ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ಡಿಜಿಟಲ್ ಬಂಧನದ ಬೆದರಿಕೆ; ಏನಿದು ಡಿಜಿಟಲ್ ಅರೆಸ್ಟ್?
ಟೆಕ್ನಾಲಜಿ ಅಭಿವೃದ್ಧಿಯಾಗುತ್ತಿದ್ದಂತೆ ಸೈಬರ್ ವಂಚಕರ ಹಾವಳಿಯೂ ಹೆಚ್ಚಾಗುತ್ತಿದೆ. ಉದ್ಯಮಿ, ಸರ್ಕಾರಿ ನೌಕರರು, ಖಾಸಗಿ ನೌಕರರು, ಸಾಮಾನ್ಯ ಜನರನ್ನೂ ಸೈಬರ್ ಚೋರರು ವಂಚಿಸುತ್ತಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟ ಸೈಬರ್ ಚೋರರು, ಕರ್ನಾಟಕದ ಹೈಕೋರ್ಟ್ ನ್ಯಾಯಾಧೀಶರಿಗೆ ಡಿಜಿಟಲ್ ಅರೆಸ್ಟ್ನ ಬೆದರಿಕೆ ಹಾಕಿದ್ದಾರೆ. ಹಾಗಿದ್ದರೆ ಡಿಜಿಟಲ್ ಅರೆಸ್ಟ್ ಎಂದರೇನು? ಇಲ್ಲಿದೆ ಮಾಹಿತಿ.
ಬೆಂಗಳೂರು, ಮಾ.23: ಟೆಕ್ನಾಲಜಿ ಅಭಿವೃದ್ಧಿಯಾಗುತ್ತಿದ್ದಂತೆ ಸೈಬರ್ ವಂಚಕರ ಹಾವಳಿಯೂ ಹೆಚ್ಚಾಗುತ್ತಿದೆ. ಉದ್ಯಮಿ, ಸರ್ಕಾರಿ ನೌಕರರು, ಖಾಸಗಿ ನೌಕರರು, ಸಾಮಾನ್ಯ ಜನರನ್ನೂ ಸೈಬರ್ ಚೋರರು ವಂಚಿಸುತ್ತಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟ ಸೈಬರ್ ಚೋರರು, ಕರ್ನಾಟಕದ ಹೈಕೋರ್ಟ್ (Karnataka High Court) ನ್ಯಾಯಾಧೀಶರಿಗೆ ಡಿಜಿಟಲ್ ಅರೆಸ್ಟ್ನ ಬೆದರಿಕೆ ಹಾಕಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂದರೆ, ಸೈಬರ್ ಅಪರಾಧಿಗಳು ಪೊಲೀಸ್ ಅಥವಾ ತನಿಖಾ ಸಂಸ್ಥೆಗಳ ಸೋಗಿನಲ್ಲಿ ವ್ಯಕ್ತಿಗಳನ್ನು ಮೋಸಗೊಳಿಸುವ ತಂತ್ರವಾಗಿದೆ. ದೂರವಾಣಿ ಕರೆಗಳು ಅಥವಾ ಡಿಜಿಟಲ್ ವಿಧಾನಗಳ ಮೂಲಕ ಜನರನ್ನು ಸಂಪರ್ಕಿಸಿ ಬಂಧನಕ್ಕೆ ವಾರಂಟ್ ಇದೆ ಅಥವಾ ದೂರು ದಾಖಲಾಗಿದೆ. ವಿಚಾರಣೆಗೆ ಹಾಜರಾಗಬೇಕು ಎಂದು ಬೆದರಿಕೆ ಹಾಕುತ್ತಾರೆ. ಅಲ್ಲದೆ, ವಿನಾಯಿತಿ ಬೇಕೆಂದರೆ ಹಣ ನೀಡುವಂತೆ ಸೂಚಿಸುತ್ತಾರೆ. ಅಲ್ಲದೆ, ವೈಯಕ್ತಿಕ ಅಥವಾ ಹಣಕಾಸಿನ ವಿವರಗಳಂತಹ ಮಾಹಿತಿಯನ್ನು ಪಡೆದು ವಂಚಿಸುತ್ತಾರೆ.
ಇದನ್ನೂ ಓದಿ: ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ!
ಇದೇ ರೀತಿಯಾಗಿ ಕರ್ನಾಟಕದ ಹೈಕೋರ್ಟ್ನ ಇಬ್ಬರು ನ್ಯಾಯಾಧೀಶರಿಗೆ ಸೈಬರ್ ಅಪರಾಧಿಗಳು ಡಿಜಿಟಲ್ ಅರೆಸ್ಟ್ನ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಇಬ್ಬರು ನ್ಯಾಯಾಧೀಶರ ನಿರ್ದೇಶನದ ಮೇರೆಗೆ ಹೈಕೋರ್ಟ್ ಭದ್ರತೆ ಪೊಲೀಸ್ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಎಸ್ ಜಿ ಪಂಡಿತ್ ಹಾಗೂ ಪ್ರದೀಪ್ ಸಿಂಗ್ ಹೆರೂರು ಅವರಿಗೆ ಸೈಬರ್ ಖದೀಮರು ಕರೆ ಮಾಡಿ ನಿಮ್ಮ ನಂಬರ್ನಿಂದ ಅಕ್ಷೇಪಾರ್ಹ ಸಂದೇಶ ಹಾಗೂ ಜಾಹೀರಾತು ಬರುತ್ತಿದೆ. ಮಹಾರಾಷ್ಟ್ರದ ಮುಂಬೈನ ಅಂದೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಮ್ಮನ್ನ ಬಂಧನ ಮಾಡುತ್ತೇವೆ. ಬಂಧನ ಮಾಡಬಾರದೆಂದರೆ ಹಣ ಕೊಡಿ. ಪ್ರಕರಣ ಇತ್ಯರ್ಥ ಮಾಡುವುದಾಗಿ ಹೇಳಿದ್ದಾರೆ. ಸದ್ಯ, ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ