ಲೈಫ್ ಟೈಮ್​ ಟ್ಯಾಕ್ಸ್ ಆದೇಶಕ್ಕೆ ಸರ್ಕಾರದ ವಿರುದ್ಧ ಸಿಡಿದೆದ್ದ ಗೂಡ್ಸ್ ವಾಹನ ಮಾಲೀಕರು, ನಾಳೆ ರಾಜ್ಯ ಬಂದ್ ಎಚ್ಚರಿಕೆ

250ಕ್ಕೂ ಹೆಚ್ಚು ಟ್ರಕ್​ಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಶಾಂತಿನಗರ ಬಸ್ ನಿಲ್ದಾಣದ ಬಳಿಯ ಬಿಟಿಎಸ್ ರೋಡ್ ಬ್ಲಾಕ್ ಮಾಡಲಾಗಿದೆ. ಒಂದು ವೇಳೆ ಸರ್ಕಾರ ಈ ಆದೇಶ ಹಿಂಪಡೆಯದೇ ಇದ್ದರೆ ನಾಳೆ(ಸೆ.01) ಬೆಂಗಳೂರಿನಾದ್ಯಂತ ಎರಡೂವರೆ ಸಾವಿರ ಎಂಜಿವಿ ಗೂಡ್ಸ್ ವಾಹನ ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಕರ್ನಾಟಕ ಗೂಡ್ಸ್ ವೆಹಿಕಲ್‌ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಲೈಫ್ ಟೈಮ್​ ಟ್ಯಾಕ್ಸ್ ಆದೇಶಕ್ಕೆ ಸರ್ಕಾರದ ವಿರುದ್ಧ ಸಿಡಿದೆದ್ದ ಗೂಡ್ಸ್ ವಾಹನ ಮಾಲೀಕರು, ನಾಳೆ ರಾಜ್ಯ ಬಂದ್ ಎಚ್ಚರಿಕೆ
ಗೂಡ್ಸ್ ವಾಹನ ಮಾಲೀಕರ ಪ್ರತಿಭಟನೆ
Follow us
Kiran Surya
| Updated By: ಆಯೇಷಾ ಬಾನು

Updated on: Aug 31, 2023 | 12:06 PM

ಬೆಂಗಳೂರು, ಆ.31: ಪಂಚ ಗ್ಯಾರಂಟಿ ಯೋಜನೆಗಳ ಹೊರೆ ನೀಗಿಸುವ ಆತುರದಲ್ಲಿ ರಾಜ್ಯ ಸರ್ಕಾರ(State Government) ನಾನಾ ಹೊರೆಯನ್ನು ರಾಜ್ಯದ ಜನರಿಗೆ ಹೇರುತ್ತಿದೆ. ವಾಹನಗಳಿಗೆ ಲೈಫ್ ಟೈಂ ಟ್ಯಾಕ್ಸ್(Life Time Tax) ಪಾವತಿಗೆ ಸರ್ಕಾರ ಆದೇಶ ಹೊರಡಿಸಿದ್ದು ಗೂಡ್ಸ್ ವಾಹನ ಮಾಲೀಕರಿಗೆ ಈ ಕಾಯ್ದೆ ಭಾರೀ ಹೊಡೆತಕೊಡಲಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಗೂಡ್ಸ್ ಟ್ರಕ್ ಮಾಲೀಕರು ಸಿಡಿದೆದ್ದಿದ್ದಾರೆ. ಶಾಂತಿನಗರ ರಸ್ತೆಯುದ್ದಕ್ಕೂ 250ಕ್ಕೂ ಹೆಚ್ಚು ಎಂಜಿವಿ (ಮೀಡಿಯಂ ಗೂಡ್ಸ್ ವೆಹಿಕಲ್ ) ಗೂಡ್ಸ್ ವಾಹನ ನಿಲ್ಲಿಸಿ ಶಾಂತಿ ನಗರ ಆರ್​ಟಿಒ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

250ಕ್ಕೂ ಹೆಚ್ಚು ಟ್ರಕ್​ಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಶಾಂತಿನಗರ ಬಸ್ ನಿಲ್ದಾಣದ ಬಳಿಯ ಬಿಟಿಎಸ್ ರೋಡ್ ಬ್ಲಾಕ್ ಮಾಡಲಾಗಿದೆ. ಒಂದು ವೇಳೆ ಸರ್ಕಾರ ಈ ಆದೇಶ ಹಿಂಪಡೆಯದೇ ಇದ್ದರೆ ನಾಳೆ(ಸೆ.01) ಬೆಂಗಳೂರಿನಾದ್ಯಂತ ಎರಡೂವರೆ ಸಾವಿರ ಎಂಜಿವಿ ಗೂಡ್ಸ್ ವಾಹನ ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಕರ್ನಾಟಕ ಗೂಡ್ಸ್ ವೆಹಿಕಲ್‌ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಗೂಡ್ಸ್ ವಾಹನ ಮಾಲೀಕರಿಗೆ ಹೊರೆಯಾದ ಲೈಫ್ ಟೈಮ್ ರೋಡ್ ಟ್ಯಾಕ್ಸ್

ಜುಲೈ 28ರಂದು ಗೆಜೆಟ್ ಅಧಿಸೂಚನೆ ಹೊರಡಿಸಿರುವ ಸರ್ಕಾರ ಆ.1ರಿಂದಲೇ ಲೈಫ್ ಟೈಮ್ ರೋಡ್ ಟ್ಯಾಕ್ಸ್ ಕಾಯ್ದೆ ಜಾರಿಗೊಳಿಸಿದೆ. ಈ ಹಿಂದೆ ಹಳದಿ ಫಲಕದ ಎಲ್​ಜಿವಿ, ಎಂಜಿವಿ ವಾಹನಗಳ ಮಾಲೀಕರು ಮೂರು ತಿಂಗಳಿಗೊಮ್ಮೆ 2,000 ರೂ. ಟ್ಯಾಕ್ಸ್ ಕಟ್ಟುತಿದ್ದರು. ಆದ್ರೆ ಈಗ ಈ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಅದರಂತೆ ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ತ್ರೈಮಾಸಿಕ ತೆರಿಗೆ ಪಾವತಿ ಬದಲಾಗಿ ವಾಹನ ನೋಂದಣಿ ವೇಳೆ ಲೈಫ್​ಟೈಂ (ಏಕ ಕಾಲಿಕ) ಪಾವತಿ ಪಡೆಯಲು ಸರ್ಕಾರ ಆದೇಶ ನೀಡಿದೆ. ಇದರಿಂದ ವಾಹನಗಳ ಮಾಲೀಕರು ಕಂಗಾಲಾಗಿದ್ದಾರೆ. ಮೂರು-ನಾಲ್ಕು ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಒಂದೇ ಬಾರಿ ಭಾರೀ ಮೊತ್ತದ ಟ್ಯಾಕ್ಸ್ ಕಟ್ಟುವುದು ಕಷ್ಟವಾಗಿದೆ. ಹೀಗಾಗಿ ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ಕೈಗಾ-ಯಲ್ಲಾಪುರ ರಸ್ತೆಯಲ್ಲಿ ವಾಹನದ ಸಮೀಪ ಬಂದ ಹುಲಿ; ವಿಡಿಯೋ ಇಲ್ಲಿದೆ

ನಾಳೆ ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡುತ್ತೇವೆ

ಇನ್ನು ಈ ಸಂಬಂಧ ಲಾರಿ ಅಸೋಸಿಯೇಷನ್ ಅಧ್ಯಕ್ಷ ಶಣ್ಮುಗಪ್ಪ ಪ್ರತಿಕ್ರಿಯೆ ನೀಡಿದ್ದು, ಇವತ್ತು ಟ್ಯಾಕ್ಸ್ ಕಟ್ಟಲು ಲಾಸ್ಟ್ ಡೇ ಇದೆ. ಲೈಫ್ ಟ್ಯಾಕ್ಸ್ ಹಾಕಬೇಕು ಅಂತ ತಿಂಗಳ ಹಿಂದೆ ಸರ್ಕಾರ ಹೇಳಿದೆ. 2 ಸಾವಿರ ದಿಂದ ಲೈಫ್ ಟ್ಯಾಕ್ಸ್ 70 ಸಾವಿರ ಮಾಡಿದ್ದಾರೆ. ರಾಜ್ಯಾದ್ಯಂತ 28 ಸಾವಿರ ಲಾರಿಗಳಿವೆ. ಬೆಂಗಳೂರು ನಗರದಲ್ಲೆ 13 ಸಾವಿರ ಲಾರಿಗಳಿವೆ. ಲೈಫ್ ಟ್ಯಾಕ್ಸ್ ಕಟ್ಟಲು ಆಗಲ್ಲ. 13, 14 ಗಾಡಿಗೆ ಒಂದು ವರ್ಷಕ್ಕೆ 80 ಸಾವಿರ ಕಟ್ಟಿ ಅಂದರೆ ಹೇಗೆ? ಬೇರೆ ಯಾವ ರಾಜ್ಯದಲ್ಲಿ ಇಲ್ಲದ್ದು ನಮ್ಮ ರಾಜ್ಯದಲ್ಲಿ ಏಕೆ? ನಾವು ಟ್ಯಾಕ್ಸ್ ಕಟ್ಟಲು ಸಾಧ್ಯ ಇಲ್ಲ. ನಾಳೆ ರಾಜ್ಯಾದ್ಯಂತ ಹೆದ್ದಾರಿ ಬಂದ್ ಮಾಡುತ್ತೇವೆ. ಲಾ ಅ್ಯಂಡ್ ಆರ್ಡರ್‌ಗೆ ತೊಂದರೆ ಆದರೆ ನಾವು ಹೊಣೆ ಅಲ್ಲ. 425 ಕೋಟಿ ಸರ್ಕಾರ ನಮ್ಮ ಮೇಲೆ ಹೊರೆ ಹಾಕಿದ್ದಾರೆ. ಟ್ಯಾಂಕ್ ಫುಲ್ ಮಾಡಿದ್ರೆ ಸರ್ಕಾರಕ್ಕೆ 4 ಸಾವಿರ ಟ್ಯಾಕ್ಸ್ ಹೋಗುತ್ತೆ. ಸರ್ಕಾರ ಈ ಬಗ್ಗೆ ಮಾತುಕತೆ ಮಾಡಬೇಕು. ಇವತ್ತು ಟ್ಯಾಕ್ಸ್ ಕಟ್ಟಲು ಕೊನೆ ದಿನ ನಾವು ಒಂದು ಇಂಚು ಗಾಡಿ ಅಲುಗಾಡಿಸಿದರು ಟ್ಯಾಕ್ಸ್ ಬೀಳುತ್ತೆ. ಹಾಗಾಗಿ ಎಲ್ಲ ಲಾರಿಗಳನ್ನ ಹೆದ್ದಾರಿಗೆ ತಂದು ಬಂದ್ ಮಾಡುತ್ತೇವೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ