ಬೆಂಗಳೂರು: ನಗರದಲ್ಲಿ ಬಿಲ್ಡರ್ ಮತ್ತು ಕಟ್ಟಡದ ಮಾಲೀಕನ ಮೇಲೆ ಗುಂಡಿನ ದಾಳಿ (Gun fire) ನಡೆಸಿರುವಂತಹ ಘಟನೆ ಕೆ.ಆರ್.ಪುರಂನ ಸೀಗೆಹಳ್ಳಿ ಬಳಿಯ ಹಾಸ್ಯಗಾರ್ಡನ್ನಲ್ಲಿ ಇಂದು (ಡಿ. 8) ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ನಡೆದಿದೆ. ಬಿಲ್ಡರ್ ಅಶೋಕ್, ಕಟ್ಟಡದ ಮಾಲೀಕ ಶಿವಾರೆಡ್ಡಿ ಮೇಲೆ ಫೈರಿಂಗ್ ಮಾಡಲಾಗಿದೆ. ಬಿಲ್ಡರ್ ಅಶೋಕ್ ಮೇಲೆ ಒಂದು ಸುತ್ತು ಗುಂಡಿನ ದಾಳಿ ಮಾಡಿದ್ದು, ಕಟ್ಟಡದ ಮಾಲೀಕ ಶಿವಾರೆಡ್ಡಿ ಮೇಲೆ ನಾಲ್ಕೈದು ಸುತ್ತು ಫೈರಿಂಗ್ ಮಾಡಿದ್ದಾರೆ. ಈ ವೇಳೆ ಗುಂಡು ತಗುಲಿ ಗಂಭೀರ ಗಾಯಗೊಂಡಿರುವ ಅಶೋಕ್, ಶಿವಾರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಂಧ್ರ ಪ್ರದೇಶದಿಂದ ಬಂದಿರುವ ಗ್ಯಾಂಗ್ನಿಂದ ಕೃತ್ಯವೆಸಗಲಾಗಿದೆ ಎಂದು ಶಂಕಿಸಲಾಗಿದೆ. ರಸ್ತೆ ಬದಿ ನಿಂತಿದ್ದಾಗ ಏಕಾಏಕಿ ಬಂದು ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.
ಶಿವಾರೆಡ್ಡಿ ಆಂಧ್ರದ ಮದನಪಲ್ಲಿ ಠಾಣೆ ರೌಡಿಶೀಟರ್ ಆಗಿದ್ದರು. ಎರಡು ಕೊಲೆಗಳು ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪವಿದೆ. ಕೆ.ಆರ್ ಪುರಂ ಲಿಮಿಟ್ಸ್ನಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿಸುತ್ತಿದ್ದ. ಮಧ್ಯಾಹ್ನದ ವೇಳೆಗೆ ಕಾಮಗಾರಿ ವೀಕ್ಷಿಸಲು ತನ್ನ ಡ್ರೈವರ್ ಅಶೋಕ್ ರೆಡ್ಡಿ ಜೊತೆ ಹೋಗಿದ್ದ. ಈ ವೇಳೆ ಒಟ್ಟು ನಾಲ್ಕು ಜನ ಆರೋಪಿಗಳಿಂದ ಗುಂಡಿನ ದಾಳಿ ಮಾಡಿದ್ದಾರೆ. ಎರಡು ಬೈಕ್ಗಳಲ್ಲಿ ಬಂದು ಶೂಟೌಟ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: Crime News: ದೆಹಲಿಯ ಚರಂಡಿಯಲ್ಲಿ ಮಹಿಳೆಯ ಕೊಳೆತ ಶವ ತುಂಬಿಟ್ಟ ಸೂಟ್ಕೇಸ್ ಪತ್ತೆ
ರಾಬರಿಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ
ಗದಗ: ರಾಬರಿಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ವೀರೇಶ್ವರ ಲೈಬ್ರರಿ ಹತ್ತಿರ ರಾಬರಿ ಮಾಡಲು ಕಿರಾತಕರು ತಯಾರಿ ನಡೆಸಿದ್ದರು. ಉಮೇಶ ಕವಲೂರ ಅಲಿಯಾಸ ಕುಮಡಿ, ವಿನೋದ ಚವ್ಹಾಣ ಅಲಿಯಾಸ ವಿನ್ಯಾ ಬಂಧಿತರು. ಇಬ್ಬರಿಂದ ಚೈನ್, ಪಂಚ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ: ಸುಟ್ಟು ಕರಕಲಾದ ಲಕ್ಷಾಂತರ ಮೌಲ್ಯದ ವಸ್ತುಗಳು
ಕಲಬುರಗಿ: ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ತಗುಲಿರುವಂತಹ ಘಟನೆ ಜಿಲ್ಲೆಯ ವಾಡಿ ಪಟ್ಟಣದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಸುನಿತಾ ಅನ್ನೋರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸುನಿತಾ ಬೀದಿ ಬದಿ ತರಕಾರಿ ಮಾರುವ ವ್ಯಾಪಾರಿ.
ಐವತ್ತು ಸಾವಿರ ನಗದು ಸೇರಿದಂತೆ ಗೃಹಪಯೋಗಿ ವಸ್ತುಗಳ ಬೆಂಕಿಗಾಹುತಿಯಾಗಿವೆ. ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳೆದುಕೊಂಡು ಮಹಿಳೆ ಕಂಗಾಲಾಗಿದ್ದಾರೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ನವಲಗುಂದದ ಲಾಡ್ಜ್ನಲ್ಲಿ ಪ್ರೇಮಿಗಳು ಆತ್ಮಹತ್ಯೆ, ಪರಿಚಯಸ್ಥರ ಮೂಲಕ ರೂಮ್ ಪಡೆದಿದ್ದ ಜೋಡಿ
ಗಂಭೀರ ಗಾಯಗೊಂಡಿದ್ದ ಮತ್ತೊಂದು ಮಗು ಸಹ ಸಾವು
ಕೋಲಾರ: ಮಕ್ಕಳಿಗೆ ಪೆಟ್ರೋಲ್ ಸುರಿದು ತಾಯಿ ಬೆಂಕಿಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಗಾಯಗೊಂಡಿದ್ದ ಮತ್ತೊಂದು ಮಗು ಚಿಕಿತ್ಸೆ ಫಲಿಸದೆ 6 ವರ್ಷದ ಉದಯಶ್ರೀ ಕೊನೆಯುಸಿರೆಳೆದಿದ್ದಾಳೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಅಂಜನಾದ್ರಿ ಬೆಟ್ಟದಲ್ಲಿ ಆತ್ಮಹತ್ಯೆ ಯತ್ನಿಸಲಾಗಿತ್ತು. ಆಂಧ್ರ ಮೂಲದ ಜ್ಯೋತಿ ಎಂಬಾಕೆ ಆತ್ಮಹತ್ಯೆ ನಿರ್ಧಾರ ಮಾಡಿ ತನ್ನಿಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು. ಈ ವೇಳೆ ಮೊದಲ ಮಗು 8 ವರ್ಷದ ಅಕ್ಷಯ ನಿನ್ನೆ ಸಾವನ್ನಪ್ಪಿದ್ದಳು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:49 pm, Thu, 8 December 22