ಕೊವಿಡ್ ಬಗ್ಗೆ ಟಿವಿ9 ಜನರನ್ನು ಹೆದರಿಸಲಿಲ್ಲ, ಜಾಗೃತಿ ಮೂಡಿಸಿತು: ನವನಕ್ಷತ್ರ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸುಧಾಕರ

15 ವರ್ಷ ಸುದೀರ್ಘವಾಗಿ ಗುಣಮಟ್ಟವನ್ನು ಕಾಪಾಡಿಕೊಂಡಿರುವುದು ದೊಡ್ಡ ಮೈಲಿಗಲ್ಲು. ಟಿವಿ9 ವಾಹಿನಿಗೆ ಅದೇ ಸಾಟಿ. ಸುದ್ದಿಯ ಕ್ಷೇತ್ರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲು ಎಂದು ಹೇಳಿದರು.

ಕೊವಿಡ್ ಬಗ್ಗೆ ಟಿವಿ9 ಜನರನ್ನು ಹೆದರಿಸಲಿಲ್ಲ, ಜಾಗೃತಿ ಮೂಡಿಸಿತು: ನವನಕ್ಷತ್ರ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸುಧಾಕರ
ಆರೋಗ್ಯ ಸಚಿವ ಡಾ.ಕೆ.ಸುಧಾಕರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2022 | 6:33 PM

ಬೆಂಗಳೂರು: ಬದುಕು ಸದಾ ಸವಾಲಿನಿಂದಲೇ ಕೂಡಿರುತ್ತದೆ. ಈಗ ರಾಜಕಾರಣದಲ್ಲಿ, ಅದಕ್ಕೂ ಮೊದಲು ನಾನು ಮಾಡುತ್ತಿದ್ದ ವೃತ್ತಿಯಲ್ಲಿಯೂ ಸವಾಲುಗಳು ಇದ್ದವು. ಕೊವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಕೆಲಸ ಮಾಡಿದ ರೀತಿಯು ನನಗೆ ತೃಪ್ತಿ ಕೊಟ್ಟಿದೆ. ರಾಜ್ಯದ ಜನರಿಗೆ ನನ್ನಿಂದ ಕಿಂಚಿತ್ತು ಸೇವೆಯಾಗಿದೆ, ಅದು ನನಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಒಮೈಕ್ರಾನ್ ಆತಂಕವನ್ನು ನಾವು ನಿರ್ವಹಿಸಬೇಕಿದೆ. ದೊಡ್ಡ ಸವಾಲು ನಮ್ಮೆದುರು ಇದೆ. ಅದನ್ನು ನಿರ್ವಹಿಸಲು ನಮ್ಮ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು.

ಟಿವಿ9ಗೆ 15 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ‘ನವನಕ್ಷತ್ರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಟಿವಿ9 ವಾಹಿನಿಯ ಎಲ್ಲ ಸುದ್ದಿ ಸಂಪಾದಕರಿಗೆ, ಕೆಲಸ ಮಾಡುವ ಸಿಬ್ಬಂದಿಗೆ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕರ್ನಾಟಕದಲ್ಲಿ ದೂರದರ್ಶನದ ಸುದ್ದಿ ಆದ ಮೇಲೆ ಮನೆಮಾತು ಆಗಿದ್ದು ಟಿವಿ9. ಜನರ ಮನಸ್ಸಿನಲ್ಲಿ ಸುದ್ದಿ ಅಂದ್ರೆ ಟಿವಿ9 ಎಂಬ ಭಾವನೆ ಬಂದಿದೆ. 15 ವರ್ಷ ಸುದೀರ್ಘವಾಗಿ ಗುಣಮಟ್ಟವನ್ನು ಕಾಪಾಡಿಕೊಂಡಿರುವುದು ದೊಡ್ಡ ಮೈಲಿಗಲ್ಲು. ಟಿವಿ9 ವಾಹಿನಿಗೆ ಅದೇ ಸಾಟಿ. ಸುದ್ದಿಯ ಕ್ಷೇತ್ರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲು. ಟಿವಿ9 ಅರಂಭವಾದ ಹೊಸತದರಲ್ಲಿ ಪ್ರತಿಸ್ಪರ್ಧಿಗಳು ಇರಲಿಲ್ಲ. ಈಗ ಕನ್ನಡದಲ್ಲಿಯೇ 15-20 ಚಾನೆಲ್​ಗಳಿವೆ. ಸ್ಪರ್ಧೆಯ ಮಧ್ಯೆಯೂ ಗುಣಮಟ್ಟ ಉಳಿಸಿಕೊಂಡಿರುವುದು ದೊಡ್ಡವಿಚಾರ ಎಂದರು.

‘ಉತ್ತಮ ಸಮಾಜಕ್ಕಾಗಿ’ ಎನ್ನುವುದು ಟಿವಿ9 ಸುದ್ದಿವಾಹಿನಿಯ ಟ್ಯಾಗ್​ಲೈನ್. ಇದು ಅರ್ಥಪೂರ್ಣವಾಗಿದೆ, ಚೆನ್ನಾಗಿದೆ. ಪ್ರಜಾಪ್ರಭುತ್ವದ 4ನೇ ಅಂಗವಾಗಿ ನಿಮ್ಮ ಜವಾಬ್ದಾರಿಯನ್ನು ನೀವು ಅರಿತುಕೊಂಡಿದ್ದೀರಿ. ರಾಜ್ಯದ ಜನರಿಗೆ ಸತ್ಯ ಆಧರಿಸಿದ ಸುದ್ದಿ ಕೊಡುತ್ತಿದ್ದೀರಿ. ರೋಚಕತೆಯ ಬೆನ್ನು ಹತ್ತದೆ ಜನರಿಗೆ ಸುದ್ದಿ ಮುಟ್ಟಿಸಲು ಪ್ರಯತ್ನಿಸಿದ್ದೀರಿ. ಕರ್ನಾಟಕದಲ್ಲಿ ಕೊವಿಡ್ ಅಲೆ ವ್ಯಾಪಕವಾಗಿ ಹರಡಿದ್ದಾಗ ನೀವು ಜನರನ್ನು ಹೆದರಿಸಲಿಲ್ಲ. ಬದಲಿಗೆ, ಪರಿಣಾಮಕಾರಿಯಾಗಿ ಸುದ್ದಿ ತಲುಪಿಸಿದ್ದೀರಿ ಎಂದು ನುಡಿದರು.

ಸುದ್ದಿವಾಹಿನಿಯನ್ನು ನಾನು ವಿನಾಕಾರಣ ಹೊಗಳುತ್ತಿಲ್ಲ. ಕರ್ನಾಟಕದಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಮೆಚ್ಚಲೇಬೇಕಾಗಿದೆ. ನಿಮ್ಮ ಥರದ ಮೂರ್ನಾಲ್ಕು ಸುದ್ದಿವಾಹಿನಿಗಳು ನಮ್ಮ ರಾಜ್ಯದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿವೆ. ಸುದ್ದಿ ವಾಹಿನಿಗಳಲ್ಲಿ ಆರೋಗ್ಯಕರ ಬೆಳವಣಿಗೆ ಹಾಗೂ ಪೈಪೋಟಿ ಮುಂದುವರಿಯಲಿ. ಅದರಿಂದ ಜನರಿಗೆ ಲಾಭವಾಗುತ್ತೆ. ಸಾಧಕರಿಗೂ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ನಾವು ಆಶಾಭಾವನೆಯಿಂದಲೇ ಬದುಕಬೇಕು. ನಾನು ಆಶಾಭಾವನೆಯ ಭೂಮಿಕೆಯಲ್ಲಿ ಹೇಳಿದ್ದೇನೆ. ಅಪ್ ಆದ ಮೇಲೆ ಡೌನ್ ಇರಬೇಕು. ಕಷ್ಟ ಬಂದ ಮೇಲೆ ಸುಖ ಇರಬೇಕು. ಕೊನೆಯ ದಿನಗಳು ಬರ್ತಿವೆ. ಸರ್ಕಾರು ಮತ್ತು ಜನರು ಒಗ್ಗಟ್ಟಾಗಿ ಈ ಸಾಂಕ್ರಾಮಿಕವನ್ನು ಸೆಣೆಸೋಣ, ಮಣಿಸೋಣ.

ಇದನ್ನೂ ಓದಿ: ಕರ್ನಾಟಕದ ಸಾಕ್ಷಿಪ್ರಜ್ಞೆ ಟಿವಿ9 ಮಾರ್ಗದರ್ಶನ ಸದಾ ಬಯಸುವೆ: ನವನಕ್ಷತ್ರ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇದನ್ನೂ ಓದಿ: 250 ಕ್ಕಿಂತ ಹೆಚ್ಚು ಭತ್ತದ ತಳಿಗಳನ್ನು ಕಾಪಾಡಿ ಸಂಶೋಧನೆ ಮೂಲಕ ಸಾಧನೆ ಮಾಡಿದ ಮಂಡ್ಯ ರೈತ ಬೋರೇಗೌಡರಿಗೆ ನವನಕ್ಷತ್ರ ಸನ್ಮಾನ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು