ಇಂಟರ್ನೆಟ್ ಪ್ರಪಂಚ; ಶಾಲೆಗಳಲ್ಲಿ ಶುರುವಾದ ಗೂಗಲ್ ಹೋಮ್ ವರ್ಕ್, ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಆಕ್ರೋಶ

ಶಾಲೆಯಲ್ಲಿ ಮಕ್ಕಳು ಏನೇ ಡೌಟ್ ಕೇಳಿದ್ರು ಹೋಮ್ ವರ್ಕ್ ಕೊಟ್ಟು ಗೂಗಲ್ ಮಾಡಿ ಮಾಹಿತಿ ತಿಳಿದುಕೊಂಡು ಹೋಮ್ ವರ್ಕ್ ಮಾಡುವಂತೆ ಶಿಕ್ಷಕರು ಮಕ್ಕಳಿಗೆ ಹೇಳುತ್ತಿದ್ದಾರೆ. ಇದರಿಂದ ಪೋಷಕರು ಹೈರಾಣಾಗಿದ್ದಾರೆ. ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕೆಲವು ಶಾಲೆಗಳ ವಿರುದ್ಧವೇ ಇತಂಹ ಆರೋಪ ಈಗ ಪೋಷಕರಿಂದ ಕೇಳಿ ಬಂದಿದೆ.

ಇಂಟರ್ನೆಟ್ ಪ್ರಪಂಚ; ಶಾಲೆಗಳಲ್ಲಿ ಶುರುವಾದ ಗೂಗಲ್ ಹೋಮ್ ವರ್ಕ್, ಖಾಸಗಿ ಶಾಲೆಗಳ ವಿರುದ್ಧ ಪೋಷಕರ ಆಕ್ರೋಶ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on: Jan 15, 2024 | 8:01 AM

ಬೆಂಗಳೂರು, ಜ.15: ಕಳೆದ‌ ಮೂರು ವರ್ಷಗಳಿಂದ ಮಕ್ಕಳ ಶಿಕ್ಷಣದ ಬದುಕನ್ನೇ ಕೊರೊನಾ (Coronavirus) ನುಂಗಿ ಹಾಕಿದ್ದು ಮಕ್ಕಳ ಕಲಿಕೆ ಗುಣಮಟ್ಟ ಹಳ್ಳ ಹಿಡಿದಿದೆ. ಆನ್ಲೈನ್ ಕ್ಲಾಸ್ ಎಫೆಕ್ಟ್ ನಿಂದ ಮಕ್ಕಳಲ್ಲಿ ಮೊಬೈಲ್ ಗೀಳು ಶುರುವಾಗಿ ನಾನಾ ಅಡ್ಡಹಾದಿಗೂ ಇದು ಕಾರಣವಾಗಿತ್ತು. ಕಳೆದ ಒಂದು ವರ್ಷದಿಂದ ಹಂಗೋ ಹಿಂಗೋ ಕೊಂಚ ಮಕ್ಕಳು ಕಲಿಕೆ ಟ್ರ್ಯಾಕ್​ಗೆ ಬರ್ತಿದ್ದಾರೆ. ಆದರೆ ಈ ನಡುವೆ ಶಾಲೆಗಳಲ್ಲಿ ಶಿಕ್ಷಕರು ಮತ್ತೆ ಗೂಗಲ್ ವರ್ಕ್ (Google Homework) ಶುರು ಮಾಡಿದ್ದು ಮಕ್ಕಳು ಶಾಲೆಯಿಂದ ಮನೆಗೆ ಬಂದ್ರೆ ಇಂಟರ್ನೆಟ್, ಗೂಗಲ್ ಅಂತಿದ್ದಾರೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನ ಕೊರೊನಾ ಇನ್ನಿಲ್ಲದಂತೆ ಕಾಡಿದೆ. ಕೊರೊನಾ ಸಂಕಷ್ಟದ ಪರಿಣಾಮದಿಂದ ಶೇ% 50 ರಿಂದ 60 ರಷ್ಟು ಮಕ್ಕಳ ಕಲಿಕೆ ಕುಂಠಿತವಾಗಿತ್ತು. ಆನ್ಲೈನ್ ಕಲಿಕೆಯಿಂದ ಮಕ್ಕಳ ಕಲಿಕಾ ಪ್ರಗತಿಗೆ ಭಾರಿ ಹೊಡೆತ ಬಿದಿತ್ತು. ಇಂಟರ್ನೆಟ್ ಪಾಠ, ಆನ್ಲೈನ್ ಕ್ಲಾಸ್ ಎಫೆಕ್ಟ್ ನಿಂದ ಮಕ್ಕಳಿಗೆ ಮೊಬೈಲ್ ಗೀಳು ಶುರುವಾಗಿ ನಾನಾ ಸಮಸ್ಯೆಗಳಿಗೆ ಕಾರಣವಾಗಿದ್ದಷ್ಟೇ ಅಲ್ದೆ ಮಕ್ಕಳು ಅಡ್ಡಹಾದಿಗೂ ಕಾರಣವಾಗಿತ್ತು. ಇದಾದ ಬಳಿಕ ಇತ್ತಿಚ್ಚಿನ ದಿನಗಳಲ್ಲಿ ಮಕ್ಕಳು ಕೊಂಚ ಮೊಬೈಲ್ ಕೈಬಿಟ್ಟು ಕಲಿಕೆಯ ಟ್ರ್ಯಾಕ್ ಬರ್ತಿದ್ದಂತೆ ಮತ್ತೆ ಶಿಕ್ಷಕರು ಗೂಗಲ್ ವರ್ಕ್ ನೀಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳು ಏನೇ ಡೌಟ್ ಕೇಳಿದ್ರು ಹೋಮ್ ವರ್ಕ್ ಕೊಟ್ಟು ಗೂಗಲ್ ಮಾಡಿ ಮಾಹಿತಿ ತಿಳಿದುಕೊಂಡು ಹೋಮ್ ವರ್ಕ್ ಮಾಡುವಂತೆ ಶಿಕ್ಷಕರು ಮಕ್ಕಳಿಗೆ ಹೇಳುತ್ತಿದ್ದಾರೆ. ಇದರಿಂದ ಪೋಷಕರು ಹೈರಾಣಾಗಿದ್ದಾರೆ.

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕೆಲವು ಶಾಲೆಗಳ ವಿರುದ್ಧವೇ ಇತಂಹ ಆರೋಪ ಈಗ ಪೋಷಕರಿಂದ ಕೇಳಿ ಬಂದಿದೆ. ಮಕ್ಕಳಿಗೆ ಈಗ ಶಾಲೆಯಲ್ಲಿ ಏನೇ ಡೌಟ್ ಇದ್ರೂ ಯಾವುದೇ ಹೋಮ್ ವರ್ಕ್ ಮಾಡಬೇಕು ಅಂದ್ರೂ ಗೂಗಲ್ ಮಾಡಬೇಕು ಅಂತಾ ಶಿಕ್ಷಕರು ಹೇಳ್ತಿದ್ದಾರೆ. ಇದು ಪ್ರತಿಷ್ಠಿತ ಶಾಲೆಗಳಿಂದಲೇ ಕೇಳಿ ಬಂದಿದ್ದು ಪೋಷಕರ ಪರದಾಟಕ್ಕೆ ಕಾರಣವಾಗಿದೆ. ಮಕ್ಕಳಿಗೆ ಹೈಟೆಕ್ ಶಿಕ್ಷಣ ಸಿಗಬೇಕು. IAS & IPS ಆಗಬೇಕು ಅಂತಾ ಪೋಷಕರು ಲಕ್ಷ ಲಕ್ಷ ಶುಲ್ಕ ಕಟ್ಟಿ ಹೈಟೆಕ್ ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡಿಸಿದ್ರೆ, ಶಾಲೆಗಳಲ್ಲಿ ಶಿಕ್ಷಕರು ಮಾತ್ರ ಮಕ್ಕಳು ಈಗ ಏನೇ ಡೌಟ್ ಅಂದ್ರು ಮನೆಯಲ್ಲಿ ನೆಟ್ ಇದೆಯಲ್ಲವಾ? ಗೂಗಲ್ ಸರ್ಚ್ ಮಾಡಿ ಹೋಮ್ ವರ್ಕ್ ಮಾಡಿಕೊಂಡು ಬರಬೇಕು ಎಂದು ಹೇಳುತ್ತಿದ್ದಾರೆ. ಶಾಲೆಗಳಲ್ಲಿ ಗೂಗಲ್ ಸರ್ಜ್ ಮಾಡೋದಕ್ಕೆ ಶಿಕ್ಷಕರು ಹೇಳಿಕೊಡುತ್ತಿದ್ದಾರೆ. ಶಿಕ್ಷಕರು ತಮ್ಮ ಅತಿಯಾದ ವರ್ಕ್ ಲೋಡ್ ನಿಂದ ಪಾರಾಗಲು ಕೆಲಸದ ಒತ್ತಡ ಹಿನ್ನಲೆ ಶಾಲಾ ಮಕ್ಕಳಿಗೆ ಗೂಗಲ್ ಸರ್ಚ್ ಮಾಡಿ ಮಾಹಿತಿ ತಿಳಿದುಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಹಾನಗಲ್​​​ನಲ್ಲಿ ರಾತ್ರಿ ಹೈಡ್ರಾಮಾ: ಅತ್ಯಾಚಾರ ಸಂತ್ರಸ್ತೆಯ ಭೇಟಿಯಾಗುತ್ತಾರಾ ಸಿಎಂ ಸಿದ್ದರಾಮಯ್ಯ?

ಮಕ್ಕಳು ಗೂಗಲ್​ ಮೂಲಕ ಕಲಿಯುವುದಾದರೆ ಶಾಲೆ ಏಕೆ ಬೇಕು

ಸದ್ಯ ಇದು ಪೋಷಕರು ಪುಲ್ ಹೈರಾಣು ಮಾಡಿದೆ. ದಿನ ಪೂರ್ತಿ ಕೆಲಸ ಮಾಡಿ ಪೋಷಕರು ಸುಸ್ತಾಗಿ ಮನೆಗೆ ಬಂದ್ರೆ ಮಕ್ಕಳು ಗೂಗಲ್ ಸರ್ಚ್ ಮಾಡಿ ಮಾಹಿತಿ ಹೇಳುವಂತೆ ಕಾಟ ನೀಡುತ್ತಿದ್ದಾರೆ. ಯಾವುದೇ ಡೌಟ್ ಇದ್ರೂ ಗೂಗಲ್ ಮಾಡಿ ಮಾಹಿತಿ ಹೇಳು ಅಂತಿದ್ದಾರೆ. ಮಕ್ಕಳು ಏನು ಕೇಳಿದ್ರು ಗೂಗಲ್ ಮಾಡಿ ಅಂತಾ ಹೇಳಿ ಕೊಡ್ತೀದ್ದಾರೆ. ಇದು ಸದ್ಯ ಪೋಷಕರ ಪರದಾಟಕ್ಕೆ ಕಾರಣವಾಗಿದೆ. ಲಕ್ಷ ಲಕ್ಷ ಶುಲ್ಕ ಕಟ್ಟಿ ಎಲ್ಲವನ್ನ ಗೂಗಲ್ ಮೂಲಕ ತಿಳಿಯುವುದಾರೆ ನಾವು ಶಾಲೆಗೆ ಮಕ್ಕಳನ್ನ ಯಾಕೆ ಕಳಿಸಬೇಕು ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಇಂಟರ್ನೆಟ್ ಪ್ರಪಂಚದಲ್ಲಿ ಪೋಷಕರು ಮಕ್ಕಳಿಗೆ ಹೇಳಿಕೊಡಲು ಸಮಯವಿಲ್ಲವೆಂದರೇಗೆ?

ಇನ್ನು ಈ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟ ಮಾತ್ರ ಹಾರಿಕೆ ಉತ್ತರ ನೀಡುತ್ತಿದೆ. ಸದ್ಯ ಎಲ್ಲವೂ ಇಂಟರ್ನೆಟ್ ಪ್ರಪಂಚ. ಅಂತರಜಾಲದಲ್ಲಿ ಎಲ್ಲವೂ ಸಿಗುತ್ತೆ ಆದ್ರೆ ಪೋಷಕರು ಹೇಳಿ ಕೊಡಬೇಕು. ಗೂಗಲ್ ಮೂಲಕ ಮಗು ಹೆಚ್ಚಿನ ವಿಷಯ ತಿಳಿಯಲು ಸಹಾಯ ಆಗುತ್ತೆ. ಎಲ್ಲವೂ ಆನ್ಲೈನ್ ಮಯವಾಗಿದೆ. ಪೋಷಕರು ಮಕ್ಕಳಿಗೆ ಇಷ್ಟು ಹೇಳಿ ಕೊಡಲು ಸಮಯ ಇಲ್ಲ ಅಂದ್ರೆ ಹೇಗೆ? ಎಂದು ಖಾಸಗಿ ಶಾಲೆಗಳ ಮಾಲೀಕರು ಪ್ರಶ್ನೆ ಮಾಡಿದ್ದಾರೆ.

ಒಟ್ನಲ್ಲಿ ಕಳೆದ ಎರಡು ಮೂರು ವರ್ಷದಿಂದ ಶಾಲಾ ಮಕ್ಕಳ ಕಲಿಕೆಯನ್ನ ಕೊರೊನಾ ನುಂಗಿ ಹಾಕಿದ್ದಲ್ಲದೆ, ಮೊಬೈಲ್ ಪಾಠದಂತಹ ಹೊಸ ಸಮಸ್ಯೆ ಹುಟ್ಟು ಹಾಕಿದೆ. ಶಿಕ್ಷಕರು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಗೂಗಲ್, ಯೂಟ್ಯೂಬ್ ಮೊರೆ ಹೋಗ್ತಿದ್ದಾರೆ. ಆದ್ರೆ ಇದು ಪೋಷಕರ ಆತಂಕವನ್ನ ತುಸು ಹೆಚ್ಚು ಮಾಡಿದ್ದು ಮಕ್ಕಳ ಮೊಬೈಲ್ ಗೀಳಿಗೆ ಬಲಿಯಾಗ್ತಾರೇನೋ ಅನ್ನೊ ಭಯ ಪೋಷಕರಲ್ಲಿ ಟೆನ್ಷನ್ ತಂದಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ