ಇನ್ಮುಂದೆ ದಿನದ 24 ಗಂಟೆಗಳ‌ ಕಾಲ ತೆರೆಯಲಿವೆ ಹೋಟೆಲ್​ಗಳು; ಗೃಹ ಸಚಿವರಿಂದ ಹೋಟೆಲ್ ಅಸೋಸಿಯೇಷನ್​ಗೆ ಭರವಸೆ

ಹೋಟೆಲ್​ಗಳನ್ನ ದಿನದ 24 ಗಂಟೆಗಳ ಕಾಲ ತೆಗೆಯಬೇಕು ಎಂದು ಹೋಟೆಲ್ ಮಾಲೀಕರು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು.‌ ಈ ಬೇಡಿಕೆ ಈ ವರ್ಷ ಇಡೇರುವ ಹಾಗೇ ಕಾಣಿಸುತ್ತಿದೆ. ಇನ್ಮುಂದೆ ದಿನದ 24 ಗಂಟೆಗಳ‌ ಕಾಲ ಹೋಟೆಲ್​ಗಳು ತೆರೆಯಲಿವೆ. ಗೃಹ ಸಚಿವರಿಂದ ಹೋಟೆಲ್ ಅಸೋಸಿಯೇಷನ್​ಗೆ ಭರವಸೆ ಸಿಕ್ಕಿದೆ.

ಇನ್ಮುಂದೆ ದಿನದ 24 ಗಂಟೆಗಳ‌ ಕಾಲ ತೆರೆಯಲಿವೆ ಹೋಟೆಲ್​ಗಳು; ಗೃಹ ಸಚಿವರಿಂದ ಹೋಟೆಲ್ ಅಸೋಸಿಯೇಷನ್​ಗೆ ಭರವಸೆ
ಜಿ ಪರಮೇಶ್ವರ್​
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Feb 07, 2024 | 9:31 AM

ಬೆಂಗಳೂರು, ಫೆ.07: ರಾಜಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ವಲಯ ಅಂದ್ರೆ ಅದು ಹೋಟೆಲ್ ಉಧ್ಯಮ.‌ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಹೋಟೆಲ್​ಗಳು (Hotels) ಓಪನ್ ಆಗುತ್ತಿದ್ದಂತೆ ಉದ್ಯೋಗ ಸೃಷ್ಟಿಯು ಕೂಡ ಹೆಚ್ಚಳವಾಗುತ್ತಿದೆ.‌ ಈ ಮಧ್ಯೆ ಹೋಟೆಲ್ ಗಳನ್ನ ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ಕೊಡುವಂತೆ ಹೋಟೆಲ್ ಅಸೋಸಿಯೇಷನ್ (Hotel Association) ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿತ್ತು.‌ ಆದರೆ ಹಿಂದಿನ ಸರ್ಕಾರವು ಇವರ ಬೇಡಿಕೆಯನ್ನ ಇಡೇರಿಸಿರಲಿಲ್ಲ.‌ ಈ ಬಾರಿ ಕಾಂಗ್ರೆಸ್ ಸರ್ಕಾರ (Congress Government) ಇವರ ಬೇಡಿಕೆಯನ್ನ ಇಡೇರಿಸಲು ಮುಂದಾಗಿದೆ.

ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿರುವಂತೆ ಮಾರ್ನಿಂಗ್, ಇವ್ನಿಂಗ್, ಮಧ್ಯರಾತ್ರಿವರೆಗೂ ಕೆಲಸ ನಿರ್ವಹಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೂ ಕೆಲಸ ನಿರ್ವಹಿಸುವ ಜನರಿಗೆ ಸಧ್ಯ ಹೋಟೆಲ್​ಗಳಲ್ಲಿ ಊಟಗಳೇನೋ ಸಿಗುತ್ತಿವೆ.‌ ಆದರೆ ಮಧ್ಯರಾತ್ರಿಯ ಸಂಧರ್ಭದಲ್ಲಿ ಊಟ- ತಿಂಡಿ ಸರಿಯಾಗಿ ಸಿಗದೇ ಪರದಾಡುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ. ‌ಈ‌ ಕಾರಣದಿಂದಾಗಿ ಹೋಟೆಲ್ ಅಸೋಸಿಯೇಷನ್ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯುವಂತೆ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸುತ್ತಲೇ ಬಂದಿದೆ.‌ ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಮಾತ್ರ ಇವರ ಬೇಡಿಕೆಗೆ ಸ್ಪಂದಿಸಿರಲಿಲ್ಲ.‌ ಇದೀಗಾ ಕಾಂಗ್ರೆಸ್ ಸರ್ಕಾರ ಈ ಬೇಡಿಕೆಯನ್ನ ಇಡೇರಿಸುವ ಭರವಸೆ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಾರ್ಗಸೂಚಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಕೈ’ ಮುಖಂಡ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷನ ಮೇಲೆ ಹಲ್ಲೆ; ಕಟ್ಟಿಗೆಯಿಂದ ಹಲ್ಲೆ ಮಾಡಿ ಕಾರಿನಲ್ಲಿ ಪರಾರಿಯಾದ ಕಿಡಿಗೇಡಿ

ಇನ್ನು, ದಿನದ 24 ಗಂಟೆಗಳ‌ ಕಾಲ ಹೋಟೆಲ್ ಗಳನ್ನ ತೆರೆಯುವುದಕ್ಕೆ ಅನುಮತಿ ನೀಡುವುದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಸಾಕಷ್ಟು ಯುವಕರು ಬರ್ತಾರೆ.‌ ಅಲ್ಲದೇ ಇಂದಿಗೂ ರಾತ್ರಿ ವೇಳೆ ಪ್ರಯಾಣ ಮಾಡುವವರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಧ್ಯ ಕೇರಳದಲ್ಲಿ ದಿನದ 24 ಗಂಟೆಗಳ‌ ಕಾಲ ಹೋಟೆಲ್‌ ತೆರೆಯಲು ಅನುಮತಿ ಇದೆ. ಅದರಂತೆ ನಮ್ಮ ಸರ್ಕಾರಕ್ಕೂ ಬೇಡಿಕೆ ಇಟ್ಟಿದ್ದೀವಿ.‌ ಸರ್ಕಾರ ಭರವಸೆ ಕೊಟ್ಟಿದೆ. ಆ ಭರವಸೆ ಕಾರ್ಯರೂಪಕ್ಕೆ ಬಂದಿದ್ದೆ ಆದಾಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಹೋಟಲ್ ಮಾಲೀಕರು ಹೇಳಿದರು.

ದಿನದ 24 ಗಂಟೆಗಳ ಕಾಲ ಹೋಟೆಲ್ ಓಪನ್ ಮಾಡಲು ಅನುಮತಿ ಕೊಡುವುದು ಒಳ್ಳೆಯ ಸಂಗತಿ.‌ ರಾತ್ರಿ ವೇಳೆ ಪ್ರಯಾಣ ಮಾಡುವಾಗ ತುಂಬ ಕಷ್ಟವಾಗುತ್ತದೆ.‌ ಸರ್ಕಾರ ಒಪ್ಪಿಗೆ ಕೊಟ್ಟಿದ್ದೆ ಆದಲ್ಲಿ ತುಂಬ ಉಪಯೋಗವಾಗಲಿದೆ ಎಂದು ಗ್ರಾಹಕರೊಬ್ಬರು ಸಂತಸ ಹಂಚಿಕೊಂಡಿದ್ದಾರೆ. ಒಟ್ನಲ್ಲಿ‌,‌ ಹೋಟೆಲ್​ಗಳನ್ನ 24 ಗಂಟೆಗಳ ಕಾಲ‌ ಓಪನ್ ಮಾಡುವುದಕ್ಕೆ ಅನುಮತಿಯನ್ನ ನೀಡಿದ್ರು ಕೂಡ ಟಫ್ ರೂಲ್ಸ್ ಗಳನ್ನ ಜಾರಿ ಮಾಡುವ ಸಾಧ್ಯತೆ ಇದೆ.‌ ಅದ್ರಲ್ಲಿ, 10 ಕ್ಕಿಂತ ಹೆಚ್ಚು ನೌಕರರು ಇರಬೇಕು. ವಾಚ್ ಮ್ಯಾನ್ ಇರಬೇಕು, ಸಿಸಿ ಟಿವಿ ಕ್ಯಾಮರಾಗಳು ಇರಬೇಕು, ಸುರಕ್ಷ ವ್ಯವಸ್ಥೆ ಇರಬೇಕು ಎನ್ನುವ ರೂಲ್ಸ್ ಗಳು ಜಾರಿಯಾಗುವ ಸಾಧ್ಯತೆ ಇದ್ದು, ಹೋಟೆಲ್ ಗಳಿಗೆ 10 ರಿಂದ 20 % ಲಾಭದ ಜೊತೆಗೆ 10 ರಿಂದ 20 ಸಾವಿರ ಉದ್ಯೋಗವು ಸೃಷ್ಟಿಯಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ