Marut ಯುದ್ಧ ವಿಮಾನದ ಮೇಲಿನ ಭಜರಂಗಬಲಿ ಚಿತ್ರ ತೆರವು: HAL ಸಿಎಂಡಿ ಸ್ಪಷ್ಟನೆ

| Updated By: ವಿವೇಕ ಬಿರಾದಾರ

Updated on: Feb 14, 2023 | 1:27 PM

ಮಾರುತ್​ (HLFT-42) ಯುದ್ಧ ವಿಮಾನ, ಹನುಮಾನ್​ ಅಷ್ಟೇ ಶಕ್ತಿಯುತವಾದ ವಿಮಾನವೆಂದು ಭಜರಂಗಬಲಿ ಚಿತ್ರವನ್ನು ಹಾಕಿದ್ವಿ. ಆದರೆ ಅದು ಅಪ್ರಸ್ತುತ ಎಂಬ ಕಾರಣಕ್ಕೆ ತೆರವು ಮಾಡಲಾಗಿದೆ ಎಂದು ಹೆಚ್ಎಎಲ್​​​ ಸಿಎಂಡಿ ಸಿ.ಬಿ ಅನಂತಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ.

Marut ಯುದ್ಧ ವಿಮಾನದ ಮೇಲಿನ ಭಜರಂಗಬಲಿ ಚಿತ್ರ ತೆರವು: HAL ಸಿಎಂಡಿ ಸ್ಪಷ್ಟನೆ
ಹೆಚ್ಎಎಲ್​​​ ಸಿಎಂಡಿ ಸಿ.ಬಿ ಅನಂತಕೃಷ್ಣನ್
Follow us on

ಬೆಂಗಳೂರು: ಮಾರುತ್​ (HLFT-42) ಯುದ್ಧ ವಿಮಾನ, ಹನುಮಾನ್​ ಅಷ್ಟೇ ಶಕ್ತಿಯುತವಾದ ವಿಮಾನವೆಂದು ಭಜರಂಗಬಲಿ ಚಿತ್ರವನ್ನು ಹಾಕಿದ್ವಿ. ಆದರೆ ಅದು ಅಪ್ರಸ್ತುತ ಎಂಬ ಕಾರಣಕ್ಕೆ ತೆರವು ಮಾಡಲಾಗಿದೆ ಎಂದು ಹೆಚ್ಎಎಲ್​​​ ಸಿಎಂಡಿ ಸಿ.ಬಿ ಅನಂತಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ.

ಏರೋ ಇಂಡಿಯಾ 2023 ಹಿನ್ನೆಲೆ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತುಮಕೂರು ಹೆಲಿಕಾಪ್ಟರ್ ತಯಾರಿಕಾ ಘಟಕ ಆರಂಭದಲ್ಲಿ 30 ಹೆಲಿಕಾಪ್ಟರ್ ನಿರ್ಮಾಣ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಡಿಮ್ಯಾಂಡ್ ಬಂದರೇ 90 ಹೆಲಿಕಾಪ್ಟರ್ ಸಾಮರ್ಥ್ಯ ಘಟಕಕ್ಕಿದೆ. ಈಗಾಗಲೇ 84 ಸಾವಿರ ಕೋಟಿಯ ವಿವಿಧ ಒಡಂಬಡಿಕೆಯಾಗಿದೆ. ಏರೋ ಶೋನಲ್ಲಿ ಹೆಚ್​ಎಎಲ್​ನ ಹೊಸ ಆವಿಷ್ಕಾರಗಳು ಅನಾವರಣವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: HLFT-42 “ಮಾರುತ್” ಯುದ್ಧ ವಿಮಾನದ ಮೇಲಿದ್ದ ಭಜರಂಗಬಲಿ ಚಿತ್ರ ತೆರವು

ಎಲ್​ಸಿಎ ಮಲೇಷಿಯಾ ಕಾಂಟ್ರಾಕ್ಟ್ ಸಿಗುವ ಸಾಧ್ಯತೆ ಇದೆ

ಎಲ್​ಸಿಎ ಮಲೇಷಿಯಾ ಕಾಂಟ್ರಾಕ್ಟ್ ಸಿಗುವ ಸಾಧ್ಯತೆ ಇದೆ. ತೇಜಸ್ ವಿಚಾರದಲ್ಲೂ ಮಲೇಷ್ಯಾ ಶಾರ್ಟ್ ಲೀಸ್ಟ್ ಮಾಡಿದರಲ್ಲಿ ನಾವು ಇದ್ದೇವೆ. ಅರ್ಜಂಟೈನಾ, ಈಜಿಫ್ಟ್ ಜೊತೆಗೂ ಮಾತುಕತೆ ನಡೆಯುತ್ತಿದೆ. ಅವರ ಇಂಜಿನಿಯರ್ ನಮ್ಮಲ್ಲಿಗೆ ಬಂದು ಚರ್ಚಿಸಿದ್ದಾರೆ. ಸಾಕಷ್ಟು ಆರ್ಡರ್ ಸಿಗುವ ನಿರೀಕ್ಷೆ ಇದೆ. ಹೆಚ್​ಎಎಲ್ ಉಪಕರಣಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಅರ್ಜಂಟೈನಾದಿಂದ 15 LCA ಏರ್​ಕ್ರಾಫ್ಟ್​​​ಗೆ ಬೇಡಿಕೆ ಬಂದಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ