ರಾಯಚೂರು: ರಾಯಚೂರಿನ ಲಿಂಗಸೂರಿನಲ್ಲಿ ಹಿಟ್ ಆಂಡ್ ರನ್ ಅಪಘಾತ ನಡೆದು (Hit and Run Case in Lingasuru) ಇಬ್ಬರು ಬೈಕ್ ಸವಾರರನ್ನು ಬಲಿ ಪಡೆದಿತ್ತು. ನಾಗರಾಜ್ ಮತ್ತು ದೇವರಾಜ್ ಎಂಬುವವರು ಇದೇ ನವೆಂಬರ್ 10 ರಂದು ರಾತ್ರಿ 8.30 ರ ಸುಮಾರಿಗೆ ನಡೆದಿದ್ದ ಘಟನೆಯಲ್ಲಿ ಮೃತಪಟ್ಟಿದ್ದರು. ಕೆಎಸ್ ಆರ್ ಟಿಸಿ ಬಸ್ ಈ ಹಿಟ್ ಆಂಡ್ ರನ್ ಅಪಘಾತಕ್ಕೆ ಕಾರಣವಾಗಿದ್ದು, ಲಿಂಗಸೂರು ಪೊಲೀಸರು 18 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿ ಚಾಲಕನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈ 18 ದಿನಗಳ ಕಾಲ ಲಿಂಗಸೂರು ಪೊಲೀಸರು (Lingasuru police) ನಡೆಸಿದ ಕಾರ್ಯಾಚರಣೆ ನಿಜಕ್ಕೂ ರೋಚಕವಾಗಿದೆ.
ಲಿಂಗಸೂರು ಪೊಲೀಸರು ಸುಮಾರು 2000 ಕಿಮಿ ಓಡಾಡಿ ಕೇಸ್ ಪತ್ತೆ ಕಾರ್ಯ ನಡೆಸಿ, ಸೈ ಅನ್ನಿಸಿಕೊಂಡಿದ್ದಾರೆ. ಆರೋಪಿ ಬಸ್ ಚಾಲಕ ನಾಗಯ್ಯನನ್ನು ಬಂಧಿಸಿದ್ದಾರೆ. ಲಿಂಗಸೂರು ಪೊಲೀಸರು ಘಟನಾ ಸ್ಥಳದಲ್ಲಿ ಬಿದ್ದಿದ್ದ ಅವಶೇಷಗಳ ಆಧಾರದಲ್ಲಿ ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಕಲಬುರಗಿ ನಗರದ ಕಾಳಗಿ ಡೀಪೊದ ಕೆಎಸ್ ಆರ್ ಟಿಸಿ ಬಸ್ ಅನ್ನೋದು ಪತ್ತೆಯಾಗಿತ್ತು. 700 ಕ್ಕು ಹೆಚ್ಚು ಬಸ್ ಮತ್ತು 25 ಕ್ಕೂ ಹೆಚ್ಚು ಡಿಪೋಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು.
ಲಿಂಗಸೂರಿನಿಂದ ಬೆಂಗಳೂರು ವರೆಗಿನ ಮಾರ್ಗದಲ್ಲಿ 100 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಲಾಗಿತ್ತು. ಆರೋಪಿ ಚಾಲಕನಿಂದ ಬೆಂಗಳೂರಿನಲ್ಲಿ ಖಾಸಗಿ ಗ್ಯಾರೇಜ್ ನಲ್ಲಿ ಬಸ್ ರಿಪೇರಿ ಯಾಗಿತ್ತು. ಬಳಿಕ ಕಲಬುರಗಿಯಲ್ಲಿ ಹೊಸ ನಂಬರ್ ಪ್ಲೇಟ್ ಪ್ರಿಂಟ್ ಮಾಡಿಸಿದ್ದ. ಈ ಬಗ್ಗೆ ತನಿಖೆ ವೇಳೆ ಆರೋಪಿ ಚಾಲಕ ನಾಗಯ್ಯ ಬಾಯ್ಬಿಟ್ಟಿದ್ದಾನೆ. ಲಿಂಗಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಮಕ್ಕಳ ಜೊತೆ ಮದುವೆಯಿಂದ ಬರುವಾಗ ಪಲ್ಟಿಯಾಗಿದ್ದ ಆಟೋಗೆ ಬೈಕ್ ಡಿಕ್ಕಿ, ಸವಾರ ಸಾವು:
ಮೈಸೂರು -ಪಲ್ಟಿಯಾಗಿದ್ದ ಆಪೇ ಆಟೋಗೆ ಬೈಕ್ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವಿಗೀಡಾಗದ್ದಾನೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಹೊಸ ಅಗ್ರಹಾರದ ಬಳಿ ಅಪಘಾತ ನಡೆದಿದೆ. ಬೆಕ್ಯಾ ಗ್ರಾಮದ ನಿವಾಸಿ ಸತೀಶ್ (35) ಮೃತ ದುರ್ದೈವಿ. ಪತ್ನಿ ಮಕ್ಕಳ ಜೊತೆ ಮದುವೆ ಕಾರ್ಯಕ್ರಮ ಮುಗಿಸಿ ಹೋಗುವಾಗ ಅಪಘಾತ ಸಂಭವಿಸಿದೆ. ಪತ್ನಿ ಪಾರ್ವತಿ ಮತ್ತು ಮಗಳು ಖುಷಿ ಮಗ ಜೀವನ್‌ಗೆ ಗಂಭೀರ ಗಾಯಗಳಾಗಿವೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
Parappana Agrahara Central prison: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ
Published On - 8:33 am, Tue, 30 November 21