ಕಾನ್ಸ್​ಟೇಬಲ್​ಗಳ ಜೀವನಮಟ್ಟ ಸುಧಾರಣೆಗೆ ಮೊದಲ ಆದ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ

TV9 Digital Desk

| Edited By: guruganesh bhat

Updated on:Sep 02, 2021 | 9:44 PM

ಇತ್ತೀಚಿಗೆ ಪೊಲೀಸ್ ಇಲಾಖೆ ಸೇರಿದ ಕಾನ್ಸ್​ಟೇಬಲ್​ಗಳಲ್ಲಿ ಇಂಜಿನಿಯರಿಂಗ್ ಓದಿದವರು ಸಹ ಇದ್ದಾರೆ ಎಂದು ಅವರು ತಿಳಿಸಿದರು.

ಕಾನ್ಸ್​ಟೇಬಲ್​ಗಳ ಜೀವನಮಟ್ಟ ಸುಧಾರಣೆಗೆ ಮೊದಲ ಆದ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ)

ದಾವಣಗೆರೆ: ಕಾನ್ಸ್​ಟೇಬಲ್​ಗಳ ಜೀವನಮಟ್ಟ ಸುಧಾರಣೆಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಶೇಕಡಾ 49ರಷ್ಟು ಕಾನ್ಸ್​ಟೇಬಲ್​ಗಳು ಡಬಲ್ ಬೆಡ್ ರೂಂ ಮನೆ ಹಂಚಿಕೆ ಮಾಡಲಾಗಿದೆ. ಇಷ್ಟರಲ್ಲಿಯೇ ತರಬೇತಿಯಲ್ಲಿರುವ 4 ಸಾವಿರ ಜನ ಕಾನ್ಸ್​ಟೇಬಲ್​ ಸೇವೆಗೆ ಹಾಜರಾಗಲಿದ್ದಾರೆ.  ಇತ್ತೀಚಿಗೆ ಪೊಲೀಸ್ ಇಲಾಖೆ ಸೇರಿದ ಕಾನ್ಸ್​ಟೇಬಲ್​ಗಳಲ್ಲಿ ಇಂಜಿನಿಯರಿಂಗ್ ಓದಿದವರು ಸಹ ಇದ್ದಾರೆ. ಅವರ ಜೀವನಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರಿನ ಸರ್ವಜ್ಞ ನಗರದಲ್ಲಿ ಅಕ್ರಮ ಕ್ಯಾಸಿನೋ ತಲೆಎತ್ತಿದೆ: ಶಾಸಕ ಕೆ ಜೆ ಜಾರ್ಜ್ ಪತ್ರ ಬೆಂಗಳೂರು: ಬೆಂಗಳೂರಿನ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಕ್ಯಾಸಿನೋ ಅಡ್ಡ ತಲೆಯೆತ್ತಿದೆ. ಕೊವಿಡ್ ಆರ್ಥಿಕ ದುಸ್ಥಿತಿಯಲ್ಲಿ ಬಡವರು ಜೂಜು ಆಟವಾಡಿ ಮತ್ತಷ್ಟು ವಿಷಮಯ ಸನ್ನಿವೇಶ ಸೃಷ್ಟಿಯಾಗುತ್ತಿದೆ ಎಂದು ಖುದ್ದು ಶಾಸಕ ಕೆ ಜೆ ಜಾರ್ಜ್ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮತ್ತು ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಡ್ರಗ್ ಕೇಸ್ ನಲ್ಲಿ ಗೋವಾ ಕ್ಯಾಸಿನೊ ಜೂಜು ಅಡ್ಡೆ ಬಿಸಿನೆಸ್ ಪಾಯಿಂಟ್ ಆಗಿ ಸ್ಯಾಂಡಲ್ ವುಡ್ ವಿವಾದಕ್ಕೆ ಗ್ರಾಸವಾಗಲು ಕಾರಣವಾಗಿತು. ಈಗ ಬೆಂಗಳೂರಿನ ಅಕ್ರಮ ಕ್ಯಾಸಿನೋ ಅಡ್ಡೆ ಬಾರಿ ಕೋಲಾಹಾಲ ಸೃಷ್ಟಿಸುವ ಸಂಕೇತಗಳು ಕಾಣುತ್ತಿದೆ ಎಂದು ಶಾಸಕ ಕೆ ಜೆ ಜಾರ್ಜ್ ಪತ್ರದಲ್ಲಿ ತಿಳಿಸಿದ್ದಾರೆ.

ಸರ್ವಜ್ಞ ನಗರ ಶಾಸಕ ಕೆ ಜೆ ಜಾರ್ಜ್ ಪೊಲೀಸ್ ಮಹಾ ನಿರ್ದೇಶಕರು ,ಕಮೀನಷರ್ ಎಲ್ಲರಿಗೂ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅಕ್ರಮ ಕ್ಯಾಸಿನೋ ನಿಲ್ಲಿಸಲು ಪತ್ರ ಮೂಲಕ ಮಾಹಿತಿ ಕೊಡಲಾಗಿದೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ವೀಸ್ ರಸ್ತೆ ಹೆಚ್ ಆರ್ ಬಿ ಆರ್ ಬಡಾವಣೆ ಹಾಗೂ ಕಮ್ಮನಹಳ್ಳಿ ಮುಖ್ಯ ರಸ್ತೆಗಳಲ್ಲಿ ಕ್ಯಾಸಿನೋ ಜೂಜು ಅಡ್ಡೆ ತಲೆಯೆತ್ತಿದೆ. ಜೂಜು ಅಡ್ಡೆಗಳಿಂದ ಕಾನೂನು ಅಪರಾಧಗಳು ಹೆಚ್ಚಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: 

ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಗೃಹ ಸಚಿವ ಅಮಿತ್ ಶಾ ಘೋಷಣೆ

Kichcha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್​; ಫೋಟೋ ವೈರಲ್​

(Karnataka Home Minister Araga Jnanendra says First priority for improving quality of life of constables)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada