ಬೆಂಗಳೂರು: ಬಿಟ್‌ಕಾಯಿನ್ ಕೇಸ್‌ಗೆ ಸಂಬಂಧಿಸಿ ಶ್ರೀಕೃಷ್ಣ ಸಹೋದರನಿಗೂ ಸಂಕಷ್ಟ ಎದುರಾಗಿದೆ. ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸಹೋದರ ಸುದರ್ಶನ್‌ಗೆ ಸಂಕಷ್ಟ ಉಂಟಾಗಿದೆ. ನೆದರ್‌ಲೆಂಡ್‌ನಲ್ಲಿ ಇಂಜಿನಿಯರ್ ಆಗಿರುವ ಸುದರ್ಶನ್ ತಂದೆಯನ್ನು ನೋಡಲು ಬೆಂಗಳೂರಿಗೆ ಬಂದಿದ್ದಾಗ ನೋಟಿಸ್ ನೀಡಲಾಗಿದೆ. ಮತ್ತೆ ನೆದರ್‌ಲೆಂಡ್‌ಗೆ ತೆರಳದಂತೆ ಇಡಿ ಅಧಿಕಾರಿಗಳಿಂದ ಅಡ್ಡಿ ಉಂಟಾಗಿದೆ.
ಈ ಮಧ್ಯೆ ಲುಕ್‌ಔಟ್ ನೋಟಿಸ್ ನೀಡಿದ್ದ ಇಡಿ ಕ್ರಮ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಹೈಕೋರ್ಟ್‌ಗೆ ಶ್ರೀಕಿ ಸಹೋದರ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಏರ್‌ಪೋರ್ಟ್‌ಗೆ ತೆರಳಿದಾಗ ಪ್ರಯಾಣಕ್ಕೆ ನಿರ್ಬಂಧ ತಿಳಿಯಿತು. ಇಡಿ ನಿರ್ಬಂಧದಿಂದ ಉದ್ಯೋಗದ ಹಕ್ಕಿಗೆ ಧಕ್ಕೆಯಾಗಿದೆ. ಪ್ರಯಾಣಿಸುವ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ವಾದ ಮಂಡಿಸಲಾಗಿದೆ. ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್‌ನಿಂದ ನೋಟಿಸ್ ನೀಡಲಾಗಿದೆ. ಅರ್ಜಿದಾರರ ಪ್ರಶ್ನೆಗಳಿಗೆ ಉತ್ತರಿಸಲು ಹೈಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ: ಬಿಟ್‌ಕಾಯಿನ್ ಆರೋಪಿ ಶ್ರೀಕಿ ಉಳಿಸಲು ಸರ್ಕಾರದ ಯತ್ನ: ಪ್ರತಿಪಕ್ಷಗಳ ಆರೋಪ ಗೃಹ ಸಚಿವರ ಉತ್ತರ
ಇದನ್ನೂ ಓದಿ: ಹ್ಯಾಕರ್ ಶ್ರೀಕಿ ಭದ್ರತೆಗೆ ಸಬ್ಇನ್ಸ್ಪೆಕ್ಟರ್ ನಿಯೋಜನೆ; ಆದ್ರೆ ಆಸಾಮಿ ಎಲ್ಲಿದ್ದಾನೊ ಗೊತ್ತಿಲ್ಲ ಎಂದ ಕುಟುಂಬಸ್ಥರು!