ಪ್ರಜಾಪ್ರಭುತ್ವದಲ್ಲಿ ಆಡಳಿತ ಮಾಡುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು: ಅಧ್ಯಕ್ಷ ಡಿ.ಕೆ. ಶಿವಕುಮಾರ್

ನಾನು ಪಕ್ಷದ ಸಿಪಾಯಿ, ನನಗೆ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನನಗೂ ಇತಿ ಮಿತಿ ಇದೆ ಎಂದು ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ಉತ್ತರ ನೀಡಿದರು. 

ಪ್ರಜಾಪ್ರಭುತ್ವದಲ್ಲಿ ಆಡಳಿತ ಮಾಡುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು: ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 16, 2022 | 2:55 PM

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ (Government 0ffices) ಫೋಟೋ, ವಿಡಿಯೋ ತೆಗೆಯುವ ಆದೇಶ ಹಿಂದಕ್ಕೆ ಪಡೆದ ವಿಚಾರ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿಕೆ ನೀಡಿದ್ದು, ಆಡಳಿತ ಮಾಡುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಹೀಗೆ ಮಾಡಬಾರದು. ಸದ್ಯ ಆದೇಶ ಹಿಂದಕ್ಕೆ ಪಡೆದಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇದರೆ ಪ್ರಜಾಪ್ರಭುತ್ವ. ಅಧಿವೇಶನದ ಸಮಯದಲ್ಲಿ ಬೇಕಾದನ್ನ ತೋರಿಸೋದು ಬೇಡದನ್ನ ತೋರಿಸದಿರೋದು. ಪ್ರಜಾಪ್ರಭುತ್ವದಲ್ಲಿ ನಿಮ್ಮ ಕೆಲಸ ನೀವು ಮಾಡಿದ್ದೀರಿ. ಎಲ್ಲಾ ಅಧಿಕಾರಿಗಳು ಕೆಟ್ಟವರು, ಒಳ್ಳೆಯವರು ಎಂದು ಹೇಳಲ್ಲ. ಪಿಎಸ್​ಐ ಹಗರಣ ವಿಚಾರದಲ್ಲಿ ಹೋಟಲ್ ಮೆನು ಕಾರ್ಡ್ ರೀತಿ ಹಾಕಿದ್ದರು. ಯಾವ ಯಾವ ಹುದ್ದೆಗೆ ಎಷ್ಟು ಹಣ ಅಂತ. ಕೋವಿಡ್ ಕೆಲಸಕ್ಕೆ ನಮ್ಮ ಕಾರ್ಯಕರ್ತರು ಹಣ ನೀಡಿದ್ದಾರೆ. ನಿಮ್ಮ ಕೈಯಲ್ಲಿ ಮಾಡಲಾಗದ ಕೆಲಸವನ್ನು ನಾವು ಮಾಡಿದ್ದೇವೆ. ಒಂದು ಲಕ್ಷ ರೂಪಾಯಿ ಈವರೆಗೂ ನೀಡಲು ಆಗಿಲ್ಲ. ಒಂದು ದಿನ ಸುದ್ದಿಗೋಷ್ಠಿ ಮಾಡಿ ಏನೇನು ಮಾಡಿದ್ದೇವೆ ಹೇಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರದ ಆದೇಶ ಪ್ರತಿಯಲ್ಲಿ ‌ತಪ್ಪು ತಪ್ಪಾಗಿ ಕನ್ನಡ ಪದ ಬಳಕೆ: ರಾಜ್ಯ ಸರ್ಕಾರದಿಂದ ಎಡವಟ್ಟು

ಕುಮ್ಮಕ್ಕು ಇಲ್ಲದೆ ಯಾವುದು ನಡೆಯಲ್ಲ:

ಬೆಳಗಾವಿ ಹೆಣ್ಣು ಮಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ನ್ಯಾಯ ಒದಗಿಸಿ ಕೊಡಿ. ಸಂತೋಷ್ ಪಾಟೀಲ್ ರೀತಿ ಹಲವರು ನೊಂದಿದ್ದಾರೆ ಬೆಂದಿದ್ದಾರೆ. ಮಠಾಧೀಶರು ಕಮಿಷನ್ ಬಗ್ಗೆ ಮಾತಾಡಿದ್ರು. ಅಮೃತ್ ಪಾಲ್​ರನ್ನ ಕೋರ್ಟ್ ಮುಂದೆ ನಿಲ್ಲಿಸಿ. ಯಾರ ಹೆಸರು ಇದೆ ತಗಿರಿ, ಒಳಗೆ ಹಾಕಿ. ಏನೇನು ನಡೆದಿದೆ ಎಂಬ ಬಗ್ಗೆ ನಮ್ಮ ಬಳಿಯೂ ಮಾಹಿತಿ ಇದೆ. ಸರ್ಕಾದ ಚಾರ್ಜ್ ಶೀಟ್​​ನಲ್ಲಿ ಏನಿದೆ. ಸರ್ಕಾರ ರಾಜಕಾರಣಿ, ಮಂತ್ರಿಗಳ ಕುಮ್ಮಕ್ಕು ಇಲ್ಲದೆ ಯಾವುದೋ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ನನಗೂ ಇತಿ ಮಿತಿ ಇದೆ:

ಸಿದ್ದರಾಮೋತ್ಸವ ವಿಚಾರವಾಗಿ ಮಾತನಾಡಿ, ಯಾರಿಗೆ ಕೇಳಬೇಕೋ ಅವರನ್ನ ಕೇಳಿ. ನಾನು ಪಕ್ಷದ ಸಿಪಾಯಿ, ನನಗೆ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನನಗೂ ಇತಿ ಮಿತಿ ಇದೆ ಎಂದು ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ಉತ್ತರ ನೀಡಿದರು.