ಬೆಂಗಳೂರು, ಅ.09: ಆಹಾರ ಇಲಾಖೆಯ ಆಧ್ಯಾತಾ ಹಾಗೂ ಆಧ್ಯೇತರ ಪಡಿತರ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿದೆ. ಆಧ್ಯಾತ ಪಡಿತರ ಚೀಟಿ ಹಾಗೂ ಆಧ್ಯತೇತರ ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸಿದ್ದ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸುವ ಬಗ್ಗೆ ಸರ್ಕಾರ ನಿರ್ದೇಶನ ಹೊರಡಿಸಿದೆ. ಆಹಾರ ಇಲಾಖೆಗೆ 16/08/2023 ರವರೆಗೂ ಒಟ್ಟು 2,96,986, ಆಧ್ಯಾತ ಪಡಿತರ (PHH) ಚೀಟಿಗಳು ಹಾಗೂ ಆಧ್ಯೇತರ ಪಡಿತರ ಚೀಟಿಗಾಗಿ (NPHH /APL) 71410 ಅರ್ಜಿ ಸಲ್ಲಿಕೆ ಆಗಿವೆ. ಈ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ. ಅಲ್ಲದೇ ಪಡಿತರ ಚೀಟಿ ವಿತರಣೆ ಮುನ್ನ ಆಹಾರ ಇಲಾಖೆ ಕೆಲವು ಷರತ್ತು ವಿಧಿಸಿದೆ.
ಇದನ್ನೂ ಓದಿ: 2024ಕ್ಕೆ ಮತ್ತೆ ವಿಧಾನಸಭೆ ಚುನಾವಣೆ ಖಚಿತ; ಡಿಕೆಶಿ ತಿಹಾರ್ ಜೈಲಿಗೆ ಹೋಗುವ ಕಾಲ ಸನ್ನಿಹಿತ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ
ಬಿಪಿಎಲ್ ಕಾರ್ಡ್‌ಗೆ ಫಲಾನುಭವಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಸರಿಪಡಿಸಿಕೊಳ್ಳಬಹುದು. ಅದನ್ನು ಕೂಡ ಮೂರು ಹಂತಗಳಲ್ಲಿ ನಾನಾ ಜಿಲ್ಲೆಗಳಿಗೆ ನಿಗದಿತ ದಿನಾಂಕ ನಿಗದಿಪಡಿಸಲಾಗಿದೆ.
ಅ.11 ರಿಂದ 13ರವರೆಗೆ ಬಳ್ಳಾರಿ, ಕಲಬುರಗಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ಅವಕಾಶ ನೀಡಲಾಗಿದೆ. ಎಲ್ಲಾ ವಿಭಾಗಗಳಲ್ಲಿಯೂ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ