ಬೆಂಗಳೂರು, ಆ.27: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ(Digital media)ಗಳು ಹೆಚ್ಚು ಪ್ರಚಲಿತವಾಗಿದ್ದು, ಅದರಲ್ಲಿ ಸರ್ಕಾರದ ಜಾಹೀರಾತು ಪ್ರಕಟ ಮಾಡುವುದರಿಂದ ಹೆಚ್ಚು ಯುವ ಸಮೂಹವನ್ನು ತಲುಪಲು ಸಹಾಯವಾಗುತ್ತದೆ. ಹೀಗಾಗಿ ಸಾಂಪ್ರದಾಯಿಕ ಜಾಹೀರಾತುಗಳಿಗೆ ಹೋಲಿಸಿದರೆ ಡಿಜಿಟಲ್ ಜಾಹೀರಾತುಗಳು ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತದೆ. ಈ ಹಿನ್ನಲೆ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ 2024 ನ್ನು ಜಾರಿಗೊಳಿಸಿ, ಡಿಜಿಟಲ್ ಜಾಹೀರಾತಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ.
ಈ ಹಿನ್ನಲೆ ಡಿಜಿಟಲ್ ಜಾಹೀರಾತುಗಳಿಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಲು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಿಜಿಟಲ್ ಇನಫ್ಲುಯೆನ್ಸರ್ಗಳ ಆಯ್ಕೆಗೆ ಮಾನದಂಡ ನಿಗದಿ ಮಾಡಿದ್ದು, ಡಿಜಿಟಲ್ ಜಾಹೀರಾತು ಏಜೆನ್ಸಿಗಳಿಗೂ ಮಾನದಂಡ ಹೇರಲಾಗಿದೆ.
ಇದನ್ನೂ ಓದಿ:ಸೈಬರ್ ವಂಚನೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ? ವೈಯಕ್ತಿಕ ಮಾಹಿತಿ ಕಾಪಾಡಲು ಈ ಮಾರ್ಗಗಳು ಸಾಕು
ವಿಡಿಯೋ ಸ್ಕ್ರೀಮಿಂಗ್ ಪ್ಲಾಟ್ಫಾರ್ಮ್ಗಳು: ಗೂಗಲ್(ಯೂಟ್ಯೂಬ್), ಮೆಟಾ(ಫೇಸ್ಬುಕ್), ಇನ್ಸ್ಟಾಗ್ರಾಂ, ವಾಟ್ಸಾಪ್ ಬಿಸಿನೆಸ್, ಇತರೆ.
ಸರ್ಚ್ ಇಂಜಿನ್ಗಳು: ಗೂಗಲ್, ಬಿಂಗ್ ಮತ್ತು ಇತರೆ.
ಸಾಮಾಜಿಕ ಜಾಲತಾಣಗಳು: ಎಕ್ಸ್(ಟ್ವೀಟರ್) ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಟೆಲಿಗ್ರಾಂ, ಲಿಂಕ್ಡ್ಇನ್, ಇತ್ಯಾದಿ.
ಒಟಿಟಿ ಪ್ಲಾಟ್ಫಾರ್ಮ್: ನೆಟ್ಫ್ಲಿಕ್ಸ್, ಅಮೇಜಾನ್ ಫ್ರೈಮ್, ಸನ್ನೆಕ್ಸ್ಟ್, ಇತರೆ.
ಫಿನ್ಟೆಕ್ ಪ್ಲಾಟ್ಫಾರ್ಮ್: ಪೇಟಿಎಂ, ಫೋನ್ಪೇ ಮತ್ತು ಗೂಗಲ್ಪೇ ಇತರೆ.
ಹೆಚ್ಚಿನ ಮಾಹಿತಿಗಾಗಿ ಈ ಪಿಡಿಎಫ್ ಮೇಲೆ ಕ್ಲಿಕ್ ಮಾಡಿ
Digital Advertising Guidelines – 2024
*ಡಿಜಿಟಲ್ ಜಾಹೀರಾತಿಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಅಂಪರ್ಕ ಇಲಾಖೆಯೊಂದಿಗೆ ಸಹಯೋಗ ಹೊಂದಲು ಎಜೆನ್ಸಿಯ ಈ ಕೆಳಗಿನ ಮಾನದಂಡಗಳು ಪೂರೈಸಬೇಕು.
*ಭಾರತ ಸರ್ಕಾರದ ರಿಜಿಸ್ಟಾರ್ ಆಫ್ ಕಂಪನೀಸ್ನಲ್ಲಿ ನೋಂದಣಿಯಾದ ಕಾನೂನುಬದ್ದ ಸಂಘಟಿತ ಘಟಕವಾಗಿರಬೇಕು-ಪ್ರೈವೇಟ್ ಲಿಮಿಟೆಡ್ ಕಂಪನಿ, ಪಬ್ಲಿಕ್ ಲಿಮಿಟೆಡ್ ಕಂಪನಿ, ಲಿಮಿಟೆಡ್ ಲಯಬಿಲಿಟಿ ಪಾಲುದಾರಿಕೆ.
*ಎಂಪ್ಯಾನೆಲಿಂಗ್ ಸಮಯದಲ್ಲಿ ಕನಿಷ್ಟ ಎರಡು ವರ್ಷವಾಗಿರಬೇಕು.
*ಮಾನ್ಯವಾದ ಜಿಎಸ್ಟಿ ನೋಂದಣಿ ಇರಬೇಕು.
*ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಛೇರಿ ಇರಬೇಕು.
*ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಪ್ರಾಮುಖ್ಯತೆ ಇರಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 pm, Tue, 27 August 24