ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

| Updated By: Skanda

Updated on: Sep 04, 2021 | 12:23 PM

ಕರ್ನಾಟಕ ಭೂ ಕಂದಾಯ ಕಾಯಿದೆ 1946ರ 94-C ಗೆ ಪ್ರಸ್ತುತ ಆದಾಯದ ಮಿತಿ ವಾರ್ಷಿಕ 30 ಸಾವಿರ ರೂ. ಇದ್ದು ಅದನ್ನು 1 ಲಕ್ಷದ 20 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಕರ್ನಾಟಕ ಭೂ ಕಂದಾಯ ಕಾಯಿದೆ 1946ರ 94-C ಗೆ ಪ್ರಸ್ತುತ ಇರುವ ಆದಾಯದ ಗರಿಷ್ಠ ಮಿತಿಯನ್ನು ಏರಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಇರುವ ವಾರ್ಷಿಕ ಗರಿಷ್ಠ ಆದಾಯದ ಮಿತಿಯನ್ನು 30,000 ರೂಪಾಯಿಗಳಿಂದ 1,20,000 ರೂಪಾಯಿಗೆ ಹೆಚ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಗೃಹ ಸಚಿವರು ಮನವಿ ಮಾಡಿದ್ದಾರೆ.

ಕರ್ನಾಟಕ ಭೂ ಕಂದಾಯ ಕಾಯಿದೆ 94-C ಅಡಿಯಲ್ಲಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಗಳಿಸಲು ಇದು ಅನುಕೂಲವಾಗಲಿದೆ. ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆ 1964 (ಕರ್ನಾಟಕ ಕಾಯಿದೆ-12 1964) 94-C ಗೆ ತಿದ್ದುಪಡಿ ತರಬೇಕು ಎಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರ ಬರೆದಿದ್ದಾರೆ.

ಕರ್ನಾಟಕ ಭೂ ಕಂದಾಯ ಕಾಯಿದೆ 1946ರ 94-C ಗೆ ಪ್ರಸ್ತುತ ಆದಾಯದ ಮಿತಿ ವಾರ್ಷಿಕ 30 ಸಾವಿರ ರೂ. ಇದ್ದು ಅದನ್ನು 1 ಲಕ್ಷದ 20 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:
ಕಾನ್ಸ್​ಟೇಬಲ್​ಗಳ ಜೀವನಮಟ್ಟ ಸುಧಾರಣೆಗೆ ಮೊದಲ ಆದ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ

Surveyors Recruitment: ಇನ್ನೂ 600 ಮಂದಿ ಸರ್ವೆಯರುಗಳ ನೇಮಕಕ್ಕೆ ಆದೇಶ -ಕಂದಾಯ ಸಚಿವ ಆರ್ ಅಶೋಕ್

(Home Minister Araga Jnanendra requests CM and Revenue Minister to amend Land Revenue act 1946 94 C)