ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಹರಾಜಿಗೂ ಮುನ್ನ ಭರ್ಜರಿ ಟ್ರೇಡಿಂಗ್ ಪ್ರಕ್ರಿಯೆಗಳು ನಡೆದಿದ್ದವು. ಈ ಟ್ರೇಡಿಂಗ್ ಪ್ರಕ್ರಿಯೆ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಖರೀದಿಸುವಲ್ಲಿ ಮುಂಬೈ ಇಂಡಿಯನ್ಸ್ ತಂಡ ಯಶಸ್ವಿಯಾಗಿತ್ತು. ಹೀಗೆ ಪಾಂಡ್ಯರ ಖರೀದಿಗೆ ತೆರೆಮರೆಯಲ್ಲಿ ನೆರವಿಗೆ ನಿಂತದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಬುದು ವಿಶೇಷ.