ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ: ಮುಂದಿನ 4 ತಿಂಗಳು ಸಂಚಾರ ವ್ಯತ್ಯಯ, ಮಾರ್ಗ ಬದಲಾವಣೆ ಇಲ್ಲಿದೆ

| Updated By: ವಿವೇಕ ಬಿರಾದಾರ

Updated on: Apr 16, 2024 | 12:29 PM

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ: ಕೆಆರ್​​ಪುರ ಲೂಪ್​ನಲ್ಲಿ ಮುಂದಿನ ನಾಲ್ಕು ತಿಂಗಳ ಕಾಲ ಸಂಚಾರ ದಟ್ಟಣೆ ಉಂಟಾಗಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್​ ಇಲಾಖೆ ಪ್ರಕಟಣೆ ಹೊರಡಿಸಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಇಲಾಖೆ ಮಾರ್ಗ ಬದಲಾವಣೆ ತಿಳಿಸಿದೆ.

ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ: ಮುಂದಿನ 4 ತಿಂಗಳು ಸಂಚಾರ ವ್ಯತ್ಯಯ, ಮಾರ್ಗ ಬದಲಾವಣೆ ಇಲ್ಲಿದೆ
ಮಾರ್ಗ ಬದಲಾವಣೆ ಸೂಚನೆ
Follow us on

ಬೆಂಗಳೂರು, ಏಪ್ರಿಲ್​ 16: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹೆಬ್ಬಾಳ ಮೇಲ್ಸೇತುವೆ (Hebbal Flyover) ವಿಸ್ತರಣೆ ಕಾಮಗಾರಿಯನ್ನು ಚುರುಕುಗೊಳಿಸಿದೆ. ಹೆಬ್ಬಾಳ ಮೇಲ್ಸೇತುವೆಗೆ ಬಿಡಿಎ ಎರಡು ಹೊಸ ಟ್ರ್ಯಾಕ್​​​ಗಳನ್ನು ಸೇರಿಸಲಿದೆ. ಈ ಹಿನ್ನೆಲೆಯಲ್ಲಿ ಕೆಆರ್​ ಪುರ ಲೂಪ್​ ಸೇತುವೆ ಮುಖ್ಯ ಟ್ರ್ಯಾಕ್​ ಬಳಿ ಎರಡು ಸ್ಕ್ಯಾನ್​ಗಳನ್ನು ಕಿತ್ತು ಹಾಕಲಾಗುತ್ತದೆ. ಹೀಗಾಗಿ ಕೆಆರ್​​ಪುರ ಲೂಪ್​ನಲ್ಲಿ ಮುಂದಿನ ನಾಲ್ಕು ತಿಂಗಳ ಕಾಲ ನಗರದ ಕಡೆಗೆ ಸಂಚಾರ ನಿಧಾನವಾಗಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ (Bengaluru Traffic Police)​ ಇಲಾಖೆ ಪ್ರಕಟಣೆ ಹೊರಡಿಸಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಇಲಾಖೆ ಮಾರ್ಗ ಬದಲಾವಣೆ ತಿಳಿಸಿದೆ.

ಮಾರ್ಗ ಬದಲಾವಣೆ

ಏಪ್ರಿಲ್​ 17 ರಿಂದ ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ವಾಹನಗಳ ಪೈಕಿ ದ್ವಿ-ಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳಿಗೆ ಕೆ.ಆರ್​.ಪುರ ಅಪ್​-ರ್ಯಾಂಪ್​ನಲ್ಲಿ ನಿಷೇಧಿಸಲಾಗಿದೆ.

ನಾಗವಾರ (ಔಟರ್ ರಿಂಗ್ ರಸ್ತೆ) ಕಡೆಯಿಂದ ನಗರದ ಒಳಗೆ ಮೇಖ್ರಿ ಸರ್ಕಾಲ್​ ಮುಖಾಂತರ ಬರುತ್ತಿದ್ದ ವಾಹನಗಳ ಚಾಲಕರು ಹೆಬ್ಬಾಳ ಸರ್ಕಲ್​ನಲ್ಲಿ ಫ್ಲೈ ಓವರ್​ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್​ ಬಳಿ ಯೂ ಟರ್ಟ್​ ಪಡೆದು ಸರ್ವಿಸ್ ರಸ್ತೆ ಯಿಂದ ಹೆಬ್ಬಾಳ ಫ್ಲೈಒವರ್​ನ ರ್ಯಾಂಪ್ ಮುಖೇನ ನಗರದ ಕಡೆಗೆ ಚಲಿಸಬಹುದು.

ಕೆಆರ್​ಪುರ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳಿಗೆ ಪರ್ಯಾಯ ಮಾರ್ಗ್​

  • ಐಒಸಿ-ಮುಕುಂದ ಥೀಯೇಟರ್ ರಸ್ತೆ.
  • ಲಿಂಗರಾಜಪುರ ಮೇಲ್ಸೇತುವೆ ಮಾರ್ಗ.
  • ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರದೊಳಗೆ ಪ್ರವೇಶಿಸಬೇಕು.

ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನ ಸವಾರರು/ ಚಾಲಕರು ಜಿಕೆವಿಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದಾಗಿದೆ.

ಇದನ್ನೂ ಓದಿ: 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್‌‌ ಮಾಡಿದ ಮಹಿಳೆ: 1 ಲಕ್ಷಕ್ಕೂ ಅಧಿಕ ದಂಡ, ಫೋಟೋಸ್​ ನೋಡಿ

ಕೆ.ಆರ್​.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್​ ಕೆಳಗಡೆ ನೇರವಾಗಿ ಬಿಇಎಲ್​ ಸರ್ಕಲ್​ ತಲುಪಿ ಎಡತಿರುವು ಪಡೆದು ಸದಾಶಿವನಗರ ಜಂಕ್ಷನ್​ನಲ್ಲಿ ಬಲತಿರುವು ಪಡೆದು ಐಐಎಸ್​ಸಿ ಮುಖಾಂತರ ಚಲಿಸಬಹುದಾಗಿದೆ.

ಕೆಆರ್​ಪುರಂ, ಹೆಣ್ಣೂರು, ಹೆಚ್​.ಆರ್.​ಬಿ.ಆರ್ ಲೇಔಟ್​​, ಕೆಜಿ ಹಳ್ಳಿ, ಬಾಣಸವಾಡಿ ಕಡೆಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆ ಹೋಗುವ ವಾಹನಗಳು ಹೆಣ್ಣೂರು0ಬಾಗನೂರು ರಸ್ತೆಯನ್ನು ಬಳಸಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ