ಅಕ್ರಮವಾಗಿ ಪೆಂಗೋಲಿನ್ ಚಿಪ್ಪು ಸಾಗಿಸುತ್ತಿದ್ದ ಆರೋಪಿ ಬಂಧಿಸಿದ ಹನುಮಂತ ನಗರ ಪೊಲೀಸರು

| Updated By: ಆಯೇಷಾ ಬಾನು

Updated on: Jan 13, 2023 | 7:09 AM

Bengaluru Crime: ಪೆಂಗೋಲಿನ್ ಚಿಪ್ಪು ಸಾಗಿಸುತ್ತಿದ್ದ ಆರೋಪಿ ಕಿರಣ್​​ ನಿಂದ 25 ಲಕ್ಷ ಮೌಲ್ಯದ 30 ಕೆಜಿ ಪೆಂಗೋಲಿನ್ ಚಿಪ್ಪು ವಶಕ್ಕೆ ಪಡೆಯಲಾಗಿದೆ.

ಅಕ್ರಮವಾಗಿ ಪೆಂಗೋಲಿನ್ ಚಿಪ್ಪು ಸಾಗಿಸುತ್ತಿದ್ದ ಆರೋಪಿ ಬಂಧಿಸಿದ ಹನುಮಂತ ನಗರ ಪೊಲೀಸರು
ಆರೋಪಿ ಕಿರಣ್, ಪೆಂಗೋಲಿನ್ ಚಿಪ್ಪು
Follow us on

ಬೆಂಗಳೂರು: ಅಕ್ರಮವಾಗಿ ಪೆಂಗೋಲಿನ್ ಚಿಪ್ಪು ಸಾಗಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಹನುಮಂತ ನಗರ ಪೊಲೀಸರು ಬಂಧಿಸಿದ್ದಾರೆ. ಪೆಂಗೋಲಿನ್ ಚಿಪ್ಪು ಸಾಗಿಸುತ್ತಿದ್ದ ಆರೋಪಿ ಕಿರಣ್​​ ನಿಂದ 25 ಲಕ್ಷ ಮೌಲ್ಯದ 30 ಕೆಜಿ ಪೆಂಗೋಲಿನ್ ಚಿಪ್ಪು ವಶಕ್ಕೆ ಪಡೆಯಲಾಗಿದೆ.

ಔಷಧಿ ಹಾಗೂ ಅಲಂಕಾರಿಕ ವಸ್ತುಗಳಿಗೆ ಈ ಪೆಂಗೋಲಿಯನ್ ಚಿಪ್ಪು ಬಳಸಲಾಗುತ್ತೆ. ಒಂದು ಕೆಜಿ ಪೆಂಗೋಲಿಯನ್ ಚಿಪ್ಪಿಗೆ 70 ರಿಂದ 80 ಸಾವಿರ ರೂ ಬೆಲೆ ಬಾಳುತ್ತೆ. ಒಂದು ಪೆಂಗೋಲಿನ್ ನಿಂದ 1 ಕೆಜಿಗೂ ಕಡಿಮೆ ಚಿಪ್ಪು ಸಿಗತ್ತೆ. ಸುಮಾರು 30ಕ್ಕೂ ಅಧಿಕ ಪೆಂಗೋಲಿನ್ ಗಳನ್ನ ಕೊಂದು ಚಿಪ್ಪು ಸಂಗ್ರಹಣೆ ಮಾಡಲಾಗಿದೆ. ವಿದೇಶದಲ್ಲಿ ಪೆಂಗೋಲಿನ್ ಚಿಪ್ಪಿಗೆ ಭಾರಿ ಬೇಡಿಕೆ ಇರುವ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಿಂದ ಪೆಂಗೋಲಿನ್ ತಂದು ಸಾಗಾಟ ಮಾಡಲಾಗುತ್ತಿತ್ತು. ಸದ್ಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಈ ಶಿಕ್ಷಕ ದಂಪತಿ ವೃತ್ತಿಗೆ ಗುಡ್​​​ಬೈ ಹೇಳಿ, ಸಂಕ್ರಾಂತಿಗೆ ಬಂಪರ್ ಮೆಣಸಿನಕಾಯಿ ಬೆಳೆದರು- ವರ್ತಕರು ಹೂ ಮಾಲೆ ಹಾಕಿ ಅಭಿನಂದಿಸಿದರು!

ರಾಬರಿಗೆ ಯತ್ನಿಸಿದ್ದ ಆರೋಪಿಗಳ ಬಂಧನ‌‌

ಇನ್ನು ಮತ್ತೊಂದೆಡೆ ತಲಘಟ್ಟಪುರದಲ್ಲಿ ರಾಬರಿಗೆ ಯತ್ನಿಸಿದ್ದ ಆರೋಪಿಗಳ ಬಂಧನ‌‌ ಕೇಸ್ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ. ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ 7 ಆರೋಪಿಗಳನ್ನು ತಲಘಟ್ಟಪುರ ವಿಶ್ರಾಂತಿ ಲೇಔಟ್​ನಲ್ಲಿ ಬಂಧಿಸಲಾಗಿದೆ. ನಿನ್ನೆ ಮುಂಜಾನೆ 4.30ರಿಂದ 5 ಗಂಟೆ ಸುಮಾರಿಗೆ ಕಳ್ಳತನಕ್ಕೆ ಯತ್ನ ಮಾಡಲಾಗಿತ್ತು. ಟೆರಸ್ ಮೇಲಿನ ಬಾಗಿಲು ಓಪನ್ ಮಾಡಿ ಕಳ್ಳರು ಮನೆಗೆ ನುಗ್ಗಿದ್ದರು. ಕಳ್ಳರು ಮನೆಗೆ ನುಗ್ಗಿದ ದೃಶ್ಯ ಸಿಸಿಟಿವಿಯಲ್ಲಿ ನೋಡಿದ್ದ ಮನೆ ಮಾಲೀಕರು ಮನೆಯ ರೂಂ ಪ್ರವೇಶಿಸಿದ್ದ ಆರೋಪಿಗಳನ್ನ ಲಾಕ್ ಮಾಡಿದ್ದರು. ರೂಂನ ಡೋರ್​​​​ ಕ್ಲೋಸ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ತಲಘಟ್ಟಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಕಲೀಂ, ಎಲೆಕ್ಟ್ರಾನಿಕ್ ಸಿಟಿ ಮೂಲದವನು. ಉಳಿದ ಆರೋಪಿಗಳು ಉತ್ತರ ಭಾರತದ ಮೂಲದವರು. ಆರೋಪಿಗಳು ಹೋಟೆಲ್, ಬಾರ್​ಗಳಲ್ಲಿ ಕೆಲಸ ಮಾಡುತ್ತಿದ್ದರು. ಬಂಧಿತರಿಂದ ಲಾಂಗು​, ಮಚ್ಚು, ರಾಡ್​, ಖಾರದಪುಡಿ ವಶಕ್ಕೆ ಪಡೆಯಲಾಗಿದೆ. ಮನೆ ಮಾಲೀಕರು ಶ್ರೀಮಂತರು ಎಂಬ ವಿಷಯ ತಿಳಿದಿದ್ದ ಕಳ್ಳರು 2 ತಿಂಗಳಿಂದ ಮನೆ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ತಲಘಟ್ಟಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:09 am, Fri, 13 January 23