತ್ತೆ. ವೈಟ್ ಫೀಲ್ಡ್ ಪ್ರದೇಶದ ಯಾವುದೇ ಸಂಸ್ಥೆ ಕೂಡ ಮೆಟ್ರೋ ಫೀಡರ್ ಬಸ್ಗಳನ್ನ ಗುತ್ತಿಗೆ ಆಧಾರದಲ್ಲಿ ಪಡೆಯಬಹುದು.
ಇದನ್ನೂ ಓದಿ: ಬೆಂಗಳೂರಿನ ಈ ಮಾರ್ಗದಲ್ಲಿ ಹೆಚ್ಚುವರಿ ಫೀಡರ್ ಬಸ್ ಆರಂಭಿಸಿದ ಬಿಎಂಟಿಸಿ, ಇಲ್ಲಿದೆ ವೇಳಾಪಟ್ಟಿ
ಬಸ್‌ಗಳ ಬಾಡಿಗೆ ಎಷ್ಟು?
- ಮಿಡಿ ಬಸ್: 80 ಕಿಮೀ ವರೆಗೆ 4 ಸಾವಿರ ರೂಪಾಯಿ ನಿಗದಿ, 80 ಕಿಮೀ ನಂತರ ಪ್ರತಿ ಕಿಮೀಗೆ 60 ರೂಪಾಯಿ ನಿಗದಿ ಮಾಡಲಾಗಿದೆ.
- ಸಾಮಾನ್ಯ ಬಸ್: 80 ಕಿಮೀ ವರೆಗೆ 5 ಸಾವಿರ ರೂಪಾಯಿ ದರ ನಿಗದಿ. 80 ಕಿಮೀ ನಂತರ ಪ್ರತಿ ಕಿಮೀಗೆ 70 ರೂಪಾಯಿ ನಿಗದಿ.
- ಬಿಎಸ್-6 ಬಸ್: 80 ಕಿಮೀ ವರೆಗೆ 6 ಸಾವಿರ ರೂಪಾಯಿ ನಿಗದಿ. 80 ಕಿಮೀ ನಂತ್ರ ಪ್ರತಿ ಕಿಮೀಗೆ 80 ರೂಪಾಯಿ ನಿಗದಿ.
- ವೋಲ್ವೋ: 80 ಕಿಮೀ ವರೆಗೆ 8 ಸಾವಿರ ರೂಪಾಯಿ ನಿಗದಿ. 80 ಕಿಮೀ ನಂತ್ರ ಪ್ರತಿ ಕಿಮೀಗೆ ₹90 ನಿಗದಿ.
- ಇ- ಬಸ್(9 ಮೀ) ಬಸ್: 80 ಕಿಮೀ ವರೆಗೆ 9 ಸಾವಿರ ರೂಪಾಯಿ ನಿಗದಿ. 80 ಕಿಮೀ ನಂತ್ರ ಪ್ರತಿ ಕಿಮೀಗೆ 100 ರೂಪಾಯಿ ನಿಗದಿ.
- ಇ- ಬಸ್(12 ಮೀ): 80 ಕಿಮೀ ವರೆಗೆ 12 ಸಾವಿರ ರೂಪಾಯಿ ನಿಗದಿ. 80 ಕಿಮೀ ನಂತ್ರ ಪ್ರತಿ ಕಿಮೀಗೆ 100 ರೂಪಾಯಿ ನಿಗದಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ