ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಜೂಜಾಟವಾಡಿ ವಂಚಿಸ್ತಿದ್ದ ಗ್ಯಾಂಗ್ ಖಾಕಿ ಬಲೆಗೆ: ಐವರು ಅರೆಸ್ಟ್​​, 50 ಲಕ್ಷ ಮೌಲ್ಯದ ಸ್ಕ್ಯಾನರ್‌ ಸೇರಿ ಹಲವು ವಸ್ತುಗಳು ಜಪ್ತಿ

ಎಲೆಕ್ಟ್ರಾನಿಕ್ ಡಿವೈಸ್ ಹಾಗೂ ಸ್ಕ್ಯಾನರ್‌ಗಳನ್ನು ಬಳಸಿ ಇಸ್ಪೀಟ್ ಜೂಜಾಟದಲ್ಲಿ ವಂಚಿಸುತ್ತಿದ್ದ ಗ್ಯಾಂಗ್‌ನ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 50 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಮತ್ತೊಂದೆಡೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಬಳ್ಳಾರಿಯ ಕೌಲ್ ಬಜಾರ್ ಪೊಲೀಸರು, ಬರೋಬ್ಬರಿ 40 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಜೂಜಾಟವಾಡಿ ವಂಚಿಸ್ತಿದ್ದ ಗ್ಯಾಂಗ್ ಖಾಕಿ ಬಲೆಗೆ: ಐವರು ಅರೆಸ್ಟ್​​, 50 ಲಕ್ಷ ಮೌಲ್ಯದ ಸ್ಕ್ಯಾನರ್‌ ಸೇರಿ ಹಲವು ವಸ್ತುಗಳು ಜಪ್ತಿ
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: Aug 25, 2026 | 5:04 PM

ಬೆಂಗಳೂರು/ಬಳ್ಳಾರಿ, ಆಗಸ್ಟ್​​ 25: ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಜೂಜಾಟವಾಡಿ ವಂಚಿಸ್ತಿದ್ದ ಗ್ಯಾಂಗ್​​ನನ ಬೆಂಗಳೂರಿನ (Bengaluru) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರು ಆರೋಪಿಗಳನ್ನು ಖಾಕಿ ಖೆಡ್ಡಾಕ್ಕೆ ಕೆಡವಿದ್ದು, ಬಂಧಿತರಿಂದ 50 ಲಕ್ಷ ಮೌಲ್ಯದ ಸ್ಕ್ಯಾನರ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು, 1 ಕಾರು, 1 ಆಟೋ, 3 ದ್ವಿಚಕ್ರ ವಾಹನಗಳು ಮತ್ತು 7 ಮೊಬೈಲ್‌ ಸೀಜ್ ಮಾಡಲಾಗಿದೆ. ಖದೀಮರು ವಂಚನೆಗೆ ಬಳಸುತ್ತಿದ್ದ ಐಡಿಯಾ ಕಂಡು ಪೊಲೀಸರೇ ಶಾಕ್​​ ಆಗಿದ್ದಾರೆ.

ವಂಚನೆ ನಡೆಯುತ್ತಿದ್ದಿದ್ದು ಹೇಗೆ?

ಜೂಜಾಟವಾಡಲು ಅಡ್ಡೆ ಫಿಕ್ಸ್ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ಹಣವಂತರನ್ನೇ ಟಾರ್ಗೆಟ್ ಮಾಡಿ ಸ್ಥಳಕ್ಕೆ ಕರೆಸುತ್ತಿದ್ದರು. ವಂಚನೆಗಾಗಿ ಮೊಬೈಲ್ ರೀತಿಯಲ್ಲೇ ಕಾಣುವ ಡಿವೈಸ್​​ನ ಇವರು ಬಳಕೆ ಮಾಡುತ್ತಿದ್ದು, ಇದು ಇಸ್ಪೀಟ್ ಕಾರ್ಡ್ ಸ್ಕ್ಯಾನ್ ಮಾಡಲು ಸಹಕಾರಿಯಾಗುತ್ತಿತ್ತು. ಯಾವುದು ಅಂದರ್, ಯಾವುದು ಬಾಹರ್ ಎಂದು ಮೊದಲೇ ಈ ಮೂಲಕ ತಿಳಿದುಕೊಳ್ಳುತ್ತಿದ್ದರು. ಡಿವೈಸ್ ಜೊತೆ ಕನೆಕ್ಟ್ ಆಗಲು ಕಣ್ಣಿನಲ್ಲಿ ಲೆನ್ಸ್, ವಾಚ್, ಕಾರಿನ ಕೀ, ಮತ್ತು ಕಿವಿಯಲ್ಲಿ ಚಿಕ್ಕ ಬಡ್ಸ್​​ನ ಆರೋಪಿಗಳು ಬಳಸುತ್ತಿದ್ದರು. ಇದು ಎದುರಿಗೆ ಕೂತು ಜೂಜಾಡುವವರ ಗಮನಕ್ಕೂ ಬರುತ್ತಿರಲಿಲ್ಲ. ಮೊದಲು ಎರಡು ಆಟ ಸೋತು ಎದುರಾಳಿಯನ್ನು ನಂಬಿಸುತ್ತಿದ್ದರು. ನಂತರ ಡಿವೈಸ್ ಸಹಾಯದಿಂದ ನಿರಂತರವಾಗಿ ಗೆಲ್ಲುತ್ತಿದ್ದರು. ಇದೇ ರೀತಿ ಸಾಕಷ್ಟು ಮಂದಿಗೆ ಆರೋಪಿಗಳು ಮೋಸ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನೇಪಾಳಿ ಗ್ಯಾಂಗ್ ಕೈಚಳಕ: ಖಾಸಗಿ ಕಂಪನಿ ಉದ್ಯೋಗಿ ಮನೆಯಲ್ಲಿ ಒಂದು ಕೆಜಿ ಚಿನ್ನಾಭರಣ ಕಳ್ಳತನ

40 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಳ್ಳ ಅರೆಸ್ಟ್​​

ಮತ್ತೊಂದೆಡೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಬಳ್ಳಾರಿಯ ಕೌಲ್ ಬಜಾರ್ ಪೊಲೀಸರು ಹೊಂಚು ಹಾಕಿ ಸರಣಿ ಮನೆ ಕಳ್ಳತನ ಮಾಡ್ತಿದ್ದ ಖತರ್ನಾಕ್ ಖದೀಮನನ್ನು ಬಂಧಿಸಿದ್ದಾರೆ. ಬಳ್ಳಾರಿಯ ಕರಿಮಾರಮ್ಮ ನಗರದ ನಿವಾಸಿ ಹನುಮಂತಪ್ಪ ಬಂಧಿತ ಆರೋಪಿಯಾಗಿದ್ದು, ಈತ ಬರೋಬ್ಬರಿ 40 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ, ರಾಡ್ ಬಳಸಿ ಮನೆ ಬಾಗಿಲು ಮುರಿದು ಕನ್ನ ಹಾಕುತ್ತಿದ್ದ. ಬಂಧಿತನಿಂದ 110 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದ್ದು, ಕದ್ದ ಚಿನ್ನವನ್ನು ವಿವಿಧ ಬಂಗಾರದ ಅಂಗಡಿಗಳಿಗೆ ಈತ ಮಾರಾಟ ಮಾಡುತ್ತಿದ್ದ ಎಂಬುದು ಕೂಡ ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:03 pm, Tue, 25 August 26

Loading...
Unable to load recommendations.
Follow Us