ಪಿಎಸ್​ಐ ಅಕ್ರಮ ಪರೀಕ್ಷಾ ನೇಮಕಾತಿ ಪ್ರಕರಣ: ಎಡಿಜಿಪಿ ಅಮೃತ್ ಪೌಲ್ ಮಾಡಿದ್ದ ಆಸ್ತಿ ಎಷ್ಟು ಗೊತ್ತಾ?

ಪ್ರಕರಣ ಸಂಬಂಧ ಸಿಐಡಿ ಕೋರ್ಟ್​ಗೆ ಚಾರ್ಜ್​ಶೀಟ್​​​ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಮೋಸ್ಟ್ ವಾಂಟೆಡ್ ಆರೋಪಿ PSI ಷರೀಫ್ ಕಲ್ಲಿಮಠಗಾಗಿ ಸಿಐಡಿ ಶೋಧ​ ನಡೆಸಿದೆ.​​

ಪಿಎಸ್​ಐ ಅಕ್ರಮ ಪರೀಕ್ಷಾ ನೇಮಕಾತಿ ಪ್ರಕರಣ: ಎಡಿಜಿಪಿ ಅಮೃತ್ ಪೌಲ್ ಮಾಡಿದ್ದ ಆಸ್ತಿ ಎಷ್ಟು ಗೊತ್ತಾ?
ಅಮೃತ್ ಪಾಲ್
Follow us
TV9 Web
| Updated By: Digi Tech Desk

Updated on:Jul 16, 2022 | 12:37 PM

ಬೆಂಗಳೂರು: ಪಿಎಸ್​ಐ ಅಕ್ರಮ ಪರೀಕ್ಷಾ ನೇಮಕಾತಿ ಪ್ರಕರಣ (PSI Recruitment Scam) ಹಿನ್ನೆಲೆ ಎಡಿಜಿಪಿ ಅಮೃತ್ ಪೌಲ್ ಮಾಡಿದ್ದ ಆಸ್ತಿ ಎಷ್ಟು ಎನ್ನುವ ಅನುಮಾನ ಉಂಟಾಗಿದೆ. ಅಕ್ರಮವಾಗಿ ಗಳಿಸಿದ್ದ ಹಣದಲ್ಲಿ ಕೋಟಿಗಟ್ಟಲೇ ಪ್ರಾಪರ್ಟಿ ಪರ್ಚೇಸ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾಲ್ ಹೆಸರಿಗೆ ಪ್ರಾಪರ್ಟಿ ನೋಂದಣಿ ಮಾಡಿಸದೆ ತನ್ನ ತಂದೆ ಹೆಸರಲ್ಲಿ ಎಕರೆಗಟ್ಟಲೆ ಜಮೀನು ಖರೀದಿ ಮಾಡಿದ್ದು, ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲೇ ಎಲ್ಲಾ ಆಸ್ತಿಯನ್ನ ಪಾಲ್ ಮಾಡಿದ್ದ ಎನ್ನಲಾಗುತ್ತಿದೆ.

ಅಮೃತ್ ಪಾಲ್ ಆಸ್ತಿ ಎಲ್ಲೆಲ್ಲಿದೆ.?

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಹೊಸಹುಡ್ಯಾ ಗ್ರಾಮದಲ್ಲಿ ಸರ್ವೆ ನಂಬರ್ 247 ರಲ್ಲಿರೋ ಫಾರ್ಮೌಸ್ 4 ಎಕರೆಯಷ್ಟು ಜಾಗದಲ್ಲಿ ಫಾರಂ ಹೌಸ್. ಈ ಫಾರ್ಮೌಸ್ ಪೌಲ್ ತನ್ನ ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲಿ ಜಮೀನನ್ನ ನೋಂದಣಿ ಮಾಡಲಾಗಿದೆ. ಫಾರಾಂ ಹೌಸ್​ನ ಆಸುಪಾಸಿನ 8 ಎಕರೆ ಜಮೀನನ್ನ ಕೂಡ ಪೌಲ್ ಇತ್ತೀಚಿಗೆ ಪರ್ಚೇಸ್ ಮಾಡಿದ್ದಾರಂತೆ. ಚಿಕ್ಕಬಳ್ಳಾಪುರ ತಾಲೂಕಿನ ಶಿಡ್ಲಘಟ್ಟ ನೆಲಪ್ಪನಹಳ್ಳಿ ಬಳಿ 8 ಎಕರೆ 29 ಗುಂಟೆ ಜಮೀನು ತಂದೆ ನೇತಾರಾಮ್ ಹೆಸರಲ್ಲಿ ರಿಜಿಸ್ಟರ್ ಮಾಡಿಸಲಾಗಿದೆ. ಅದೇ ರೀತಿ ನೆಲಪ್ಪನಹಳ್ಳಿ ಸರ್ವೆ ನಂಬರ್ 49 ರಲ್ಲಿ 4 ಎಕರೆ 39 ಗುಂಟೆ ಜಾಗ, ನೆಲಪ್ಪನಹಳ್ಳಿಯಲ್ಲೇ 3 ಎಕರೆ 30 ಗುಂಟೆ ಜಾಗ ಪಾಲ್ ತಂದೆ ಹೆಸರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಇತ್ತೀಚಿಗೆ ಪರ್ಚೇಸ್ ಮಾಡಿದ್ದ ಜಾಗವನ್ನ ಜಾತವಾರ ಗ್ರಾಮದ ಜಗದೀಶ ಎಂಬವರ ಮಧ್ಯಸ್ಥಿಕೆಯಲ್ಲಿ ಪಾಲ್ ಕೊಂಡುಕೊಂಡಿದ್ದರಂತೆ. ಇದೀಗ ಅಮೃತ್ ಪಾಲ್​ರ ಎಲ್ಲಾ ಆಸ್ತಿ ಪಾಸ್ತಿಯ ವಿವರಗಳನ್ನ ಸಿಐಡಿ ಟೀಂ ಕಲೆ ಹಾಕುತ್ತಿದೆ. ಚಾರ್ಜ್ ಶೀಟ್​ನಲ್ಲೂ ಅಕ್ರಮ ಆಸ್ತಿಯ ಶಂಕೆ ಹಿನ್ನಲೆ ವಿವರಗಳನ್ನ ದಾಖಲಿಸಲು ಸಿಐಡಿ ಮುಂದಾಗಿದೆ.

ಇದನ್ನೂ ಓದಿ: ಪಿಎಸ್ಐ ನೇಮಕ ಅಕ್ರಮ: ಕೊನೆಗೂ ಎಡಿಜಿಪಿ ಅಮೃತ್ ಪಾಲ್ ಅರೆಸ್ಟ್, ಬಂಧಿತ ಐಪಿಎಸ್ ಅಧಿಕಾರಿ ಸಿಐಡಿ ಕಸ್ಟಡಿಗೆ

ತಲೆಮರೆಸಿಕೊಂಡಿರುವ PSI ಷರೀಫ್​ಗಾಗಿ ಸಿಐಡಿ ಶೋಧ​​​:

ಪ್ರಕರಣ ಸಂಬಂಧ ಸಿಐಡಿ ಕೋರ್ಟ್​ಗೆ ಚಾರ್ಜ್​ಶೀಟ್​​​ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಮೋಸ್ಟ್ ವಾಂಟೆಡ್ ಆರೋಪಿ PSI ಷರೀಫ್ ಕಲ್ಲಿಮಠಗಾಗಿ ಸಿಐಡಿ ಶೋಧ​ ನಡೆಸಿದೆ.​​ ಕಾಮಾಕ್ಷಿಪಾಳ್ಯ ಠಾಣೆ ಸಬ್​​ಇನ್ಸ್​​ಪೆಕ್ಟರ್​​ ಆಗಿದ್ದ ಷರೀಫ್, ಯುಪಿ, ಗುಜರಾತ್, ಪ.ಬಂಗಾಳದಲ್ಲಿ ಸುತ್ತಾಡಿರುವ ಶಂಕೆ ವ್ಯಕ್ತವಾಗಿದೆ. ತಲೆಮರೆಸಿಕೊಂಡಿರುವ PSI ಷರೀಫ್​ಗಾಗಿ ಹುಡುಕಾಟ ನಡೆಸಿದ್ದು, ನೇಮಕಾತಿ ವಿಭಾಗದಲ್ಲಿ ನೇರವಾಗಿ ಲಿಂಕ್ ಹೊಂದಿದ್ದ ಎನ್ನಲಾಗುತ್ತಿದೆ. ಪಿಎಸ್ಐ ಷರೀಫ್ ಪಾತ್ರದ ಕುರಿತು ವಿಚಾರಣೆ ವೇಳೆ ಆರೋಪಿಗಳು ರಿವೀಲ್ ಮಾಡಿದ್ದು, ಬಂಧಿತ ಆರೋಪಿಗಳ‌ ಮೇಲೆ ಚಾರ್ಜ್​ಶೀಟ್​ ಹಾಕಲು ಸಿದ್ಧತೆ ನಡೆಸಿದ್ದು, ಚಾರ್ಜ್​ಶೀಟ್​ಗೂ ಮೊದಲೇ PSI ಷರೀಫ್ ಬಂಧಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ​

Published On - 11:54 am, Sat, 16 July 22