Gold Silver Rate Today | ಬೆಂಗಳೂರು: ಜೂನ್ ತಿಂಗಳ ಕೊನೆಯ ವಾರದಲ್ಲಿ ಚಿನ್ನದ ದರ (Gold Rate) ಇಳಿಕೆಯತ್ತ ಮುಖ ಮಾಡಿದೆ. ದೈನಂದಿನ ದರ ಬದಲಾವಣೆಯಲ್ಲಿ ಏರಿಕೆ ಕಂಡು ಬಂದಿದ್ದರೂ ಸಹ ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ತಿಂಗಳಿನಲ್ಲಿ ಚಿನ್ನದ ದರ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು ( ಶುಕ್ರವಾರ, ಜೂನ್ 25) ಬರೋಬ್ಬರಿ 1,000 ರೂಪಾಯಿಯಷ್ಟು ಚಿನ್ನದ ದರ ಇಳಿಕೆ ಆಗಿದೆ. ಬೆಳ್ಳಿ ದರ (Silver Rate) ಸ್ಥಿರತೆಯನ್ನು ಕಾಯ್ದುಕೊಂಡಿದೆ.
ಅದೆಷ್ಟೋ ವರ್ಷಗಳಿಂದ ಕಷ್ಟಪಟ್ಟು ದುಡಿಯುತ್ತಿರುತ್ತೀರಿ. ಅಷ್ಟು ವರ್ಷಗಳ ಕಾಲ ಸಾಕಿ-ಸಲುಹಿದ ಅಪ್ಪ ಅಮ್ಮನಿಗೆ ಏನಾದರೂ ಕೊಡಿಸಬೇಕು ಎಂಬ ಆಸೆ ಇರಬಹುದು. ಚಿಕ್ಕವರಿದ್ದಾಗಿನಿಂದಲೂ ಇಲ್ಲಿಯವರೆಗೂ ಅವರೇ ನಮಗೆ ಉಡುಗೊರೆಯನ್ನು ನೀಡುತ್ತಾ ಬಂದಿದ್ದಾರೆ. ನಾವು ದುಡಿತ ಸ್ವಂತ ಹಣದಲ್ಲಿ ಚಿನ್ನದ ಬಳೆಗಳನ್ನೋ, ಸರವನ್ನೋ ಅಥವಾ ಉಂಗುರವನ್ನೋ ಮಾಡಿಸಿ ಕೊಡುವ ಆಸೆ ಇದ್ದರೆ ಇಂದು ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿ.
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,000 ರೂಪಾಯಿಗೆ ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ 4,40,000 ರೂಪಾಯಿಗೆ ಇಳಿಕೆಯಾಗಿದೆ. ಬರೋಬ್ಬರಿ 1,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,000 ರೂಪಾಯಿಗೆ ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ 4,80,000 ರೂಪಾಯಿಗೆ ಇಳಿಕೆಯಾಗಿದೆ. ಸರಿಸುಮಾರು 1,100 ರೂಪಾಯಿ ಕಡಿತವಾಗಿದೆ. ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಕೆಜಿ ಬೆಳ್ಳಿ ಬೆಲೆ 67,900 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,400 ರೂಪಾಯಿಗೆ ಕುಸಿದಿದೆ. 100 ಗ್ರಾಂ ಚಿನ್ನಕ್ಕೆ 4,44,000 ರೂಪಾಯಿ ದಾಖಲಾಗಿದೆ. ಬರೋಬ್ಬರಿ 1,500 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,440 ರೂಪಾಯಿಗೆ ನಿಗದಿಯಾಗಿದೆ. 100 ಗ್ರಾಂ ಚಿನ್ನದ ದರ 4,84,400 ರೂಪಾಯಿಗೆ ಇಳಿಕೆ ಆಗಿದೆ. ಸರಿಸುಮಾರು 1,600 ರೂಪಾಯಿಗೆ ಇಳಿಕೆ ಕಂಡು ಬಂದಿದೆ. ಬೆಳ್ಳಿ ದರ 300 ರೂಪಾಯಿ ಕುಸಿತ ಕಂಡ ಬಳಿಕ ಕೆಜಿ ಬೆಳ್ಳಿ ದರ 73,100 ರೂಪಾಯಿಗೆ ಇಳಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,150 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರದಲ್ಲಿ 1,000 ರೂಪಾಯಿ ಇಳಿಕೆ ಕಂಡು ಬಂದಿದ್ದು 4,61,500 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,250 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 5,02,500 ರೂಪಾಯಿಗೆ ಕುಸಿತ ಕಂಡಿದೆ. ಕೆಜಿ ಬೆಳ್ಳಿ ಬೆಲೆ 67,900 ರೂಪಾಯಿ ನಿಗದಿ ಮಾಡಲಾಗಿದೆ.
ಇದನ್ನೂ ಓದಿ:
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ; ವಿವಿಧ ನಗರಗಳಲ್ಲಿನ ಆಭರಣದ ಬೆಲೆ ವಿವರ ಇಲ್ಲಿದೆ
Gold Rate Today: ವೀಕೆಂಡ್ನಲ್ಲಿ ಆಭರಣದ ಬೆಲೆ ಎಷ್ಟು? ಚಿನ್ನದ ದರ ಮತ್ತಷ್ಟು ಇಳಿಕೆಯೇ? ದರ ವಿವರ ಹೀಗಿದೆ