AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ ಕೇಸ್: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ಸಿದ್ಧಾರ್ಥ ಕಪೂರ್

ಎಷ್ಟು ಜನರ ವಿಚಾರಣೆ ಮಾಡಿದರೂ ಡ್ರಗ್ಸ್ ಸುಳಿವು ಮಾತ್ರ ನಿಗೂಢವಾಗಿದೆ. ಈಗಾಗಲೇ ಡ್ರಗ್ಸ್​​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 90 ಜನರಿಗೆ ನೋಟಿಸ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ ಕೇಸ್: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ಸಿದ್ಧಾರ್ಥ ಕಪೂರ್
ಸಂಗ್ರಹ ಚಿತ್ರ
TV9 Web
| Edited By: |

Updated on:Aug 07, 2022 | 2:52 PM

Share

ಬೆಂಗಳೂರು: ನಗರದ ದಿ ಪಾರ್ಕ್​ ಹೋಟೆಲ್ ಡ್ರಗ್ಸ್​ ಪಾರ್ಟಿ (Drugs Party) ಕೇಸ್ ಸಂಬಂಧ ಡಿಜೆ ಸಿದ್ಧಾರ್ಥ ಕಪೂರ್ ವಿಚಾರಣೆಗೆ ಮತ್ತೆ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗಲು ಸಿದ್ಧಾರ್ಥ ಕಾಲಾವಕಾಶ ಕೇಳಿದ್ದಾರೆ. ಆ.15ರ ನಂತರ ವಿಚಾರಣೆಗೆ ಹಾಜರಾಗುವುದಾಗಿ ಸಿದ್ಧಾರ್ಥ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲಸೂರು ಪೊಲೀಸರು 2ನೇ ಬಾರಿ ವಿಚಾರಣೆಗೆ ಕರೆದಿದ್ದರು. ಡ್ರಗ್ಸ್ ತಂದವರು ಯಾರು ಎನ್ನುವುದನ್ನು ಪತ್ತೆ ಮಾಡಲು ಪೊಲೀಸರು ವಿಚಾರಣೆಗಾಗಿ ಕರೆ ಕಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಎಷ್ಟು ಜನರ ವಿಚಾರಣೆ ಮಾಡಿದರೂ ಡ್ರಗ್ಸ್ ಬಂದಿದ್ದು ಹೇಗೆ ಎನ್ನುವುದರ ಸುಳಿವು ಮಾತ್ರ ಸಿಗುತ್ತಿಲ್ಲ. ಈಗಾಗಲೇ ಡ್ರಗ್ಸ್​​ ಪಾರ್ಟಿ ಪ್ರಕರಣದಕ್ಕೆ ಸಂಬಂಧ ಸುಮಾರು 90 ಜನರಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ಕೇವಲ 30 ಮಂದಿಯಿಂದ ಮಾತ್ರ ಉತ್ತರ ಪಡೆಯಲಾಗಿದೆ. ಉಳಿದವರು ಪೊಲೀಸ್ ನೋಟಿಸ್​ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಉತ್ತರ ಕೊಡದವರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ಪಡುತ್ತಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಲು ಹಲಸೂರು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: Siddhanth Kapoor: ಬೆಂಗಳೂರು ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶ್ರದ್ಧಾ ಕಪೂರ್​ ಅಣ್ಣ ಸಿದ್ಧಾಂತ್​ ಕಪೂರ್​ ಹಿನ್ನೆಲೆ ಏನು?

ಬೆಂಗಳೂರು ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದಿರುವ ಸಿದ್ಧಾಂತ್​ ಕಪೂರ್​ ಅವರದ್ದು ಫಿಲ್ಮಿ ಹಿನ್ನೆಲೆಯ ಕುಟುಂಬ. ಅವರ ತಂದೆ ಶಕ್ತಿ ಕಪೂರ್​ ಅವರು ಬಾಲಿವುಡ್​ನಲ್ಲಿ ಜನಪ್ರಿಯ ನಟ. ಚಿತ್ರರಂಗದಲ್ಲಿ ಶಕ್ತಿ ಕಪೂರ್​ ಅವರ ಅನುಭವ ಅಪಾರ. ಸಿದ್ಧಾಂತ್​ ಅವರ ಸಹೋದರಿ ಶ್ರದ್ಧಾ ಕಪೂರ್​ ಅವರು ಈಗಾಗಲೇ ಹಿಂದಿ ಚಿತ್ರರಂಗದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಣ್ಣದ ಲೋಕದಲ್ಲಿ ಸಿದ್ಧಾಂತ್​ ಕಪೂರ್​ ಕೂಡ ಸಕ್ರಿಯರಾಗಿದ್ದಾರೆ. ಅದರ ನಡುವೆ ಅವರು ಡ್ರಗ್ಸ್​ ಸಹವಾಸ ಮಾಡಿರುವುದರಿಂದ ಸಂಕಷ್ಟ ಎದುರಾಗಿದೆ.

ಡ್ರಗ್ಸ್ ಪಾರ್ಟಿ ಆಯೋಜನೆ ಆರೋಪದಡಿ ಪೊಲೀಸ್​ ದಾಳಿ

ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರೋಪದಡಿ ದಿ ಪಾರ್ಕ್​ ಫೈವ್​ಸ್ಟಾರ್​ ಹೋಟೆಲ್ (The Park Five Star Hotel)  ಮೇಲೆ ಹಲಸೂರು ಪೊಲೀಸರಿಂದ (ಜೂನ್​ 13ರಂದು) ದಾಳಿ ಮಾಡಲಾಗಿತ್ತು. ಹಲಸೂರು ಬಳಿಯ GT ಮಾಲ್ ಬಳಿಯ ಪಾರ್ಕ್ ಹೋಟೆಲ್​ನ ಪಾರ್ಟಿಯಲ್ಲಿ ನಟಿ ಶ್ರದ್ಧಾ ಕಪೂರ್ ಸಹೋದರ ನಟ ಸಿದ್ಧಾಂತ್​ ಕಪೂರ್ (Bollywood Actor) ಭಾಗಿ ಶಂಕೆ ವ್ಯಕ್ತವಾಗಿತ್ತು. ರಾತ್ರಿ 12 ಗಂಟೆಗೆ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದು, ಹೋಟೆಲ್​ನಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ಪಾರ್ಟಿ  ಆಯೋಜನೆ ಮಾಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: Siddhanth Kapoor: ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ ಪ್ರಕರಣ; ನಟಿ ಶ್ರದ್ಧಾ ಕಪೂರ್​ ಸೋದರ ಸಿದ್ಧಾಂತ್​ಗೆ ನೋಟಿಸ್ ಸಾಧ್ಯತೆ

ಹಲಸೂರು ಇನ್ಸ್​ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಅಧಿಕ ಪೊಲೀಸರಿಂದ ಹೋಟೆಲ್ ಮೇಲೆ ದಾಳಿ ಮಾಡಲಾಗಿತ್ತು. ಪಾರ್ಟಿಯಲ್ಲಿದ್ದ 50ಕ್ಕೂ ಅಧಿಕ ಜನರಿಗೆ ಮೆಡಿಕಲ್ ಟೆಸ್ಟ್ ಮಾಡಲು ಮೂರು ಟಿಟಿ ವಾಹನಗಳಲ್ಲಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಪಾರ್ಟಿಯಲ್ಲಿ ಐವರು ಡ್ರಗ್ಸ್ ಸೇವನೆ ಮಾಡಿರುವುದು ಧೃಡಪಟ್ಟಿದ್ದು, ಐವರನ್ನ ವಶಕ್ಕೆ ಪಡೆದು ಎನ್‌ಡಿ ಪಿಎಸ್ ಆಕ್ಟ್ ಅಡಿ  ಹಲಸೂರು ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 2:52 pm, Sun, 7 August 22

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ