ಈ ಶಿಕ್ಷಕ ದಂಪತಿ ವೃತ್ತಿಗೆ ಗುಡ್ಬೈ ಹೇಳಿ, ಸಂಕ್ರಾಂತಿಗೆ ಬಂಪರ್ ಮೆಣಸಿನಕಾಯಿ ಬೆಳೆದರು- ವರ್ತಕರು ಹೂ ಮಾಲೆ ಹಾಕಿ ಅಭಿನಂದಿಸಿದರು!
ಭರ್ಜರಿ ಮೆಣಸಿನಕಾಯಿ ಬೆಳೆದು ಬಂಪರ್ ಬೆಲೆ ಪಡೆದ ರೈತ ದಂಪತಿಗೆ ಗದಗ ಎಪಿಎಂಸಿ ವರ್ತಕರು ಹಾಗೂ ರೈತರು ಹೂವಿನ ಮಾಲೆ ಹಾಕಿ ಅಭಿನಂದಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿಗೆ ಈಗ ಮತ್ತೆ ಭಾರಿ ಬೆಲೆ ಬಂದಿದ್ದು, ಹಿಂದಿನ ದಾಖಲೆ ಗುಡಿಸಿ ಹಾಕಿದೆ. ಅತಿಯಾದ ಮಳೆಗೆ ಕೆಂಪು ಮೆಣಸಿನಕಾಯಿ ಇಳುವರಿಯಲ್ಲಿ ಭಾರಿ ಕುಸಿತವಾಗಿದೆ. ಆದ್ರೆ, ಅಲ್ಪಸ್ವಲ್ಪ ಕೆಂಪು ಸುಂದರಿ ಜೋಪಾನ ಮಾಡಿ ಬೆಳೆದ ಅನ್ನದಾತರಿಗೆ ಬದುಕು ಬಂಗಾರವಾಗಿದೆ. ಹೌದು ಗದಗ ಎಪಿಎಂಸಿಯಲ್ಲಿ ರೈತರ ಮಹಿಳೆ ಬೆಳೆದ ಮೆಣಸಿನಕಾಯಿ ಹಿಂದಿನ ದಾಖಲೆ ಉಡೀಸ್ ಮಾಡಿ, ದಾಖಲೆ ಬೆಲೆಗೆ ಮಾರಾಟವಾಗಿದೆ. ಓದಿ ಈ ಸಕ್ಸಸ್ ಸ್ಟೋರಿ (Success Story).
ಸಂಕ್ರಾಂತಿ ಗಿಫ್ಟ್! ಗದಗ (Gadag) ಜಿಲ್ಲೆಯಲ್ಲಿ ಮತ್ತೆ ಕೆಂಪು ಸುಂದರಿಗೆ ಭಾರಿ ಬೇಡಿಕೆ ಬಂದಿದೆ: ಸಂಕ್ರಾಂತಿ ಸುಗ್ಗಿ ಹಬ್ಬದ ಹೊಸ್ತಿಲಲ್ಲಿ ಇದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದ (Yarehanchinal) ರೈತ ಮಹಿಳೆ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ದಂಪತಿ (Teacher Couple) ಬೆಳೆದ ಕೆಂಪು ಮೆಣಸಿನಕಾಯಿಗೆ ‘ಸಂಕ್ರಾಂತಿ ಬಂಪರ್ ಗಿಫ್ಟ್’ ಸಿಕ್ಕಂತಾಗಿದೆ. ಕಷ್ಟಪಟ್ಟು ಬೆಳೆದ ಮೆಣಸಿನಕಾಯಿಗೆ ಬಂಗಾರದ ಬೆಲೆ ಮೀರಿಸುವ ಬೆಲೆ ಸಿಕ್ಕಿದೆ. ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ (Mirchi) ಬರೋಬ್ಬರಿ 72,999 ಸಾವಿರ ಕ್ವಿಂಟಾಲ್ ರೇಟ್ ಸಿಕ್ಕಿದೆ. ಹೀಗಾಗಿ ರೈತ ದಂಪತಿ ಫುಲ್ ಖುಷಿಯಾಗಿದ್ದಾರೆ.
ದಾಖಲೆ ಉಡೀಸ್!
ಕಳೆದ ತಿಂಗಳ ಗದಗ ತಾಲೂಕಿನಲ್ಲಿ ಕೋಟುಮಚಗಿ ಗ್ರಾಮರ ರೈತ ಶರಣಪ್ಪ ಜಗ್ಗಲ್ ಬೆಳೆದಿದ್ದ ಮೆಣಸಿನಕಾಯಿಗೆ 70,199 ರೂಪಾಯಿ ಸಿಕ್ಕಿತ್ತು. ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ ಕೋಟುಮಚಗಿ ರೈತ ಫುಲ್ ಖುಷಿಯಾಗಿದ್ದ. ಆದ್ರೆ, ಈಗ ಕೊಪ್ಪಳ ಜಿಲ್ಲೆಯ ದಂಪತಿಗಳು ಬೆಳೆದ ಕೆಂಪು ಸುಂದರಿ ಗದಗನ ಎಪಿಎಂಸಿ ಮಾರುಕಟ್ಟೆಯ ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಮಾರಾಟವಾಗಿದ್ದು, ಈ ಹಿಂದಿನ ಬೆಲೆ ಉಡೀಸ್ ಮಾಡಿ ಈಗ 72,999 ರೂಪಾಯಿಗೆ ಕ್ವಿಂಟಾಲ್ ಗೆ ಮಾರಾಟವಾಗಿದೆ.
ಶಿಕ್ಷಕ ವೃತ್ತಿಗೆ ಗುಡ್ ಬೈ!
ಗದಗನ ಎಪಿಎಂಸಿ ಮಾರುಕಟ್ಟೆಯ ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಹರಾಜನಲ್ಲಿ ಭರ್ಜರಿ ಬೆಲೆ ಸಿಕ್ಕಿದೆ. ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ದೈಹಿಕ ಶಿಕ್ಷಕಿ. ಪತಿ ರೈತ ಉಮೇಶ ನಾಗರಡ್ಡಿ ಬಿಎ, ಟಿಸಿಎಚ್ ಪದವೀಧರ. ಈ ದಂಪತಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದಾರೆ. ಕಡಿಮೆ ಗೌರವಧನದಿಂದ ಸಂಸಾರ ಬಂಡಿ ಸಾಗಲ್ಲ ಅಂತ ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳಿ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ ಇವರಿಬ್ಬರೂ. ಸಾವಯವ ಗೊಬ್ಬರವನ್ನೇ ಹೆಚ್ಚಾಗಿ ಬಳಕೆ ಮಾಡಿ, ಉತ್ತಮ ಮೆಣಸಿನಕಾಯಿ ಬೆಳೆದಿದ್ದೇವೆ ಅಂತಾರೆ ರೈತ ದಂಪತಿ.
ಉತ್ತಮ ಗುಣಮಟ್ಟ
ನಮ್ಮ ಅಂಗಡಿಯಲ್ಲಿ ಟೆಂಡರ್ ಗೆ ಇಟ್ಟಿದ್ದ ಈ ಒಣಮೆಣಸಿನಕಾಯಿ ಉತ್ತಮ ಗುಣಮಟ್ಟದ್ದಾಗಿದ್ದರಿಂದ ಖರೀದಿದಾರರು ಅದಕ್ಕೆ ಯೋಗ್ಯ ಬೆಲೆ ನಿರ್ಧರಿಸಿದ್ದಾರೆ. ಇದರಿಂದ ರೈತ ಮತ್ತು ಖರೀದಿದಾರ ಇಬ್ಬರಿಗೂ ಸಂತೃಪ್ತಿ ತಂದಿದೆ . ಹೀಗಾಗಿ ನನಗೂ ಖುಷಿ ಹೆಮ್ಮೆ ಎನಿಸಿದೆ. ಬ್ಯಾಡಗಿ, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಈ ರೇಟು ಬಂದಿಲ್ಲ. ಗದಗ ಮಾರುಕಟ್ಟೆ ಈ ಪೈಪೋಟಿಯಲ್ಲಿದೆ ಅಂತ ವರ್ತಕ ಅಶೋಕ ಗಡಾದ ಹೇಳಿದ್ದಾರೆ.
ರೈತ ದಂಪತಿಗೆ ಸನ್ಮಾನ
ಭರ್ಜರಿ ಮೆಣಸಿನಕಾಯಿ ಬೆಳೆದು ಬಂಪರ್ ಬೆಲೆ ಪಡೆದ ರೈತ ದಂಪತಿಗೆ ಎಪಿಎಂಸಿ ವರ್ತಕರು ಹಾಗೂ ರೈತರು ಹೂವಿನ ಮಾಲೆ ಹಾಕಿ ಅಭಿನಂದಿಸಿದ್ದಾರೆ.
ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ