ಹ್ಯಾಕರ್ ಶ್ರೀಕಿ ಭದ್ರತೆಗೆ ಸಬ್​ಇನ್ಸ್‌ಪೆಕ್ಟರ್ ನಿಯೋಜನೆ; ಆದ್ರೆ ಆಸಾಮಿ ಎಲ್ಲಿದ್ದಾನೊ ಗೊತ್ತಿಲ್ಲ ಎಂದ ಕುಟುಂಬಸ್ಥರು!

ಹ್ಯಾಕರ್ ಶ್ರೀಕಿ ಭದ್ರತೆಗೆ ಸಬ್​ಇನ್ಸ್‌ಪೆಕ್ಟರ್ ನಿಯೋಜನೆ; ಆದ್ರೆ ಆಸಾಮಿ ಎಲ್ಲಿದ್ದಾನೊ ಗೊತ್ತಿಲ್ಲ ಎಂದ ಕುಟುಂಬಸ್ಥರು!
ಹ್ಯಾಕರ್ ಶ್ರೀಕಿ ಭದ್ರತೆಗೆ ಸಬ್​ಇನ್ಸ್‌ಪೆಕ್ಟರ್ ನಿಯೋಜನೆ; ಆದ್ರೆ ಆಸಾಮಿ ಎಲ್ಲಿದ್ದಾನೊ ಗೊತ್ತಿಲ್ಲ ಎಂದ ಕುಟುಂಬಸ್ಥರು!

Hacker Sri Krishna: ವಿರೋಧ ಪಕ್ಷದ ಆರೋಪದ ಬೆನ್ನಲ್ಲೆ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು ಶ್ರೀಕಿಗೆ ಗನ್ ಮ್ಯಾನ್ ನೀಡಲು ಮುಂದಾಗಿದ್ದಾರೆ. ಮನೆಯವರನ್ನ ಹೆಚ್ಚು ವಿಚಾರಿಸಿದಾಗ ಶ್ರೀಕಿ ಎಲ್ಲಿದ್ದಾನೊ ಗೊತ್ತಿಲ್ಲ ಎಂದು ಉತ್ತರಿಸುತ್ತಿದ್ದಾರಷ್ಟೆ.

TV9kannada Web Team

| Edited By: sadhu srinath

Nov 17, 2021 | 2:57 PM

ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಜಾಗತಿಕ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಪೊಲೀಸ್ ಭದ್ರತೆ ಒದಗಿಸಿದ್ದಾರೆ. ಶ್ರೀಕೃಷ್ಣ ಭದ್ರತೆಗೆ ಒಬ್ಬ ಸಬ್ ಇನ್ಸ್‌ಪೆಕ್ಟರ್ ಅನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಮೇರೆಗೆ ನಿಯೋಜನೆ ಮಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಡೆಯಿಂದ ಶ್ರೀಕಿ ಜೀವಕ್ಕೆ ಅಪಾಯವಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಆದರೆ ಶ್ರೀಕಿಗೆ ಭದ್ರತೆ ನೀಡಲು ಖುದ್ದು ಕಮೀಷನರ್ ಕಮಲ್ ಪಂತ್ ಸೂಚನೆ ಅವರೇ ಸೂಚನೆ ನೀಡಿರುವುದರಿಂದ ಶ್ರೀಕಿ ಮನೆಯವರನ್ನ ಭದ್ರತೆಗೆ ನಿಯೋಜನೆಗೊಂಡ ಸಬ್ ಇನ್ಸ್‌ಪೆಕ್ಟರ್ ಸಂಪರ್ಕಿಸಿದ್ದಾರೆ. ಈ ವೇಳೆ ಶ್ರೀಕಿ ಎಲ್ಲಿದ್ದಾನೋ ಗೊತ್ತಿಲ್ಲ, ಮನೆಗೆ ಬರ್ತಿಲ್ಲ ಎಂದು ಅವರ ಸಹೋದರ ತಿಳಿಸಿದ್ದಾರೆ!

ಗಮನಾರ್ಹ ಸಂಗತಿಯೆಂದರೆ ಶ್ರೀಕಿ ಭದ್ರತೆಗೆ ನಿಯೋಜನೆಗೊಂಡ ಸಬ್ ಇನ್ಸ್‌ಪೆಕ್ಟರ್ ಪ್ರತಿದಿನ ಆತನ ಮನೆಗೆ ಹೋಗಿ, ಬರಿಗೈಲಿ ವಾಪಸಾಗುತ್ತಿದ್ದಾರೆ! ಶ್ರೀಕಿಗೆ ಜೀವಕ್ಕೆ ಅಪಾಯ ಇದೆ ಎಂದು ಮಾಜಿ ಸಿಎಂ ನಾಯಕ ಸಿದ್ದರಾಮಯ್ಯ ಮತ್ತು ವಕೀಲ ಸಂಕೇತ್ ಏಣಗಿ ಸಹ ಆರೋಪಿಸಿದ್ದರು.

ವಿರೋಧ ಪಕ್ಷದ ಆರೋಪದ ಬೆನ್ನಲ್ಲೆ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು ಶ್ರೀಕಿಗೆ ಗನ್ ಮ್ಯಾನ್ ನೀಡಲು ಮುಂದಾಗಿದ್ದಾರೆ. ಮನೆಯವರನ್ನ ಹೆಚ್ಚು ವಿಚಾರಿಸಿದಾಗ ಶ್ರೀಕಿ ಎಲ್ಲಿದ್ದಾನೊ ಗೊತ್ತಿಲ್ಲ ಎಂದು ಉತ್ತರಿಸುತ್ತಿದ್ದಾರಷ್ಟೆ. ಆದ್ದರಿಂದ ಶ್ರೀಕಿ ಬಗ್ಗೆ ಪೊಲೀಸರು ತಮ್ಮ ಮೂಲಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

Also Read: Sriki International hacker: ಜಾಗತಿಕ ಹ್ಯಾಕರ್ ಶ್ರೀಕಿ ಅಲಿಯಾಸ್​ ಶ್ರೀ ಕೃಷ್ಣ ಜೈಲಿನಲ್ಲಿದ್ದಾಗ ಭಗವದ್ಗೀತೆ ಓದುತ್ತಿದ್ದ!

(bengaluru city police appoint sub inspector for the security of hacker sri krishna but his whereabouts not known)

Follow us on

Related Stories

Most Read Stories

Click on your DTH Provider to Add TV9 Kannada