AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್‌ಜಿಬಿಟಿ ಸಮುದಾಯದ ವ್ಯಕ್ತಿಗಳನ್ನು ಎಲ್ಲರೂ ಪ್ರೀತಿ, ಕಾಳಜಿ ಮತ್ತು ಆಪ್ಯಾಯತೆಯಿಂದ ನಡೆಸಿಕೊಳ್ಳಬೇಕು: ಕರ್ನಾಟಕ ಹೈಕೋರ್ಟ್

LGBT community: ವೈಟ್‌ಫೀಲ್ಡ್ ಪೊಲೀಸರು ತಮ್ಮ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ ನಂತರ ಮೃತರ ಮೂವರು ಸಹೋದ್ಯೋಗಿಗಳು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಉತ್ತರ ಪ್ರದೇಶ ಮೂಲದ ಮೃತರ ತಂದೆ, ಈ ಮೂವರ ವಿರುದ್ಧ ತನ್ನ ಮಗನಿಗೆ ಲೈಂಗಿಕ ಸಂಬಂಧಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು, ಇದು ಆತ್ಮಹತ್ಯೆಗೆ ಕಾರಣವಾಯಿತು ಎಂದು ದೂರಿದ್ದಾರೆ. ಆರೋಪಿಗಳ ಪೈಕಿ ಒಬ್ಬರು ಬೆಂಗಳೂರಿನವರಾಗಿದ್ದರೆ, ಎರಡು ಮತ್ತು ಮೂರನೇ ಆರೋಪಿಗಳು ಉತ್ತರ ಪ್ರದೇಶದವರು. ಇವರೆಲ್ಲರೂ ಬೆಂಗಳೂರಿನ ಕಂಪನಿಯೊಂದರಲ್ಲಿ ಸಹೋದ್ಯೋಗಿಗಳಾಗಿದ್ದರು.

ಎಲ್‌ಜಿಬಿಟಿ ಸಮುದಾಯದ ವ್ಯಕ್ತಿಗಳನ್ನು ಎಲ್ಲರೂ ಪ್ರೀತಿ, ಕಾಳಜಿ ಮತ್ತು ಆಪ್ಯಾಯತೆಯಿಂದ ನಡೆಸಿಕೊಳ್ಳಬೇಕು: ಕರ್ನಾಟಕ ಹೈಕೋರ್ಟ್
ಎಲ್‌ಜಿಬಿಟಿ ಸಮುದಾಯದ ವ್ಯಕ್ತಿಗಳನ್ನು ಪ್ರೀತಿ, ಆಪ್ಯಾಯತೆಯಿಂದ ನಡೆಸಿಕೊಳ್ಳಬೇಕು: ಹೈಕೋರ್ಟ್
ಸಾಧು ಶ್ರೀನಾಥ್​
|

Updated on:Aug 17, 2023 | 11:06 AM

Share

ಎಲ್‌ಜಿಬಿಟಿ ಸಮುದಾಯದ ವ್ಯಕ್ತಿಯೊಬ್ಬರ (LGBT community member) ಆತ್ಮಹತ್ಯೆಗೆ (Suicide) ಕುಮ್ಮಕ್ಕು ನೀಡಿದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ (High Court of Karnataka), ಎಲ್‌ಜಿಬಿಟಿ (ಸಲಿಂಗಕಾಮಿ, ದ್ವಿಲಿಂಗಿ, ತೃತೀಯಲಿಂಗಿ ಮತ್ತು ಇತರ ಲೈಂಗಿಕ ದೃಷ್ಟಿಕೋನಗಳು ಮತ್ತು ಲಿಂಗಗಳು) ಸೇರಿದಂತೆ ಯಾರೇ ಆಗಲಿ ಪ್ರಾಣ ಕಳೆದುಕೊಳ್ಳದಂತೆ ಪ್ರೀತಿ ಮತ್ತು ಕಾಳಜಿಯಿಂದ (love and care) ನಡೆಸಿಕೊಳ್ಳಬೇಕು ಎಂದು ಹೇಳಿದೆ.

“ಪ್ರಕರಣದಲ್ಲಿ ಸತ್ತವರು ಎಲ್ಜಿಬಿಟಿ ಸಮುದಾಯಕ್ಕೆ ಸೇರಿದವರು. ಅವರನ್ನು ಬಹಿಷ್ಕರಿಸುವ ಸೂಕ್ಷ್ಮತೆಯು ಅವರ ಮನಸ್ಸನ್ನು ವ್ಯಾಪಿಸಿದೆ. ಅದರಿಂದ, ಅಂತಹ ಜನರನ್ನು ಎಲ್ಲಾ ಪ್ರೀತಿ ಮತ್ತು ಕಾಳಜಿಯಿಂದ ನಡೆಸಿಕೊಳ್ಳಬೇಕು … ಪ್ರತಿಯೊಬ್ಬ ನಾಗರಿಕನು ಅಂತಹ ನಾಗರಿಕರನ್ನು ಸಾಮಾನ್ಯ ಮನುಷ್ಯನಿಗೆ ಕೊಡುವ ಎಲ್ಲಾ ಪ್ರೀತಿ ಮತ್ತು ಕಾಳಜಿಯಿಂದ ನೊಡಿಕೊಂಡರೆ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ (Justice M Nagaprasanna) ತಮ್ಮ ತೀರ್ಪಿನಲ್ಲಿ ಹೇಳಿದರು.

ವೈಟ್‌ಫೀಲ್ಡ್ ಪೊಲೀಸರು ತಮ್ಮ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ ನಂತರ ಮೃತರ ಮೂವರು ಸಹೋದ್ಯೋಗಿಗಳು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಉತ್ತರ ಪ್ರದೇಶ ಮೂಲದ ಮೃತರ ತಂದೆ, ಈ ಮೂವರ ವಿರುದ್ಧ ತನ್ನ ಮಗನಿಗೆ ಲೈಂಗಿಕ ಸಂಬಂಧಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು, ಇದು ಆತ್ಮಹತ್ಯೆಗೆ ಕಾರಣವಾಯಿತು ಎಂದು ದೂರಿದ್ದಾರೆ. ಆರೋಪಿಗಳ ಪೈಕಿ ಒಬ್ಬರು ಬೆಂಗಳೂರಿನವರಾಗಿದ್ದರೆ, ಎರಡು ಮತ್ತು ಮೂರನೇ ಆರೋಪಿಗಳು ಉತ್ತರ ಪ್ರದೇಶದವರು. ಇವರೆಲ್ಲರೂ ಬೆಂಗಳೂರಿನ ಕಂಪನಿಯೊಂದರಲ್ಲಿ ಸಹೋದ್ಯೋಗಿಗಳಾಗಿದ್ದರು. ಮೃತ ವ್ಯಕ್ತಿ 2014 ರಿಂದ 2016 ರವರೆಗೆ ಕಂಪನಿಯಲ್ಲಿ ಕೆಲಸ ಮಾಡಿದ್ದಾನೆ. ಅವರು 2022 ರಲ್ಲಿ ದೃಶ್ಯ ಮಾಧ್ಯಮ ಸರಕು ಕಂಪನಿಯ ವ್ಯವಸ್ಥಾಪಕರಾಗಿ ಅದೇ ಕಂಪನಿಗೆ ಮರುಸೇರ್ಪಡೆಯಾದರು. ಅವನ ಸಹೋದ್ಯೋಗಿಗಳು “ಅಸಹ್ಯಕರ ಜೋಕ್‌ಗಳನ್ನು ಹೊಡೆಯುವ ಮೂಲಕ ಅವನನ್ನು ಎದೆಗೊಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರೂ ಸತ್ತವನ ಲೈಂಗಿಕ ದೃಷ್ಟಿಕೋನದ ಬಗ್ಗೆ ಲೇವಡಿ ಮಾಡಿದ್ದಾರೆ ಎಂದು ದೂರಲಾಗಿದೆ.

ತಮ್ಮ ಮಗ ಫೆಬ್ರವರಿ 28 ರಂದು ರಾಜೀನಾಮೆ ನೀಡಿದ್ದನಾದರೂ ನಂತರ ತನ್ನ ರಾಜೀನಾಮೆಯನ್ನು ಹಿಂತೆಗೆದುಕೊಂಡ. ಅವನಿಗೆ ನೆಮ್ಮದಿಯಿಂದ ಕೆಲಸ ಮಾಡಲು ಆಗದ ಹುದ್ದೆಯನ್ನು ನೀಡಲಾಯಿತು ಎಂದು ಅರ್ಜಿದಾರ ಅಪ್ಪ ಆರೋಪಿಸಿದ್ದಾರೆ. ನಂತರ ನನ್ನ ಮಗ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೆಲಿನ ಲೈಂಗಿಕ ಕಿರುಕುಳ ಕಾಯ್ದೆಯಡಿ ರಚಿಸಲಾದ ಆಂತರಿಕ ದೂರುಗಳ ಸಮಿತಿಗೆ ದೂರು ನೀಡಿದರು.

ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯೂ ದೂರು ದಾಖಲಿಸಿದ್ದ. ಅದಾದಮೇಲೆ, ಮೂವರೂ ಸಹೋದ್ಯೋಗಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಹಾಯಕ ಪೊಲೀಸ್ ಆಯುಕ್ತರನ್ನೂ ಸಂಪರ್ಕಿಸಿದ್ದ. ಕೊನೆಗೆ, ತಮ್ಮ ಸಂತ್ರಸ್ತ ಪುತ್ರ ಜೂನ್ 3, 2023 ರಂದು ಆತ್ಮಹತ್ಯೆ ಮಾಡಿಕೊಂಡ. ಮರುದಿನ ಮೃತನ ತಂದೆಯಾದ ನಾನು ಹೈಕೋರ್ಟ್​ ಮೊರೆಹೋದೆ ಎಂದು ತಂದೆ ತಿಳಿಸಿದ್ದಾರೆ.

ನ್ಯಾಯಾಲಯ ತನ್ನ ತೀರ್ಪಿನಲ್ಲಿ, “ದುರದೃಷ್ಟವಶಾತ್, ಈ ಪ್ರಕರಣದಲ್ಲಿ ಯುವಕನ ಅಮೂಲ್ಯವಾದ ಜೀವವು ಹೋಗಿದೆ, ಎಲ್ಲವೂ ಸತ್ತ ವ್ಯಕ್ತಿಯ ಲೈಂಗಿಕ ದೃಷ್ಟಿಕೋನದ ಬಗೆಗಿನ ಮನಸ್ಥಿತಿ ತೋರಿಸುವ ಪ್ರಾಥಮಿಕ ಆರೋಪಗಳಾಗಿವೆ. ಆದ್ದರಿಂದ, ಇಂತಹ ಸಂದರ್ಭಗಳಲ್ಲಿ ಪ್ರತಿಯೊಬ್ಬ ನಾಗರಿಕರೂ ಸಹನೆಯನ್ನು ತೋರಬೇಕು. ಸಂವೇದನಾಶೀಲ ಜನರೊಂದಿಗೆ ಸಂವಹನ ನಡೆಸುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.

ಈ ವಿಷಯದ ಬಗ್ಗೆ ನಾವು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕ. ಅವರೆಲ್ಲರೂ ಮನುಷ್ಯರು ಮತ್ತು ಎಲ್ಲರೂ ಸಮಾನತೆಗೆ ಅರ್ಹರು. ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಹೈಕೋರ್ಟ್ ಗಮನಿಸಿದೆ. ಎಫ್‌ಐಆರ್ ದಾಖಲಾದ ಕೇವಲ ಮೂರು ದಿನಗಳಲ್ಲಷ್ಟೇ ಪ್ರಸ್ತುತ ಅರ್ಜಿಯನ್ನು ಸಲ್ಲಿಸಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಇದು ಪ್ರಾಥಮಿಕ ದೃಷ್ಟಿಕೋನ ಇಲ್ಲದ ಪ್ರಕರಣವಲ್ಲ. ಅಥವಾ ಆರೋಪಗಳನ್ನು ಸುಖಾಸುಮ್ಮನೆ ಮಾಡಿಲ್ಲ ಎಂಬುದು ಗಮನಾರ್ಹವೆಂದು ಹೈಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.

ಇದೇ ವೇಳೆ ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್, “ವ್ಯಕ್ತಿಯ ಸಾವು ಮತ್ತು ಆರೋಪಿಗಳು ಸದರಿ ಸಂತ್ರಸ್ತನ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣವನ್ನು ಇತರೆ ಪ್ರಕರಣಗಳ ವಾಸ್ತವಾಂಶದ ಆಧಾರದ ಮೇಲೆಯೇ ಪರಿಗಣಿಸಬೇಕಾಗುತ್ತದೆ. ನಿರ್ದಿಷ್ಟವಾಗಿ ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣಗಳಲ್ಲಿ ಕೋರ್ಟ್​ ಹಸ್ತಕ್ಷೇಪ ಮಾಡುವುದಿಲ್ಲ. ಅದಕ್ಕೆ ಯಾವುದೇ ನಿರ್ದಿಷ್ಟ ನಿಯತಾಂಕ, ಅಳತೆಗೋಲು ಅಥವಾ ಪ್ರಮೇಯ ಇರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:04 am, Thu, 17 August 23

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ