ತನಿಖಾ ಸಂಸ್ಥೆಗಳಿಂದ ಕಾಂಗ್ರೆಸ್ ನಾಯಕರಿಗೆ ಕಿರುಕುಳ: ಜು.22ರಂದು ರಾಜಭವನ ಚಲೋ ಪ್ರತಿಭಟನೆ; ಡಿ.ಕೆ.ಶಿವಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2022 | 12:53 PM

ತ್ಯಾಗಕ್ಕೆ ಮತ್ತೊಂದು ಹೆಸರೇ ಸೋನಿಯಾ ಗಾಂಧಿ ಅವ್ರು. ಪಕ್ಷ ಉಳಿಸಮ್ಮ ಅಂತಾ ಕಾಲು ಕೈ ಹಿಡಿದು ಕರೆದುಕೊಂಡು ಬಂದಿದ್ದೇವೆ. ಬಿಜೆಪಿಗೆ ಆಂತರಿಕವಾಗಿ ಸಮಸ್ಯೆ ಭಾರಿ ಇದೆ.

ತನಿಖಾ ಸಂಸ್ಥೆಗಳಿಂದ ಕಾಂಗ್ರೆಸ್ ನಾಯಕರಿಗೆ ಕಿರುಕುಳ: ಜು.22ರಂದು ರಾಜಭವನ ಚಲೋ ಪ್ರತಿಭಟನೆ; ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us on

ಬೆಂಗಳೂರು: ಜು. 21ರಂದು ಇಡಿಯಿಂದ ಸೋನಿಯಾ ಗಾಂಧಿ (Sonia Gandhi) ವಿಚಾರಣೆ ನಡೆಯಲಿದೆ. ಸಂಸತ್​ ಅಧಿವೇಶನ ಇದ್ದರೂ ವಿಚಾರಣೆಗೆ ಬರಲು ಇಡಿ ಸೂಚನೆ ನೀಡಿದ್ದು, ತನಿಖಾ ಸಂಸ್ಥೆಗಳ ಮೂಲಕ ನಮ್ಮ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ನಮ್ಮ ಪಕ್ಷದ ನಾಯಕರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವಿದು. ಇಡಿಯವರು ನಮ್ಮ ನಾಯಕರಿಗೆ ಕಿರುಕುಳ ನೀಡ್ತಿದ್ದಾರೆ. ಈ ಸಂಬಂಧ ಜು.21ರಂದು ಬೃಹತ್ ಪ್ರತಿಭಟನೆ ಮಾಡಲು ನಿರ್ಧಾರ ಮಾಡಲಾಗಿದೆ. ನಾವು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಫ್ರೀಡಂಪಾರ್ಕ್​ನಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ. ಜು.22ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುಹುದು. ಸೋನಿಯಾ ಗಾಂಧಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.

ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿ ಆಡಳಿತ ಮಾಡುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು: ಅಧ್ಯಕ್ಷ ಡಿ.ಕೆ. ಶಿವಕುಮಾರ್


ವಾಕ್ ಫಾರ್ ನೇಷನ್:

ಬೆಂಗಳೂರಿನಲ್ಲಿ ಆ.15ರಂದು ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದು, ಆ.1ರಿಂದ 10ರವರೆಗೆ 75 ಕಿ.ಮೀ. ಪಾದಯಾತ್ರೆ ಮಾಡಲು ನಿರ್ಧಾರ ಮಾಡಿದ್ದೇವೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಸ್ವಾತಂತ್ರ್ಯ ನಡಿಗೆ ಆರಂಭವಾಗಲಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದವರೆಗೆ ನಡಿಗೆ ಇರಲಿದೆ. ರಾಜ್ಯದ ಹಲವು ಸ್ವಾತಂತ್ರ್ಯ ಸ್ಮಾರಕಗಳಿಗೆ ಭೇಟಿ ನೀಡಲಾಗುತ್ತೆ. ರಾಷ್ಟ್ರಕ್ಕೆ ನಮನ ಸಲ್ಲಿಸುವ ಕೆಲಸ ನಾವೆಲ್ಲ ಮಾಡಲಾಗುತ್ತೆ. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ ಸಾರ್ವಜನಿಕರ ಕಾರ್ಯಕ್ರಮ. ಸ್ವಾತಂತ್ರ್ಯ ನಡಿಗೆಯಲ್ಲಿ ಸಾರ್ವಜನಿಕರು, ಎಲ್ಲಾ ಸಾಹಿತಿಗಳು, ಸಂಘಟನೆಗಳು ಭಾಗಿಯಾಗಲು ಡಿ.ಕೆ. ಶಿವಕುಮಾರ ಮನವಿ ಮಾಡಿದರು. ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮ ಮುಕ್ತಾಯ ಮಾಡ್ತಿವಿ ಎಂದು ಹೇಳಿದರು.

 

ಇವಾಗ ಒರಿಜಿನಲ್ ಬಿಜೆಪಿ ಇಲ್ಲ:

ತ್ಯಾಗಕ್ಕೆ ಮತ್ತೊಂದು ಹೆಸರೇ ಸೋನಿಯಾ ಗಾಂಧಿ ಅವ್ರು. ಪಕ್ಷ ಉಳಿಸಮ್ಮ ಅಂತಾ ಕಾಲು ಕೈ ಹಿಡಿದು ಕರೆದುಕೊಂಡು ಬಂದಿದ್ದೇವೆ. ಬಿಜೆಪಿಗೆ ಆಂತರಿಕವಾಗಿ ಸಮಸ್ಯೆ ಭಾರಿ ಇದೆ. ಇವಾಗ ಒರಿಜಿನಲ್ ಬಿಜೆಪಿ ಇಲ್ಲ. ಅವರ ಮೇಲೆ ಕರೆಪ್ಸನ್ ವಿಷಯ ಜೋರಾಗಿದೆ. ವಿಶ್ವನಾಥ್ ಹಾಗೂ ಯತ್ನಾಳ್​ಗೆ ಯಾಕೆ ನೋಟಿಸ್ ಕೊಟ್ಟಿಲ್ಲ. ಯತ್ನಾಳ್​ನ ಗರ್ಭದ ಗುಡಿಯಲ್ಲಿ ಭಾರಿ ಮಾಹಿತಿ ಇದೆಯಲ್ಲಾ, ಎಂದು ಯತ್ನಾಳ್ ವಿರುದ್ಧ ಏಕವಚನದಲ್ಲೇ ಡಿಕೆಶಿ ವಾಗ್ದಾಳಿ ಮಾಡಿದರು. ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂಬ ಬಿಜೆಪಿ ಟೀಕೆ ವಿಚಾರಕ್ಕೆ ಬಿಜೆಪಿ ನಾಯಕರಿಗೆ ಡಿಕೆಶಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಏನು ಕುಂಬಳಕಾಯಿಯ ಒಡೆದು ಹೋಗೋಕೆ. ಸಿದ್ದರಾಮಯ್ಯರನ್ನು ಅವರು ಅವಾಗವಾಗ ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟರು.

Published On - 12:51 pm, Sun, 17 July 22