ಗದಗ: ವೈದ್ಯರು ತಮ್ಮ ಮನಸ್ಸಿಗೆ ಬಂದಾಗ ಆಸ್ಪತ್ರೆ ಡ್ಯೂಟಿಗೆ ಬರ್ತಾರಂತೆ! ಧೂಳು ತಿನ್ನುತ್ತಿವೆ ಬೆಲೆ ಬಾಳುವ ಮಡಿಕಲ್ ವಸ್ತುಗಳು!

Kadampur Primary Health Center: ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಸೌಲಭ್ಯಗಳು ನೀಡಿದೆ. ಆದ್ರೆ, ಸರಿಯಾದ ಬಳಕೆ ಇಲ್ಲದೇ ಲಕ್ಷಾಂತರ ಮೌಲ್ಯದ ಕಾಟ್, ಬೆಡ್, ಆಪರೇಷನ್ ಥಿಯೇಟರ್ ಲೈಟ್ ಸೇರಿದ ಹಲವು ಮೆಡಿಕಲ್ ವಸ್ತುಗಳು ಆಸ್ಪತ್ರೆಯಲ್ಲಿ ಧೂಳು ತಿನ್ನುತ್ತಿವೆ.

ಗದಗ: ವೈದ್ಯರು ತಮ್ಮ ಮನಸ್ಸಿಗೆ ಬಂದಾಗ ಆಸ್ಪತ್ರೆ ಡ್ಯೂಟಿಗೆ ಬರ್ತಾರಂತೆ! ಧೂಳು ತಿನ್ನುತ್ತಿವೆ ಬೆಲೆ ಬಾಳುವ ಮಡಿಕಲ್ ವಸ್ತುಗಳು!
ಗದಗ: ವೈದ್ಯರು ತಮ್ಮ ಮನಸ್ಸಿಗೆ ಬಂದಾಗ ಆಸ್ಪತ್ರೆ ಡ್ಯೂಟಿಗೆ ಬರ್ತಾರಂತೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 13, 2023 | 3:13 PM

ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದ್ರೆ, ಗದಗ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಅಂದ್ರೆ ಹಣ ವಸೂಲಿ ಆಸ್ಪತ್ರೆಗಳಾಗಿವೆ. ಹಣ ಕೊಟ್ರೆ ಬೆಡ್ ಇಲ್ಲಾಂದ್ರೆ ಇಲ್ಲಾ ಅಂತಿದ್ದಾರೆ. ಅದು ನಾಲ್ಕೈದು ಹಳ್ಳಿಗಳ ಜನ್ರ ಸಂಜೀವಿನಿ ಆಗಬೇಕಿರೋ ಆಸ್ಪತ್ರೆ (Hospital). ಆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ರೋಗಿಗಳು ನಿತ್ಯವೂ ಪರದಾಡುತ್ತಿದ್ದಾರೆ. ಮನಸ್ಸಿಗೆ ಬಂದಾಗ ವೈದ್ಯರು (Doctor) ಆಸ್ಪತ್ರೆ ಡ್ಯೂಟಿಗೆ ಬರ್ತಾರಂತೆ. ಇಲ್ಲಿ ನರ್ಸ್ ಗಳೇ ರೋಗಿಗಳ ಪಾಲಿಗೆ ವೈದ್ಯರು. ಅಷ್ಟಕ್ಕೂ ಎಲ್ಲಿರೋದು ಈ ಆಸ್ಪತ್ರೆ ಅಂತೀರಾ ಈ ಸ್ಟೋರಿ ನೋಡಿ… ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಸರ್ಕಾರಿ ಪ್ರಾಥಮಿ ಆರೋಗ್ಯ ಕೇಂದ್ರ…! ಹೆಸರಿಗಷ್ಟೇ ಆಸ್ಪತ್ರೆ ಒಳಗೆ ಹೋದ್ರೆ, ವೈದ್ಯರೇ ಇರಲ್ಲ ಅಂತ ರೋಗಿಗಳು ಕಿಡಿ…! ಧೂಳು ತಿನ್ನುತ್ತಿವೆ ಲಕ್ಷಾಂತರ ಬೆಲೆ ಬಾಳುವ ಮಡಿಕಲ್ ವಸ್ತುಗಳು…! ಹಣ ಕೊಟ್ಟವ್ರಿಗೆ ಬೆಡ್, ಇಲ್ಲಾಂದ್ರೆ ರೋಗಿಗಳ ಗೋಳಾಟ ಎಂಬ ಆರೋಪ ಕೇಳಿಬಂದಿದೆ!

ರೋಗಿಗಳಿಂದ ತುಂಬಿದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ. ಆಸ್ಪತ್ರೆ ಬಂದ ರೋಗಿಗಳಿಗೆ ಚಿಕಿತ್ಸೆ ನೀಡವ ವೈದ್ಯರಿಲ್ಲದೇ ಪರದಾಟ. ಇಲ್ಲಿ ರೋಗಿಗಳ ಪಾಲಿಗೆ ನರ್ಸ್, ಅಂಟೆಂಡರ್ಸೇ ವೈದ್ಯರು ಅಂತ ರೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೌದು ಈ ಅವ್ಯವಸ್ಥೆ ಆಸ್ಪತ್ರೆ ಇರೋದು ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಕದಂಪೂರ ಗ್ರಾಮದಲ್ಲಿ (Kadampur Primary Health Center).

ಕದಂಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ಅಕ್ಕಪಕ್ಕ ಐದು ಹಳ್ಳಿಗಳ ಜನ್ರ ಪಾಲಿಗೆ ಸಂಜೀವಿನಿಯಾಗಬೇಕು. ಆದ್ರೆ, ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ರೋಗಿಗಳು ಮತ್ತೆ ಜಿಲ್ಲಾ ಹಾಗೂ ತಾಲೂಕಾ ಹಾಗೂ ಖಾಸಗಿ ಆಸ್ಪತ್ರೆಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಅತ್ತಿಕಟ್ಟಿ, ಚುರ್ಚಿಹಾಳ, ಪಾಪನಾಶಿ, ಶಿಂಗಟರಾಯನಕೇರಿ ತಾಂಡಾ ಸೇರಿ ಐದಾರು ಗ್ರಾಮಗಳ ಜನ್ರಿಗೆ ಜೀವರಕ್ಷಕ. ಆದ್ರೆ ಹತ್ತಾರು ಕಿಲೋ ಮೀಟರ್ ದೂರದಿಂದ ಚಿಕಿತ್ಸೆಗಾಗಿ ಬಂದ ರೋಗಿಗಳಿಗೆ, ಇಲ್ಲಿ ಉತ್ತರ ಸಿಗೋದು ವೈದ್ಯರಿಲ್ಲ ಅನ್ನೋದು ಮಾತ್ರ. ಇದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಿತ್ಯವೂ ವೈದ್ಯರಿಲ್ಲದೇ ಚಿಕಿತ್ಸೆ ಗಾಗಿ ನಾಲ್ಕೈದು ಹಳ್ಳಿ ಜನ್ರ ಗೋಳಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದ್ದೊಬ್ಬ ವೈದ್ಯರು ಆಗೊಮ್ಮೆ ಈಗೊಮ್ಮೆ ಬರ್ತಾರಂತೆ. ಇಲ್ಲಿ ನರ್ಸ್ ಗಳೇ ರೋಗಿಗಳ ಪಾಲಿಗೆ ವೈದ್ಯರಾಗಿದ್ದಾರೆ. ಚಿಕಿತ್ಸೆ ನೀಡುವಾಗಿ ಹೆಚ್ಚುಕಮ್ಮಿಯಾದ್ರೆ ಹೊಣೆ ಯಾರು ಅನ್ನೋ ಪ್ರಶ್ನೆ ಉದ್ಭವಿಸಿದೆ. ಇವತ್ತು ವಸತಿ ಶಾಲೆಯ ವಿದ್ಯಾರ್ಥಿ ಸೇರಿ ಸುತ್ತಲಿನ ಗ್ರಾಮಗಳ ನೂರಾರು ರೋಗಿಗಳು ಚಿಕಿತ್ಸೆಗೆ ಬಂದ್ರೆ ವೈದ್ಯರಿಲ್ಲ. ಯಾರಿಗೂ ಸರಿಯಾಗಿ ಚಿಕಿತ್ಸೆ ಸಿಗದೇ ಒದ್ದಾಡುವಂತಾಗಿದೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಸೌಲಭ್ಯಗಳು ನೀಡಿದೆ. ಆದ್ರೆ, ಸರಿಯಾದ ಬಳಕೆ ಇಲ್ಲದೇ ಲಕ್ಷಾಂತರ ಮೌಲ್ಯದ ಕಾಟ್, ಬೆಡ್, ಆಪರೇಷನ್ ಥಿಯೇಟರ್ ಲೈಟ್ ಸೇರಿದ ಹಲವು ಮೆಡಿಕಲ್ ವಸ್ತುಗಳು ಆಸ್ಪತ್ರೆಯಲ್ಲಿ ಧೂಳು ತಿನ್ನುತ್ತಿವೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋ ಸ್ಥಿತಿ ಇಲ್ಲಿನ ರೋಗಿಗಳಿಗೆ ಬಂದೊದಗಿದೆ. ಅಷ್ಟೇ ಅಲ್ಲ ಹಳ್ಳಿಯ ಮುಗ್ಧ ಜನ್ರಿಂದ ಹಣ ವಸೂಲಿಗೆ ಇಲ್ಲಿನ ಸಿಬ್ಬಂದಿ ಸಾಲು ನಿಂತಿದ್ದಾರಂತೆ. ಯಾಕಂದ್ರೆ ಹೇಳೋರಿಲ್ಲ-ಕೇಳೋರಿಲ್ಲ.

ವೈದ್ಯಾಧಿಕಾರಿಗಳು ಬರೋದೇ ಅಪರೂಪ. ಹೀಗಾಗಿ ಇಲ್ಲಿ ಇವ್ರು ಆಡಿದ್ದೇ ಆಟ ಆಗಿದೆಯಂತೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದ್ರೆ ಬೆಡ್ ಇಲ್ಲ ಅಂತ ಸಾಗಿ ಹಾಕ್ತಾರಂತೆ. ಯಾರು ಹಣ ಕೊಡ್ತಾರೆ ಅಂಥವ್ರಿಗೆ ಬೆಡ್ ವ್ಯವಸ್ಥೆಯಿದೆ. ಇಲ್ಲಾಂದ್ರೆ ರೋಗಿಗಳಿಗೆ ಗೋಳಾಟ ತಪ್ಪಿದಲ್ಲ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

ಹಳ್ಳಿ ಜನ್ರ ಗೋಳು ಕೇಳೋರೇ ಇಲ್ಲದಂತಾಗಿದೆ. ಸರ್ಕಾರ ವೈದ್ಯರಿಗೆ ಲಕ್ಷ ಲಕ್ಷ ಸಂಬಳ ನೀಡುತ್ತೆ. ಆದ್ರೆ, ವೈದ್ಯರು ಮಾತ್ರ ರೋಗಿಗಳಿಗೆ ಸರಿಯಾಗಿ ಸೇವೆ ನೀಡುತ್ತಿಲ್ಲ. ಹೀಗಾದ್ರೆ ಹಳ್ಳಿ ಜನ್ರ ಗೋಳು ಕೇಳೋರು ಯಾರು ಅಂತಾ ಹಳ್ಳಿ ಜನ್ರು ಪ್ರಶ್ನೆ ಮಾಡ್ತಾಯಿದ್ದಾರೆ. ಇನ್ನಾದ್ರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ 

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ