ಬೇಗೂರು ಪೊಲೀಸ್ ಠಾಣೆಯಲ್ಲಿ ಮಿಸ್ ಫೈಯರ್, ಕಾನ್ಸ್‌ಟೇಬಲ್ ಎಡವಟ್ಟಿನಿಂದ ಆದ ಅನಾಹುತವೇನು?
ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ವೇಳೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಮಿಸ್ ಫೈಯರ್ ಆಗಿದೆ. ಕಾನ್ಸ್‌ಟೇಬಲ್ ಎಡವಟ್ಟಿನಿಂದ ಮಿಸ್ ಫೈಯರ್ ಆಗಿದ್ದು, ರೈಟರ್ ಕಾಲಿಗೆ ಗುಂಡು ತಗುಲಿದೆ.
ಬೆಂಗಳೂರು, (ಮಾರ್ಚ್ 22): ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯಲ್ಲಿ(begur police station )ಮಿಸ್ ಫೈಯರ್ ಆಗಿರುವ ಘಟನೆ ನಡೆದಿದೆ. ಬೇಗೂರು ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ವೆಂಕಣ್ಣ ಅವರ ಎಡವಟ್ಟಿನಿಂದ ಮಿಸ್ ಫೈಯರ್ (Misfire) ಆಗಿದ್ದು, ರೈಟರ್ ಅಂಬುದಾಸ್ ಎನ್ನುವರ ಎಡಕಾಲಿಗೆ ಗುಂಡು ತಗುಲಿದೆ. ಕೂಡಲೇ ಗಾಯಾಳು ಅಂಬುದಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಕುಂದರೆಡ್ಡಿ ಎನ್ನುವವರು ಬಂದೂಕುಗಳನ್ನು ಜಮೆ ಮಾಡಿಕೊಳ್ಳುತ್ತಿದ್ದರು. ಬುಲೆಟ್ ಮ್ಯಾಗಜಿನ್ ಕಳಚಿ ಪಿಸ್ತೂಲ್ ಜಮೆ ಮಾಡಿದ್ದರು.ಈ ವೇಳೆ ಮಿಸ್ ಫೈಯರ್ ಆಗಿದೆ. ಮ್ಯಾಗಜಿನ್ ನಲ್ಲಿದ್ದ ಒಂದು ಬುಲೆಟ್ ಪಿಸ್ತೂಲ್ ನಲ್ಲಿ ಲಾಕ್ ಆಗಿರುವ ಸಾಧ್ಯತೆ ಇದ್ದು, ಪರಿಶೀಲನೆ ವೇಳೆ ಟ್ರಿಗರ್ ಒತ್ತಿದಾಗ ಮಿಸ್ ಫೈಯರ್ ಆಗಿದೆ ಎಂದು ತಿಳಿದುಬಂದಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಬೇಗೂರು ;ಪೊಲೀಸ್ ಠಾಣೆಗೆ ದೌಡಾಯಿಸಿ ಪರಿಶೀಲನೆ ನಡೆಸಿದೆ. ಹೇಗೆ ಮಿಸ್ ಫೈಯರ್ ಆಯ್ತು? ಕಾರಣವೇನು ಎನ್ನುವುದರ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ