- Kannada News Photo gallery Karnataka News in Kannada: Bangalore Woman Breaks Traffic rules 270 times in Bengaluru
270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಮಹಿಳೆ: 1 ಲಕ್ಷಕ್ಕೂ ಅಧಿಕ ದಂಡ, ಫೋಟೋಸ್ ನೋಡಿ
ಬೆಂಗಳೂರಿನ ಮಹಿಳೆಯೊಬ್ಬರು ಹೆಲ್ಮೆಟ್ ಹಾಕದೆ, ಮೊಬೈಲ್ನಲ್ಲಿ ಮಾತನಾಡುತ್ತಾ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಸುತ್ತಾಡಿದ್ದಾರೆ. ಹೀಗೆ ಸುತ್ತಾಡುವಾಗ ಮಹಿಳೆಯು ಸಂಚಾರಿ ಪೊಲೀಸ್ ಇಲಾಖೆಯ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. 1 ಲಕ್ಷ ರೂ.ಗು ಅಧಿಕ ದಂಡ ಬಿದ್ದಿದೆ.
Updated on: Apr 07, 2024 | 3:00 PM

ಬೆಂಗಳೂರಿನ ಮಹಿಳೆಯೊಬ್ಬರು ಹೆಲ್ಮೆಟ್ ಹಾಕದೆ, ಮೊಬೈಲ್ನಲ್ಲಿ ಮಾತನಾಡುತ್ತಾ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಸುತ್ತಾಡಿದ್ದಾರೆ. ಹೀಗೆ ಸುತ್ತಾಡುವಾಗ ಮಹಿಳೆಯು ಸಂಚಾರಿ ಪೊಲೀಸ್ ಇಲಾಖೆಯ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. 1 ಲಕ್ಷ ರೂ.ಗು ಅಧಿಕ ದಂಡ ಬಿದ್ದಿದೆ.

ಬೆಂಗಳೂರು ನಗರ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮಗಳನ್ನು ಪಾಲಿಸಿ ಎಂದು ಎಷ್ಟೇ ಅರಿವು ಮೂಡಿಸುತ್ತಿದ್ದಾರೆ. ಆದರು ಕೂಡ ಕೆಲವು ಜನ ಮಾತ್ರ ಟ್ರಾಫಿಕ್ ಪೊಲೀಸರ ಮಾತಿಗೆ ಬೆಲೆ ಕೊಡದೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಸುತ್ತಾಡುತ್ತಾರೆ.

ಹೀಗೆಯೇ ಬೆಂಗಳೂರಿನ ಮಹಿಳೆಯೊಬ್ಬರು ಹೆಲ್ಮೆಟ್ ಹಾಕದೆ, ಮೊಬೈಲ್ನಲ್ಲಿ ಮಾತನಾಡುತ್ತಾ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಸುತ್ತಾಡಿದ್ದಾರೆ. ಹೀಗೆ ಸುತ್ತಾಡುವಾಗ ಮಹಿಳೆಯು ಸಂಚಾರಿ ಪೊಲೀಸ್ ಇಲಾಖೆಯ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

KA03 JE5705 ನಂಬರ್ನ ಆ್ಯಕ್ಟೀವಾ ಬೈಕ್ ಮೇಲೆ ಸಂಚರಿಸುವ ಮಹಿಳೆ 270 ಬಾರಿ ಸಂಚಾರಿ ನಿಯಮ ಬ್ರೇಕ್ ಮಾಡಿದ್ದಾರೆ.

ಸಿಗ್ನಲ್ ಜಂಪ್, ಒನ್ ವೇನಲ್ಲಿ ಹೋಗುವುದು, ಹೆಲ್ಮೆಟ್ ಹಾಕಲ್ಲ, ಸಿಗ್ನಲ್ನಲ್ಲಿ ನಿಲ್ಲಲ್ಲ. ಈ ರೀತಿ 270 ಬಾರಿ ಸಂಚಾರಿ ನಿಯಮ ಬ್ರೇಕ್ ಮಾಡಿದ್ದಕ್ಕೆ 1,36,000 ಸಾವಿರ ದಂಡ ಬಿದ್ದಿದೆ.

ಅಲ್ಲದೆ ಮಹಿಳೆ ಟ್ರಾಫಿಕ್ ಪೊಲೀಸರಿಗೆ ಯಾಮಾರಿಸಲು ನಂಬರ್ ಪ್ಲೇಟ್ ಮರೆಮಾಚಿ ಓಡಾಡಿದ್ದಾರೆ.

ಬೆಂಗಳೂರಿನ ಸುಧಾಮನಗರದಲ್ಲಿ ಸಂಚಾರ ನಿಮಯ ಬ್ರೇಕ್ ಮಾಡಿದ್ದನ್ನು, ಸಾರ್ವಜನಿಕರು ಫೋಟೋ ತೆಗೆದು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್ನಲ್ಲಿ) ಫೋಸ್ಟ್ ಮಾಡಿ, ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ದಂಡ ವಸೂಲಿ ಮಾಡುವಂತೆ ಮನವಿ ಮಾಡಿದ್ದಾರೆ.



















