ಬೆಂಗಳೂರಿನಲ್ಲಷ್ಟೇ ಮಳೆ ಆಗಿಲ್ಲವಲ್ಲಾ? ಎಂದು ಬೆಂಗಳೂರಿನಲ್ಲಿ ರಸ್ತೆ ಗುಂಡಿ ಕುರಿತು ಹೆಚ್​ಡಿ ಕುಮಾರಸ್ವಾಮಿ ಕಿಡಿ

| Updated By: ಸಾಧು ಶ್ರೀನಾಥ್​

Updated on: Oct 17, 2022 | 2:32 PM

ಕರ್ನಾಟಕದಲ್ಲಿ ಮಾತ್ರವೇ ಮಳೆ ಆಗಿಲ್ಲ. ಮಳೆಗೆ ಅಗತ್ಯವಾದ ತಯಾರಿಯನ್ನು ಈ ಸರ್ಕಾರ ಮಾಡಿಕೊಂಡಿಲ್ಲ. ಒರಿಸ್ಸಾ ಸೇರಿದಂತೆ ಅನೇಕ ಕಡೆ ಪ್ರತಿ ವರ್ಷ ಮಳೆ ಬಂದರೂ ಎಲ್ಲವೂ ಸರಿ ಮಾಡ್ತಾರೆ. ಆದ್ರೆ ನಮ್ಮಲ್ಲಿ ಅಂತಹ ಕೆಲಸ ಆಗ್ತಿಲ್ಲ - ಹೆಚ್​ ಡಿ ಕುಮಾರಸ್ವಾಮಿ

ಬೆಂಗಳೂರಿನಲ್ಲಷ್ಟೇ ಮಳೆ ಆಗಿಲ್ಲವಲ್ಲಾ? ಎಂದು ಬೆಂಗಳೂರಿನಲ್ಲಿ ರಸ್ತೆ ಗುಂಡಿ ಕುರಿತು ಹೆಚ್​ಡಿ ಕುಮಾರಸ್ವಾಮಿ ಕಿಡಿ
ಹೆಚ್ ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೇರಳವಾಗಿ ರಸ್ತೆ ಗುಂಡಿಗಳು ಸೃಷ್ಟಿಯಾಗುತ್ತಿರುವ ಕುರಿತು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಷ್ಟೇ ಅಲ್ಲ ರಾಜ್ಯದಲ್ಲೇ ಈ ಗುಂಡಿ ಸ್ಥಿತಿ ಇದೆ. ಈ ಕುರಿತು ಸಿಎಂ ವಿಡಿಯೋ ಕಾನ್ಫರೆನ್ಸ್ ‌ಮಾಡ್ತಿದ್ದಾರೆ. ಇಂತಹ ಕಾನ್ಫರೆನ್ಸ್ ಗಳು ಎಷ್ಟಾಗಿವೆ, ಆದ್ರೆ ಗುಂಡಿಗಳು ಮುಚ್ಚಿಲ್ಲ. ಜನರ ಜೀವನ ಕಾಪಾಡುವ ಕೆಲಸವನ್ನು ಸರ್ಕಾರ ಮಾಡ್ತಿಲ್ಲ. ಮಳೆ ಬಂದಿರೋದು ನಿಜ, ರಾಜ್ಯದಲ್ಲಷ್ಟೇ ಮಳೆ ಆಗಿಲ್ಲ. ಮಳೆಗೆ ಅಗತ್ಯ ತಯಾರಿಯನ್ನು ಸರ್ಕಾರ ಮಾಡಿಕೊಂಡಿಲ್ಲ ಎಂದು ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದರು.

ಕರ್ನಾಟಕದಲ್ಲಿ ಮಾತ್ರವೇ ಮಳೆ ಆಗಿಲ್ಲ. ಮಳೆಗೆ ಅಗತ್ಯವಾದ ತಯಾರಿಯನ್ನು ಈ ಸರ್ಕಾರ ಮಾಡಿಕೊಂಡಿಲ್ಲ. ಒರಿಸ್ಸಾ ಸೇರಿದಂತೆ ಅನೇಕ ಕಡೆ ಪ್ರತಿ ವರ್ಷ ಮಳೆ ಬಂದರೂ ಎಲ್ಲವೂ ಸರಿ ಮಾಡ್ತಾರೆ. ಆದ್ರೆ ನಮ್ಮಲ್ಲಿ ಅಂತಹ ಕೆಲಸ ಆಗ್ತಿಲ್ಲ. ಗುಂಡಿ ಮುಚ್ಚುವ ಕೆಲಸ ಮಾತ್ರ ಆಗ್ತಿಲ್ಲ? ನಿನ್ನೆ ಅರಸೀಕೆರೆಯಲ್ಲಿ ರಸ್ತೆ ಅಪಘಾತ ಆಯ್ತು. ಸರ್ಕಾರ ಇಡೀ ರಾಜ್ಯದಲ್ಲಿ ಒಂದು ಸರ್ವೆ ಮಾಡಿಸಲಿ. ಹಲವಾರು ರಸ್ತೆಗಳಲ್ಲಿ, ಹೈವೆ ರಸ್ತೆಯಲ್ಲಿ ASI ಸೇರಿ 3-4 ಜನ ಪೊಲೀಸರು ನಿಂತಿರುತ್ತಾರೆ. ಜನರು ವಾಹನಗಳನ್ನ ನಿಲ್ಲಿಸಿ ವಸೂಲಿ ಮಾಡಲು ಅವರು ನಿಂತಿದ್ದಾರೆ. ವಸೂಲಿ ಮಾಡೋಕೆ ಈ ಸರ್ಕಾರ ನಿಂತಿದೆ. ಬೆಳಗ್ಗೆ ವಸೂಲಿ ಮಾಡಿ ರಾತ್ರಿ ಎಲ್ಲರು ಹಂಚಿಕೊಳ್ಳುತ್ತಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಪ್ರಾರಂಭ ಆಗಿ ಭಾನುವಾರದವರೆಗೆ ನೀವೆ ಎಲ್ಲದ್ದಕ್ಕೂ ಅವಕಾಶ ಕೊಟ್ಟಿದ್ದೀರಾ. ರಾತ್ರಿ ವೇಳೆ ಕುಡಿಯೋದಕ್ಕೆ ಅವಕಾಶ ಕೊಡೋರು ನೀವೆ, ಹೋಟೆಲ್ ಗೆ ರಾತ್ರಿ ಅನುಮತಿ ಕೋಡೋರು ನೀವು. ಕುಡಿದ ಮೇಲೆ ಮತ್ತೆ ಹಣ ವಸೂಲಿ ಮಾಡೋರು ನೀವೆ. KR ಪೇಟೆಯಲ್ಲಿ ಕುಂಭ ಮೇಳಕ್ಕೆ ಹಾಕಿದ್ದ ಡಾಂಬಾರು ಕಿತ್ತು ಹೋಗಿದೆಯಂತೆ. ಸ್ವಾಮೀಜಿಗಳು ಎಲ್ಲರೂ ಅಲ್ಲೆ ಇದ್ದರು. ಜನ ಇದ್ರಲ್ಲಿ 40 % ಕಮೀಷನ್ ಆಗಿದೆ ಅಂತಿದ್ದಾರೆ. ಇದು ಸರ್ಕಾರದ ಕೆಲಸ ಎಂದು ಸರ್ಕಾರದ ವಿರುದ್ದ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ವಿರುದ್ದ ವಾಹನ ಸವಾರರು ಆಕ್ರೋಶ:

ಈ ಮಧ್ಯೆ, ನಗರದಲ್ಲಾದ ಮೂರು ದಿನದ ಮಳೆಗೆ ರಾಜಾಧಾನಿ ರಸ್ತೆಗಳೆಲ್ಲ ಗುಂಡಿ ಮಯವಾಗಿದೆ. ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಸಂಚಾರ ಮಾಡಲು ವಾಹನ ಸವಾರರು ಪರದಾಡುತ್ತಿದ್ದಾರೆ. ಗುಂಡಿಬಿದ್ದಿದ್ದ ರಸ್ತೆಗಳಿಗೆ ಬಿಬಿಎಂಪಿ ಡೆಬ್ರಿಸ್ ತುಂಬಿ ತೇಪೆ ಹಚ್ಚಿತ್ತು. ಇದೀಗಾ ಮೂರು ದಿನದ ಮಳೆಗೆ ಡಿಬ್ರಿಸ್ ಎಲ್ಲವು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಇದೇ ವೇಳೆ ಗುಂಡಿಗೆ ಹಾಕಿದ್ದ ಜಲ್ಲಿಕಲ್ಲಿನ ಡಾಂಬುರು ಕಿತ್ತು ಬಂದಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು, ಬಿಬಿಎಂಪಿ ಸತ್ತು ಹೋಗಿ ನಾಲ್ಕು ವರ್ಷ ಆಗಿದೆ. ಹೀಗಾಗಿ ರಸ್ತೆಗಳೆಲ್ಲವೂ ಗುಂಡಿ ಬಿದ್ದಿವೆ. ಜನರ ಅಳಲನ್ನು ಬಿಬಿಎಂಪಿ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ಕೇಳೊಲ್ಲ ಬಿಡಿ ಅಂತಿದ್ದಾರೆ ವಾಹನ ಸವಾರರು. ಡಬಲ್ ರೋಡ್ ಉದ್ದಕ್ಕೂ ಗುಂಡಿ ಮಯವಾಗಿದೆ. ಒಂದು ಅಡಿಯಷ್ಟು ಗುಂಡಿ ಬಿದ್ದಿದ್ದರೂ ಬಿಬಿಎಂಪಿ ಡಾಂಬರ್ ಹಾಕಿಲ್ಲ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.