ಗೋಬಿಗೆ ಹಾಕುವ ರಾಸಾಯನಿಕ ಬ್ಯಾನ್; ಟೇಸ್ಟ್ ಇಲ್ಲ ಎಂದ ಗ್ರಾಹಕರು, ವ್ಯಾಪಾರ 80% ರಷ್ಟು ಕುಸಿತ
ರಾಜ್ಯ ರಾಜಧಾನಿಯಲ್ಲಿ ಗೋಬಿ ಮಂಚೂರಿಗೆ ಹಾಕುತ್ತಿದ್ದ ರಾಸಾಯನಿಕ ಕೆಮಿಕಲ್ಗಳನ್ನ ಬ್ಯಾನ್ ಮಾಡಲಾಗಿದೆ. ಹೀಗಾಗಿ ಒಂದು ವಾರದಿಂದ ಗೋಬಿ ಮಂಚೂರಿ ವ್ಯಾಪಾರಸ್ಥರ ಪರಿಸ್ಥಿತಿ ಹೇಳತೀರದ್ದಾಗಿದೆ. ಗೋಬಿ ವ್ಯಾಪಾರಸ್ಥರ ವ್ಯಾಪಾರ 80% ಕುಸಿದಿದೆ. ಇದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಬೆಂಗಳೂರು, ಮಾರ್ಚ್.18: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗೋಬಿ ಮಂಚೂರಿಗೆ (Gobi Manchurian) ಹಾಕುವ ಕೆಮಿಕಲ್ ರಾಸಾಯನಿಕವನ್ನ ಬ್ಯಾನ್ ಮಾಡಲಾಗಿದೆ. ಸದ್ಯ ಈ ಕೆಮಿಕಲ್ ಬಳಕೆ ಮಾಡಿದ್ರೆ 10 ಸಾವಿರ ದಂಡ ವಿಧಿಸುವುದಾಗಿ ಆರೋಗ್ಯ ಇಲಾಖೆ ಸೂಚನೆ ಸಹ ನೀಡಿದೆ. ಹೀಗಾಗಿ ಕಳೆದ ಒಂದು ವಾರದಿಂದ ಗೋಬಿ ವ್ಯಾಪಾರಸ್ಥರಿಗೆ ಇದು ಭಾರಿ ಹೊಡೆತಕೊಟ್ಟಿದ್ದು, ಗೋಬಿ ಮಂಚೂರಿಯನ್ನ ತಿನ್ನುವವರ ಸಂಖ್ಯೆ ಕುಸಿದಿದೆ.
ಗೋಬಿ ಮಂಚೂರಿಗೆ ಹಾಕುವ ರಾಸಾಯನಿಕ ಕೆಮಿಕಲ್ ನಿಂದ ಕಾನ್ಸರ್ ಹರಡುತ್ತಿದೆ ಎನ್ನುವುದು ಸ್ಪಷ್ಟವಾಗಿರುವ ಹಿನ್ನೆಲೆ ಆಹಾರ ಇಲಾಖೆ ಗೋಬಿ ಮಂಚೂರಿಗೆ ಹಾಕುವ ಕೆಮಿಕಲ್ ಬ್ಯಾನ್ ಮಾಡಿದೆ. ಸಧ್ಯ ಕೆಮಿಕಲ್ ಬ್ಯಾನ್ ಮಾಡಿ ಒಂದು ವಾರ ಕಳೆದಿದ್ದು, ಒಂದು ವಾರದಿಂದ ಗೋಬಿ ವ್ಯಾಪಾರಸ್ಥರ ವ್ಯಾಪಾರ ವಹಿವಾಟು 80% ರಷ್ಟು ಕುಸಿತವಾಗಿದೆ. ಗೋಬಿ ತಿನ್ನಲು ಗ್ರಾಹಕರು ಸಹ ಆಸಕ್ತಿ ಕಳೆದು ಕೊಂಡಿದ್ದಾರೆ. ಹೀಗಾಗಿ ಮೆಜೆಸ್ಟಿಕ್, ಮಲ್ಲೇಶ್ವರಂ, ಜೆಪಿ ನಗರ, ರಾಜಾಜಿನಗರ, ವಿಜಯನಗರದ , ವಿಲ್ಸನ್ ಗಾರ್ಡಾನ್ ಸೇರಿದಂತೆ ವಿವಿಧೆಡೆ ಗೋಬಿ ಮಂಚೂರಿ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಪಾನಿಪೂರಿ, ಬೇಲ್‌ಪೂರಿ, ಸೇವ್ ಪೂರಿಗಳತ್ತ ಹೆಚ್ಚು ಜನರು ಮುಖ ಮಾಡ್ತಿದ್ದಾರೆ.
ರಾಸಾಯನಿಕ ಬಳಸದ, ಬಣ್ಣವಿಲ್ಲದ ಗೋಬಿಗೂ ಡಿಮ್ಯಾಂಡ್ ಕುಸಿತ
ಬಣ್ಣ ವಿಲ್ಲದ ಗೋಬಿಗಳನ್ನ ಮಾಡಿದ್ರು ಗ್ರಾಹಕರು ತೆಗೆದುಕೊಳ್ಳತ್ತಿಲ್ಲ. ವ್ಯಾಪಾರ ಮಾಡಿ ಜೀವನ ನಡೆಸೋದೆ ದೊಡ್ಡ ಸವಾಲಾಗಿ ಹೋಗಿದೆ. ಈ ಹಿಂದೆ ಪ್ರತಿದಿನ 10 ಸಾವಿರದಷ್ಟು ವ್ಯಾಪಾರ ಮಾಡ್ತಿದ್ವಿ. ಆದ್ರೀಗಾ 5 ಸಾವಿರ ರೂ ವ್ಯಾಪಾರ ಮಾಡುವುದು ಕೂಡ ಕಷ್ಟವಾಗಿ ಹೋಗಿದೆ. ಹಾಕಿದ ಬಂಡವಾಳ ಕೂಡ ಬರ್ತಿಲ್ಲ. ಸಧ್ಯ ಯಾವುದೇ ಬಣ್ಣ ಬಳಕೆ ಮಾಡದೇ ನಾಚುರಲ್ ಗೋಬಿ ತಾಯಾರಿಸುತ್ತಿದ್ದೀವಿ. ಆದ್ರೂ ಕೂಡ ಜನರು ಬರ್ತಿಲ್ಲ. ಹೀಗೆ ಆದ್ರೆ ಮುಂದೆ ವ್ಯಾಪಾರದ ಮೇಲೆ ಭಾರಿ ಹೊಡೆತ ಬೀಳುತ್ತೆ ಅಂತ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಆನ್‌ಲೈನ್ ವಹಿವಾಟಿನ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು, ಅಕ್ರಮ ತಡೆಗಟ್ಟಲು ಕ್ರಮ
ಇನ್ನು, ಇಷ್ಟು ದಿನ ಕೆಮಿಕಲ್ ಬಳಕೆ ಮಾಡ್ತಾರೆ ಅಂತ ಗೋಬಿಯನ್ನೆ ತಿಂದಿರಲಿಲ್ಲ. ಆದರೀಗ ನಾಚುರಲ್ ಗೋಬಿ ಮಾಡ್ತಿದ್ದಾರೆ ಅಂತ ಗೊತ್ತಾಯ್ತು. ಹೀಗಾಗಿ ಗೋಬಿಯನ್ನ ತೆಗೆದುಕೊಳ್ಳುವುದಕ್ಕೆ ಬಂದ್ವಿ. ಇಲ್ಲಿ ಯಾವುದೇ ರಾಸಾಯನಿಕ ಬಳಕೆ ಮಾಡದೆ ಗೋಬಿ ತಯಾರಿಸಲಾಗಿದೆ. ಧೈರ್ಯದಿಂದ ತಿನ್ನಬಹುದು ಅಂತ ಕೆಲ ಗ್ರಾಹಕರು ತಿಳಿಸಿದರು.
ಒಟ್ನಲ್ಲಿ, ಗೋಬಿಗೆ ಹಾಕುವ ರಾಸಾಯನಿಕ ಕೆಮಿಕಲ್ ಬ್ಯಾನ್ ಮಾಡಿರುವುದು ವ್ಯಾಪಾರಸ್ಥರಿಗೆ ದೊಡ್ಡಮಟ್ಟದ ಹೊಡೆತವನ್ನೆ ಕೊಟ್ಟಿದ್ದು, ಎಷ್ಟೋ ಜನ ವ್ಯಾಪರಸ್ಥರು ಗೋಬಿ ಸಹವಾಸವೇ ಬೇಡ ಎನ್ನೋಕೆ ಶುರು ಮಾಡಿದ್ದಾರೆ. ಇನ್ನು ಕೆಲವರು ನಾಚುರಲ್ ಗೋಬಿ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದು ಗ್ರಾಹಕರು ತಿನ್ನುವುದಕ್ಕೂ ಮೊದಲು ಪರಿಶೀಲನೆ ಮಾಡಲೇಬೇಕಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ