ಪ್ಯಾಕ್​ ಮಾಡಿದ ಆಹಾರ ಪದಾರ್ಥಗಳ ಮೇಲೆ ಮಾತ್ರ ಜಿಎಸ್​​ಟಿ ಹಾಕಲಾಗಿದೆ: ಸಿಎಂ ಬೊಮ್ಮಾಯಿ

ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್​ಟಿ ಹಾಕಿದ ವಿಚಾರವಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಪ್ಯಾಕ್​ ಮಾಡಿದ ಆಹಾರ ವಸ್ತುಗಳ ಮೇಲೆ ಮಾತ್ರ ಜಿಎಸ್​​ಟಿ (GST) ಹಾಕಲಾಗಿದೆ ಎಂದು ತಿಳಿಸಿದರು.

ಪ್ಯಾಕ್​ ಮಾಡಿದ ಆಹಾರ ಪದಾರ್ಥಗಳ ಮೇಲೆ ಮಾತ್ರ ಜಿಎಸ್​​ಟಿ ಹಾಕಲಾಗಿದೆ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 18, 2022 | 4:53 PM

ಬೆಂಗಳೂರು: ಆಹಾರ ಧಾನ್ಯಗಳ ಮೇಲೆ ಶೇ.5ರಷ್ಟು ಜಿಎಸ್​ಟಿ ಹಾಕಿದ ವಿಚಾರವಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಾತನಾಡಿ ಪ್ಯಾಕ್​ ಮಾಡಿದ ಆಹಾರ ವಸ್ತುಗಳ ಮೇಲೆ ಮಾತ್ರ ಜಿಎಸ್​​ಟಿ (GST) ಹಾಕಲಾಗಿದೆ ಎಂದು ತಿಳಿಸಿದರು. ಹಾಲಿನ (Milk) ಮೇಲೆ ಯಾವುದೇ ಜಿಎಸ್​​​ಟಿ ಹಾಕಿಲ್ಲ. ಬ್ರ್ಯಾಂಡೆಡ್​ ಆಹಾರ ಪದಾರ್ಥಗಳಿಗೆ ಮಾತ್ರ ಶೇ 5 ರಷ್ಟು ಜಿಎಸ್​ಟಿ ಹಾಕಲಾಗಿದೆ. ಅದನ್ನು ಕ್ಲೇಮ್ ಮಾಡಲು ಅವಕಾಶವಿದೆ‌ ಎಂದರು.

ಇದನ್ನು ಮಾಡದೇ ಇದ್ದಿದ್ದರೆ ಗ್ರಾಹಕರಿಗೆ ಟ್ಯಾಕ್ಸ್ ಬೀಳುತ್ತಿತ್ತು. ಮರುಪಾವತಿ ಮಾಡುವ ಸಾಧ್ಯತೆಯಿದೆ.  ಮರುಪಾವತಿ ಮಾಡಿದರೆ ಈಗಿರುವ ದರ ಹೆಚ್ಚಳ ಆಗಲ್ಲ. ಇದರ ಬಗ್ಗೆ ನಾವು ಗಮನ ಕೊಡುತ್ತೇವೆ. ಮರುಪಾವತಿ ಮಾಡುವ ಅವಕಾಶ ಪಡೆದುಕೊಳ್ಳಬೇಕು. ಜೊತೆಗೆ ಗ್ರಾಹಕರಿಗೆ ಪಾಸ್ ಆನ್ ಮಾಡಬಾರದು. ಇದನ್ನು ಜೆಎಸ್​ಟಿ ಕೌನ್ಸಿಲ್​ನಲ್ಲಿ ಮಾತಾಡುತ್ತೇವೆ ಎಂದು ಹೇಳಿದ್ದಾರೆ.

ವ್ಯಾಪಾರಸ್ಥರು ದರ ಹೆಚ್ಚಳ‌ ಮಾಡಿದ್ದಾರೆ, ಆದರೆ ದರ ಹೆಚ್ಚಳ‌ ಮಾಡುವ ಅವಶ್ಯಕತೆಯಿಲ್ಲ. ಶೇ 5 ರಷ್ಟು ಟ್ಯಾಕ್ಸ್ ಮರುಪಾವತಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಮರುಪಾವತಿ ಮಾಡಿಕೊಂಡರೆ ದರ ಹೆಚ್ಚಳ ಮಾಡುವ ಅವಶ್ಯಕತೆಯಿಲ್ಲ. ಇದನ್ನು ಜೆಎಸ್​​ಟಿ ಕೌನ್ಸಿಲ್ ಮೂಲಕ ನಿರ್ದೇಶನ ಕೊಡಿಸುತ್ತೇನೆ ಎಂದು ಮಾತನಾಡಿದರು.

Published On - 4:36 pm, Mon, 18 July 22