AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಆಡುಗೋಡಿ ಪೊಲೀಸರಿಂದ ಚೇಸ್ ಮಾಡಿ ಕಿಡ್ನಾಪ್ ಕೇಸ್ ಭೇದಿಸಿದ ಪ್ರಕರಣ; ತನಿಖೆ ವೇಳೆ ರಿವೈಲ್ ಆಯ್ತು ಸ್ಪೋಟಕ ಸಂಗತಿ

ಹಣಕ್ಕಾಗಿ ಯುವಕನನ್ನ ಅಪಹರಣ ಮಾಡಿದ್ದ ಕಿಡ್ನಾಪರ್ಸ್ ಹಣ ಬಂದ ಮೇಲೆ ಯುವತಿ ಬೇಕು ಎಂದಿದ್ದರಂತೆ ತನಿಖೆ ವೇಳೆ ಆರೋಪಿ ಗೋಪಿ ಬಾಯ್ಬಿಟ್ಟಿದ್ದಾನೆ.

Bengaluru: ಆಡುಗೋಡಿ ಪೊಲೀಸರಿಂದ ಚೇಸ್ ಮಾಡಿ ಕಿಡ್ನಾಪ್ ಕೇಸ್ ಭೇದಿಸಿದ ಪ್ರಕರಣ; ತನಿಖೆ ವೇಳೆ ರಿವೈಲ್ ಆಯ್ತು ಸ್ಪೋಟಕ ಸಂಗತಿ
ಸಾಂದರ್ಭಿಕ ಚಿತ್ರ
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on:Jan 13, 2023 | 8:59 AM

Share

ಬೆಂಗಳೂರು: 4ದಿನಗಳ ಹಿಂದೆ ಬಂಡೇಪಾಳ್ಯ ನಿವಾಸಿ ತೌಹಿದ್​ ಎಂಬ ಯುವಕನನ್ನ ಬೈಕ್​ನ ಹಣಕ್ಕಾಗಿ ಕಿಡ್ನಾಪ್ ಮಾಡಿದ್ದ ಆರೋಪಿಗಳನ್ನ ಆಡಗೋಡಿ ಪೊಲೀಸರು 2 ಕಿ.ಮೀ ಚೇಸ್​ ಮಾಡಿ ಕಿಡ್ನಾಪ್​ರ್​ನ್ನು ಬಂಧಿಸಿ ಯುವಕನ ರಕ್ಷಣೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋಪಿಯನ್ನ ತನಿಖೆಗೆ ಒಳಪಡಿಸಿದ್ದು ಕಿಡ್ನಾಪರ್ಸ್ ವಿಚಾರ ತಿಳಿದು ಪೊಲೀಸರು ಶಾಕ್ ಆಗಿದ್ದಾರೆ. ಹಣವನ್ನ ಕೊಟ್ಟ ಮೇಲೂ ತೌಹಿದ್​ನನ್ನ ಬೀಡದೇ ಹಣ ಕೊಡಲು ಬಂದ ಸಂಬಂಧಿ ಹಾಗೂ ಯುವತಿಯ ಮೊಬೈಲ್ ಕಸಿದುಕೊಂಡು ಬಳಿಕ ರಸ್ತೆಯಲ್ಲಿದ್ದ ಆ ಯುವತಿಯ ಫೋಟೋವನ್ನ ಮೊಬೈಲ್​ನಲ್ಲಿ ನೋಡಿ ಫೋಟೊದಲ್ಲಿದ್ದ ಹುಡುಗಿ ಬೇಕು ಎಂದು ವರಸೆ ಬದಲಾಯಿಸಿದ್ದರಂತೆ.

 ಯುವಕನನ್ನ ರಕ್ಷಣೆ ಮಾಡಿದ್ದ ಬೀಟ್​ ಪೊಲೀಸರು

ಹಣಕ್ಕಾಗಿ ತೌಹಿದ್ ಎಂಬ ಯುವಕನನ್ನ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೋರಮಂಗಲ 100 ಫೀಟ್​​ ರಸ್ತೆ ಬಳಿಯ ಚೆಕ್​ಪೋಸ್ಟ್​​ ಬ್ಯಾರಿಕೇಡ್​ಗೆ ರಾತ್ರಿ 11.40ರ ಸುಮಾರಿನಲ್ಲಿ ಕಾರು ಡಿಕ್ಕಿ ಹೊಡೆದಿದ್ದು, ಯುವಕ ಕಾಪಾಡಿ ಎಂದು ಕೂಗಿದ್ದಾನೆ. ಈ ವೇಳೆ ಆಡುಗೋಡಿ ಇನ್ಸ್​​ಪೆಕ್ಟರ್​ ಮಂಜುನಾಥ್​​ ಅಲರ್ಟ್ ಆಗಿದ್ದಾರೆ. ಕೂಡಲೇ ಸಿನಿಮಾ ರೀತಿಯಲ್ಲಿ 2 ಕಿ.ಮೀ. ಚೇಸ್​ ಮಾಡಿ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಯುವಕನನ್ನ ರಕ್ಷಿಸಿದ್ದಾರೆ. ನಾಲ್ವರಲ್ಲಿ ಓರ್ವ ಆರೋಪಿ ಗೋಪಿ ಎಂಬುವವನನ್ನ ಬಂಧಿಸಲಾಗಿ ಇನ್ನುಳಿದವರಿಗಾಗಿ ಬಲೆ ಬಿಸಿದ್ದಾರೆ.

ಇದನ್ನೂ ಓದಿ: Nigeria: ಬಂಧೂಕುಧಾರಿಗಳಿಂದ ರೈಲ್ವೆ ನಿಲ್ದಾಣದ ಮೇಲೆ ದಾಳಿ, 30ಕ್ಕೂ ಹೆಚ್ಚು ಮಂದಿಯ ಅಪಹರಣ

ತೌಹಿದ್​ನನ್ನ ಕಿಡ್ನಾಪ್ ಮಾಡಿದ್ದ ಕಿಡ್ನ್ಯಾಪರ್ಸ್​ ಗೌಪ್ಯ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರಿಗೆ 60 ಸಾವಿರ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇಲ್ಲವಾದರೆ ತೌಹಿದ್​ನನ್ನ ಬೀಡುವುದಿಲ್ಲವೆಂದಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದರೆ ಕೊಲೆ ಮಾಡೋದಾಗಿ ಹೆದರಿಸಿದ್ದಾರೆ. ಹಾಗಾಗಿ ನಿನ್ನೆ ಸಂಜೆ 4.30 ಕ್ಕೆ ತೌಹಿದ್ ತಾಯಿ 35 ಸಾವಿರ ಹಣ ನೀಡಿದ್ದಾರೆ. ಹಣ ಕೊಟ್ಟ ಮೇಲೂ ಆರೋಪಿಗಳು ತೌಹಿದ್​ನನ್ನ ಬಿಟ್ಟಿಲ್ಲ. ನಂತರ ಈ ಬಗ್ಗೆ ದೂರು ನೀಡಲು ಮಡಿವಾಳ ಠಾಣೆಗೆ ಬಂದಿದ್ದ ಕುಟುಂಬ ಅಷ್ಟರಲ್ಲಾಗಲೇ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣ ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಬಂಡೆಪಾಳ್ಯ ಪೊಲೀಸ್ ಠಾಣೆಗೆ ಆರೋಪಿಯನ್ನ ಹಸ್ತಾಂತರ ಮಾಡಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:53 am, Fri, 13 January 23

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ