AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ಪಕ್ಷ ಬಿಟ್ಟು ಹೋಗುವುದು ಹೊಸದೇನಲ್ಲ, ಇದರಿಂದ ಜೆಡಿಎಸ್​ಗೆ ಯಾವುದೇ ಶಾಕ್ ಇಲ್ಲ: ಹೆಎಚ್ ಡಿ ಕುಮಾರಸ್ವಾಮಿ ಹೇಳಿಕೆ

ಜೆಡಿಎಸ್ ನಾಲ್ಕು ದಿನಗಳ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ನಾಳೆ ಮತ್ತು ನಾಡಿದ್ದು ಅಲ್ಪಸಂಖ್ಯಾತರ ಕಾರ್ಯಾಗಾರ ಏರ್ಪಾಡು ಮಾಡಿದ್ದೇವೆ. ಸೋಮವಾರ ಎಸ್​ಸಿ, ಎಸ್​ಟಿ, ಓಬಿಸಿ ಕಾರ್ಯಾಗಾರ ಏರ್ಪಾಡು ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಪಕ್ಷ ಬಿಟ್ಟು ಹೋಗುವುದು ಹೊಸದೇನಲ್ಲ, ಇದರಿಂದ ಜೆಡಿಎಸ್​ಗೆ ಯಾವುದೇ ಶಾಕ್ ಇಲ್ಲ: ಹೆಎಚ್ ಡಿ ಕುಮಾರಸ್ವಾಮಿ ಹೇಳಿಕೆ
ಎಚ್ ​ಡಿ ಕುಮಾರಸ್ವಾಮಿ
TV9 Web
| Updated By: sandhya thejappa|

Updated on:Oct 02, 2021 | 1:27 PM

Share

ಬೆಂಗಳೂರು: ಜೆಡಿಎಸ್ (JDS) ಪಕ್ಷ ಬಿಟ್ಟು ಹೋಗುವುದು ಹೊಸದೇನಲ್ಲ. ಇದರಿಂದ ಜೆಡಿಎಸ್​ಗೆ ಯಾವುದೇ ಶಾಕ್ ಇಲ್ಲ ಅಂತ ಮಾಜಿ ಮುಖ್ಯಮಂತ್ರಿ ಹೆಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ, ರಮೇಶ್ ಕುಮಾರ್ ಯಾವ ಪಕ್ಷದಲ್ಲಿದ್ರು ಅಂತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ಡಿಕೆ, ಜೆಡಿಎಸ್ ಪಕ್ಷ ನಿಂತಿರುವುದು ನಾಯಕರಿಂದ ಅಲ್ಲ. ನಮ್ಮ ಲಕ್ಷಾಂತರ ಕಾರ್ಯಕರ್ತರಿಂದ ಅಂತ ಹೇಳಿದರು.

ಜೆಡಿಎಸ್ ನಾಲ್ಕು ದಿನಗಳ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ನಾಳೆ ಮತ್ತು ನಾಡಿದ್ದು ಅಲ್ಪಸಂಖ್ಯಾತರ ಕಾರ್ಯಾಗಾರ ಏರ್ಪಾಡು ಮಾಡಿದ್ದೇವೆ. ಸೋಮವಾರ ಎಸ್​ಸಿ, ಎಸ್​ಟಿ, ಓಬಿಸಿ ಕಾರ್ಯಾಗಾರ ಏರ್ಪಾಡು ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು. 1.0 ಯಿಂದ 10.ಓ ತನಕ ನಿರಂತರ ಪಕ್ಷ ಸಂಘಟನೆಗೆ ಚಾಲನೆ ಕೊಟ್ಟಿದ್ದೇವೆ. ಇದು ಜೆಡಿಎಸ್​ನ ಆರಂಭಿಕ ಶೂರತ್ವ ಅಂತ ಹಲವರು ಭಾವನೆ ಇಟ್ಟುಕೊಂಡಿದ್ದಾರೆ. ಒಂದು ಕಡೆ ಸಂಘಟನೆ, ಇನ್ನೊಂದು ಕಡೆ ಜೆಡಿಎಸ್ ಮನೆ ಖಾಲಿ ಆಗುತ್ತಿದೆ ಎನ್ನುವ ದೊಡ್ಡ ಸುದ್ದಿಗಳು ಬರುತ್ತಿವೆ. ನಮಗೆ ಇದರಲ್ಲಿ ಯಾವುದೇ ಶಾಕ್ ಇಲ್ಲ ಅಂತ ಅಭಿಪ್ರಾಯಪಟ್ಟರು.

ಪಕ್ಷ ಬಿಡುತ್ತಿರುವವರು ಯಾರೂ ಪಕ್ಷ ಬಲವರ್ಧನೆಗೆ ಶಕ್ತಿ ತುಂಬಿದವರಲ್ಲ. ನಿನ್ನೆ ಒಬ್ಬರು ಬಿಜೆಪಿಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ. ಆ ವ್ಯಕ್ತಿ ಹಿಂದೆ ರಾಮಕೃಷ್ಣ ಹೆಗಡೆ ಕಾಲದಿಂದ ಹಲವು ಬಾರಿ ಪರಿಷತ್ ಚುನಾವಣೆಯಲ್ಲಿ ಎಂದೂ ಯಶಸ್ಸು ಕಂಡಿರಲಿಲ್ಲ. ಅವರು ಗೆದ್ದಿದ್ದು ನನ್ನ ಬಲದಿಂದ. ಇಂಥ ಪ್ರಸಂಗಗಳು ನಡೆಯುತ್ತಿರುವ ಹಿನ್ನೆಲೆ ನಾಡಿನ ಜನತೆಯ ಗಮನಕ್ಕೂ ತರುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಜಾಹೀರಾತು ನೀಡಲು ನಿಮ್ಮ ಬಳಿ ಕೋಟ್ಯಂತರ ರೂ. ಹಣವಿದೆ. ‘ಖಜಾನೆ ಖಾಲಿಯಾಗಿದೆ, ಮಣ್ಣಿನ ಮಕ್ಕಳು ಮೋಸ ಮಾಡಿದ್ರು’ ಕರ್ನಾಟಕದ ‘ಸಿದ್ಧಹಸ್ತರು’ ಈ ರೀತಿ ಹೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೇಳುತ್ತೇನೆ. ‘ಎತ್ತಿನಹೊಳೆ ಗುದ್ದಲಿ ಪೂಜೆ ಮಾಡಿದ್ರಲ್ಲ, ಏನಾಯ್ತು?’ ನನಗೆ ಸಿಕ್ಕಿದ್ದು ತಾತ್ಕಾಲಿಕ ಅಧಿಕಾರ. ಸಿದ್ದರಾಮಯ್ಯ ಖಜಾನೆ ಭರ್ತಿ ಮಾಡಿಹೋಗಿದ್ದಕ್ಕೆ ಕೊಡಲಾಗಿಲ್ಲ. ಕಳೆದ 3 ವರ್ಷಗಳಲ್ಲಿ ಒಂದೇ ಒಂದು ಮನೆ ಕೊಡೋದಕ್ಕಾಗಿಲ್ಲ ಅಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು.

ಅಂಗಲಾಚಬೇಕಾಗಿಲ್ಲ ಎಂದ ಹೆಚ್​ಡಿಕೆ ರಾಜ್ಯದ ತೆರಿಗೆ ಹಣ ಹೇಗೆ ಲೂಟಿಯಾಗ್ತಿದೆ ಎಂದು ಗೊತ್ತಿದೆ ಎಂದು ಹೇಳಿಕೆ ನೀಡಿದ ಹೆಚ್​ಡಿಕೆ, ಲೂಟಿ ಮಾಡುತ್ತಿರುವ ಕಮಿಷನ್ ಸರ್ಕಾರ ತೆಗೆಯುವುದಕ್ಕೆ, ಜಾಗೃತಿ ಮೂಡಿಸುವುದಕ್ಕಾಗಿ ಕಾರ್ಯಾಗಾರ ಮಾಡಿದ್ದೇವೆ. ಹುಡುಗಾಟಕ್ಕೆ ಕಾಲ ಕಳೆಯೋಕೆ ಕಾರ್ಯಾಗಾರ ಮಾಡಿಲ್ಲ. ಪಂಚರತ್ನ ಯೋಜನೆ ಜಾರಿಯಾದರೆ ಕೇಂದ್ರ ಸರ್ಕಾರದ ಮುಂದೆ ಅಂಗಲಾಚಬೇಕಾಗಿಲ್ಲ ಎಂದರು.

ಮುಂದುವರಿದು ಮಾತನಾಡಿದ ಅವರು, ನನ್ನ ತಲೆಯಲ್ಲಿ ಇನ್ನೂ 1-2 ಕೂದಲು ಉಳಿಸ್ಕೊಂಡಿದ್ದೇನೆ. ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಗುತ್ತಿಗೆ ಪಡೆದಿಲ್ಲ. ಅವರ ಜೇಬು ತುಂಬಿಸಿಕೊಳ್ಳುವ ಗುತ್ತಿಗೆ ಪಡೆದಿದ್ದಾರೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡೋದು ನಿಲ್ಲಿಸಲಿ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 4 ಸೀಟ್ ಗೆದ್ದಿದ್ದೇವೆ. ದಿನಕ್ಕೆ ಒಬ್ಬರು ನಮ್ಮ ಮನೆಗೆ ಬರ್ತೀರಾ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ದೊಣ್ಣೆ ನಾಯಕರ ಕೇಳಿ ಅಭ್ಯರ್ಥಿ ಹಾಕಬೇಕಾ. ನನ್ನ ಪಕ್ಷದಿಂದ ಯಾರನ್ನು ಬೇಕಾದ್ರೂ ಕಣಕ್ಕಿಳಿಸುತ್ತೇನೆ. ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಅಂತ ಬೊಗಳಿದ್ರು. ಬಳಿಕ ಸರ್ಕಾರ ನಡೆಸೋಣ ಅಂತ ನಮ್ಮ ಮನೆಗೇ ಬಂದ್ರಲ್ಲ. ಅಧಿಕಾರ ಕೊಟ್ಟ ಮೇಲೆ ನೆಟ್ಟಗೆ ನಡೆಸೋಕಾದ್ರೂ ಬಿಟ್ರಾ? ಈಗ ಬಿಜೆಪಿ ಸರ್ಕಾರ ದರಿದ್ರ ಸರ್ಕಾರ ಅಂತಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಇದನ್ನೂ ಓದಿ

ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನೀಡಲಾಗುವ ನಿವೇಶನಗಳಲ್ಲಿ ಶೇ. 5ರಷ್ಟು ಪತ್ರಕರ್ತರಿಗೆ ಮೀಸಲು; ಸಚಿವ ಭೈರತಿ ಬಸವರಾಜ್

ಪಂಜಾಬ್​ ಕಾಂಗ್ರೆಸ್​​ನಲ್ಲಿ ಮುಗಿಯದ ಗೊಂದಲ; ಹರೀಶ್​ ರಾವತ್​ ಸ್ಥಾನಕ್ಕೆ ಬರಲಿದ್ದಾರಾ ಹರೀಶ್ ಚೌಧರಿ?

Published On - 1:20 pm, Sat, 2 October 21