ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬುದು ನಮ್ಮ ಅಪೇಕ್ಷೆ- ಮಾಜಿ ಸಿಎಂ ಯಡಿಯೂರಪ್ಪ

| Updated By: ಸಾಧು ಶ್ರೀನಾಥ್​

Updated on: Apr 11, 2022 | 7:05 PM

ವಿನಾಕಾರಣ ಬೆಲೆ ಏರಿಕೆ ವಿಷಯ ದೊಡ್ಡದು ಮಾಡುವುದು ಬೇಡ. ಕಾಂಗ್ರೆಸ್​ನವರಿಗೆ ಬೇರೇನೂ ಚಟುವಟಿಕೆ ಇಲ್ಲ. ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಹಕಾರ ನೀಡಲಿ. ನಾವೆಲ್ಲರೂ ಒಟ್ಟಾಗಿ ಸೇರಿ ರಾಜ್ಯ ಅಭಿವೃದ್ಧಿ ಮಾಡಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಗೊಂದಲ ಉಂಟು ಮಾಡಬಾರದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬುದು ನಮ್ಮ ಅಪೇಕ್ಷೆ- ಮಾಜಿ ಸಿಎಂ ಯಡಿಯೂರಪ್ಪ
ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬುದು ನಮ್ಮ ಅಪೇಕ್ಷೆ- ಮಾಜಿ ಸಿಎಂ ಯಡಿಯೂರಪ್ಪ
Follow us on

ಬೆಂಗಳೂರು: ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು (Hindu, Muslim). ಇನ್ಮುಂದೆ ಅಹಿತಕರ ಘಟನೆಗೆ ಅವಕಾಶ ಕೊಡದಿರಲಿ. ಕೆಲ‌ ಕಿಡಿಗೇಡಿಗಳು ಸೌಹಾರ್ದತೆ (brother) ಕೆಡಿಸುವ ಕೆಲಸ ಮಾಡ್ತಿದ್ದಾರೆ. ನಾನೂ ಕೂಡ ಅಂಥವರಿಗೆ ಕಿವಿಮಾತು ಹೇಳುತ್ತೇನೆ. ಅಹಿತಕರ ಘಟನೆ ನಡೆಯದಂತೆ ಈಗಾಗಲೇ‌ ಸಿಎಂ ಬೊಮ್ಮಾಯಿ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ಸರ್ಕಾರ ಇದನ್ನೆಲ್ಲ ಸಹಿಸೋದಿಲ್ಲ. ನಿಮ್ಮ ನಿಮ್ಮ ಕೆಲಸ ಮಾಡಿಕೊಂಡು ಹೋಗಿ, ಯಾರೂ ಸಾಮರಸ್ಯ ಕದಡಬೇಡಿ. ಮುಸ್ಲಿಮರು‌ ನೆಮ್ಮದಿ, ಗೌರವದಿಂದ ಬಾಳಬೇಕಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ (bs yediyurappa).

ನಾಳೆಯಿಂದ 3 ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡ್ತಿದ್ದೇವೆ. ಪಕ್ಷ ಬಲಪಡಿಸಲು ಈ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸುತ್ತೇವೆ. ಮುಂದಿನ ಚುನಾವಣೆ ಸಿದ್ಧತೆಗಾಗಿ ಈ ರಾಜ್ಯ ಪ್ರವಾಸ. ಇನ್ಮುಂದೆ ನಿರಂತರವಾಗಿ ರಾಜ್ಯ ಪ್ರವಾಸಗಳು ನಡೆಯುತ್ತವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​ನಿಂದ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಕಾಂಗ್ರೆಸ್​​ನವರ ಅಧಿಕಾರದ ಅವಧಿಯಲ್ಲಿ ಬೆಲೆ ಏರಿಕೆ ಹೇಗಿತ್ತು? ಕಾಂಗ್ರೆಸ್​ಗೆ ಹೋಲಿಸಿದ್ರೆ ಈಗಿನ ದರ ಏನೇನೂ ಇಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ವಿನಾಕಾರಣ ಬೆಲೆ ಏರಿಕೆ ವಿಷಯ ದೊಡ್ಡದು ಮಾಡುವುದು ಬೇಡ. ಕಾಂಗ್ರೆಸ್​ನವರಿಗೆ ಬೇರೇನೂ ಚಟುವಟಿಕೆ ಇಲ್ಲ. ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಹಕಾರ ನೀಡಲಿ. ನಾವೆಲ್ಲರೂ ಒಟ್ಟಾಗಿ ಸೇರಿ ರಾಜ್ಯ ಅಭಿವೃದ್ಧಿ ಮಾಡಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಗೊಂದಲ ಉಂಟು ಮಾಡಬಾರದು. ಸಿದ್ದರಾಮಯ್ಯ, ಡಿಕೆಶಿ ಗೊಂದಲ ಮೂಡಿಸಬಾರದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

B.S. Yadiyurappa : ರಾಜ್ಯದಲ್ಲಿನ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾಜಿ ಸಿಎಂ ಬಿಎಸ್​ವೈ ರಿಯಾಕ್ಷನ್

Also Read:

ಕಂಠ ಮಟ್ಟ ಕುಡಿದು, ಅಮಲೇರಿಸಿಕೊಂಡು ದೇವಸ್ಥಾನದಲ್ಲಿ ಮದುವೆಯಾದ ಯುವಕರು; ಮುಂದಾಗಿದ್ದೆಲ್ಲ ಫಜೀತಿ, 10 ಸಾವಿರ ರೂ.ಹೋಯ್ತು !

Also Read:

ವಿಜಯನಗರ ಶ್ರೀಕೃಷ್ಣದೇವರಾಯ ಘಟಿಕೋತ್ಸವ: ಎನ್ ತಿಪ್ಪಣ್ಣ, ಹಿರೇಮಗಳೂರು ಕಣ್ಣನ್, ನರೇಂದ್ರಕುಮಾರ್ ಬಲ್ದೋಟ್ಗೆ ಗೌರವ ಡಾಕ್ಟರೇಟ್

 

Published On - 1:42 pm, Mon, 11 April 22