15 ದಿನದ ಮಗುವಿಗೆ ಹಾರ್ಟ್ ಅಪರೇಷನ್, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ

| Updated By: ಆಯೇಷಾ ಬಾನು

Updated on: Jun 16, 2024 | 7:34 AM

ಸರ್ಕಾರಿ ಆಸ್ಪತ್ರೆಗಳೆಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಅದೇ ಸರ್ಕಾರಿ ಆಸ್ಪತ್ರೆಲ್ಲಿ 15 ದಿನದ ಮಗುವುಗೆ ಸರ್ಜರಿ ಮಾಡಿ ಡಾಕ್ಟರ್​ಗಳು ಸಾಧಾನೆ ಮಾಡಿದ್ದಾರೆ. ಮಗು ಉಳಿಸಿಕೊಳ್ಳುವ ಸಲುವಾಗಿ ಹಲವು ಖಾಸಗಿ ಆಸ್ಪತ್ರೆಗಳನ್ನ ಸುತ್ತಿದ್ರು‌. ಕೊನೆಗೆ ಇಂದಿರಾ ಗಾಂಧಿ ಆಸ್ಪತ್ರೆಗೆ ಮಗು ದಾಖಲಿಸಿದ್ದು ಸಧ್ಯ ಹಾರ್ಟ್ ಸಮಸ್ಯೆಗೆ ಸರ್ಜರಿ ಮಾಡಿ ಮಗುವನ್ನ ಡಾಕ್ಟರ್ಸ್ ಉಳಿಸಿಕೊಂಡಿದ್ದಾರೆ.‌

15 ದಿನದ ಮಗುವಿಗೆ ಹಾರ್ಟ್ ಅಪರೇಷನ್, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ
ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ
Follow us on

ಬೆಂಗಳೂರು, ಜೂನ್.16: ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳೆಂದ್ರೆ (Government Hospital) ಮೂಗು ಮುರಿಯುವವರೇ ಜಾಸ್ತಿ.‌ ಹಣ ಜಾಸ್ತಿಯಾದ್ರು ಪರವಾಗಿಲ್ಲ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯೋಣ ಅಂತ ಸಾಕಷ್ಟು ಮಂದಿ ಅಂದುಕೊಳ್ತಾರೆ.‌ ಆದರೆ ಇಂದು ನಾವು ಹೇಳುವುದಕ್ಕೆ ಹೊರಟಿರುವ ಸ್ಟೋರಿಯಿಂದ ಬಹುಶಃ ಸರ್ಕಾರಿ ಆಸ್ಪತ್ರೆಗಳ ಮೇಲಿನ ಭಾವನೆ ಬದಲಾಗಬಹುದು. ಯಾಕಂದ್ರೆ ನಗರದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ (Indira Gandhi Children Hospital) 15 ದಿನದ ಎಳೆ ಮಗುವಿಗೆ ಹಾರ್ಟ್ ಆಪರೇಷನ್ ಮಾಡಿ ಸಕ್ಸಸ್ ಆಗಿದ್ದು, ಸಾವಿನೆಳೆಯಿಂದ ಮಗು ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿದೆ‌.

ಕೆಲ ದಿನಗಳ ಹಿಂದೆ 15 ದಿನದ ಎಳೆಯ ಮಗು ಹಾರ್ಟ್ ಸಮಸ್ಯೆಯಿಂದ ಬಳತ್ತಿದ್ದರಿಂದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ದಾಖಲಿಸಿದ ಮಗು ಆರು ತಿಂಗಳಿಗೆ ಹುಟ್ಟಿದ್ದು, ಮಗುವಿನ ಹೃದಯದಲ್ಲಿ ಹೋಲ್ ಇತ್ತು. ಇದರಿಂದ ಮಗುವಿನ ಉಸಿರಾಟಕ್ಕೆ ಸಮಸ್ಯೆಯಾಗುತ್ತಿತ್ತು. ಹುಟ್ಟಿದಾಗಿನಿಂದಲೇ ವೆಂಟಿಲೇಶನ್ ಗೆ ಇರಿಸಲಾಗಿತ್ತು.‌ ಇನ್ನು ಮಗುವಿಗೆ ಹೋಲ್ ಇದ್ದಿದ್ದರಿಂದ ಮಗು ಉಳಿಯೋದೇ ಇಲ್ಲ ಅಂತ ಪೋಷಕರು ಹೆದರಿದ್ರು.‌ ಮಗು ಉಳಿಸಿಕೊಳ್ಳುವ ಸಲುವಾಗಿ ಹಲವು ಖಾಸಗಿ ಆಸ್ಪತ್ರೆಗಳನ್ನ ಸುತ್ತಿದ್ರು‌. ಕೊನೆಗೆ ಇಂದಿರಾ ಗಾಂಧಿ ಆಸ್ಪತ್ರೆಗೆ ಮಗು ದಾಖಲಿಸಿದ್ದು ಸಧ್ಯ ಹಾರ್ಟ್ ಸಮಸ್ಯೆಗೆ ಸರ್ಜರಿ ಮಾಡಿ ಮಗುವನ್ನ ಡಾಕ್ಟರ್ಸ್ ಉಳಿಸಿಕೊಂಡಿದ್ದಾರೆ.‌ ಅಂದಹಾಗೇ ಮಗುವಿಗೆ ಪಿಡಿಎ ಲೈಗೇಷನ್ ಸರ್ಜರಿ ಮಾಡಿದ್ದು, ಸಾವಿನಂಚಿನಿಂದ ಮಗು ಪಾರಾಗಿದೆ.

ಇದನ್ನೂ ಓದಿ: ಅಪ್ಪಂದಿರ ದಿನ: ನಿಮ್ಮ ತಂದೆಗೆ ಯಾವ ಹಣಕಾಸು ಗಿಫ್ಟ್ ಕೊಡಬಹುದು? ಇಲ್ಲಿದೆ ಐಡಿಯಾ

ಇನ್ನು, ಮಗು ಹುಟ್ಟಿದಾಗಲೇ ಮಗುವಿನ ಕಂಡಿಷನ್ ಕ್ರಿಟಿಕಲ್‌ ಇತ್ತು. ಇದೀಗಾ ಮಗು ಆರಾಮಾಗಿದೆ. ಇನ್ನು ಮಗುವಿನ ಅಪರೇಷನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಕೇಳಿದ್ವಿ.‌ ಅಲ್ಲಿ 30 ಲಕ್ಷಕ್ಕೂ ಹೆಚ್ಚು ಆಗುತ್ತೆ ಅಂತ ಹೇಳಿದ್ರು. ಆದ್ರೆ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೇವಲ 7 ಸಾವಿರಕ್ಕೆ ಸರ್ಜರಿ ಮಾಡಿದ್ದಾರೆ. ಇಷ್ಟು ದಿನಗಳ‌ ಕಾಲ ಸರ್ಕಾರಿ ಆಸ್ಪತ್ರೆ ಎಂದ್ರೆ ಅಷ್ಟೋಂದು ನಂಬಿಕೆ ಇರಲಿಲ್ಲ. ಆದ್ರೆ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ನಮ್ಮ ಮಗುವಿನ ಬಗ್ಗೆ ತೆಗೆದುಕೊಂಡ ಜಾಗೃತಿ ನೋಡಿ ತುಂಬ ಖುಷಿಯಾಯ್ತು. ನಮ್ಮ ಮಗುವನ್ನ ಆಸ್ಪತ್ರೆಯ ಕರೆದುಕೊಂಡು ಬಂದಾಗ 800 ಗ್ರಾಂ ಇತ್ತು. ಇದನ್ನ ಹ್ಯಾಂಡಲ್ ಮಾಡುವುದೇ ಕಷ್ಟವಾಗಿತ್ತು.‌ ಆದ್ರೆ ಅಂತಹ ಕ್ರಿಟಿಕಲ್ ಸಿಚುವೇಷನ್‌ನಲ್ಲೂ ಮಗುವಿಗೆ ಸರ್ಜರಿ‌ ಮಾಡಿ ಮಗು ಜೀವವನ್ನ ಉಳಿಸಿದ್ದಾರೆ‌ ಡಾಕ್ಟರ್ಸ್. ಸರ್ಕಾರಿ ಆಸ್ಪತ್ರೆಯಲ್ಲೀ ಬಡವರ ಜೀವ ಉಳಿಯುತ್ತೆ‌ ಎನ್ನುವ ನಂಬಿಕೆ ಜಾಸ್ತಿಯಾಗಿದೆ ಅಂತ ಮಗುವಿನ ಪೋಷಕರು ಸಂತೋಷ ವ್ಯಕ್ತಪಡಿಸಿದ್ರು.

ಒಟ್ಬಲ್ಲಿ, ಮಗುವಿನ ಪ್ರಾಣವೇ ಉಳಿಯೋದಿಲ್ಲ ಅಂತ ನಂಬಿಕೆಯನ್ನೇ ಹುಸಿಯಾಗಿಸಿಕೊಂಡಿದ್ದ ಪೋಷಕರಿಗೆ ಮಗು ಉಳಿದುಬಂದಿದ್ದು, ಸರ್ಕಾರಿ ಆಸ್ಪತ್ರೆಗಳ‌‌‌ ಮೇಲಿನ ನಂಬಿಕೆಯನ್ನ ಹೆಚ್ಚಿಸಿದ್ದು, 15 ದಿನ ಮಗುವಿಗೆ ಹಾರ್ಟ್ ಆಪರೇಷನ್ ಮಾಡಿ‌ದ ಸಕ್ಸಸ್ ಗೆ ಇಂದಿರಾ ಗಾಂಧಿ ಮಕ್ಕಳ‌ ಆಸ್ಪತ್ರೆ ಸಾಕ್ಷಿಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ