Hoovu Fresh: ಪೂಜೆಗೆ ಹೂವು ಬೇಕಾ? ಬೆಂಗಳೂರು ಸಹೋದರಿಯರ ಹೂವುಫ್ರೆಶ್​ ವೆಬ್​ಸೈಟ್​ನಲ್ಲಿ ಸಬ್​ಸ್ಕ್ರೈಬ್​ ಮಾಡಿ

Flower Delivery Business: 10 ಲಕ್ಷ ರೂಪಾಯಿಯ ಹೂಡಿಕೆಯೊಂದಿಗೆ ಆನ್ಲೈನ್ ಹೂವಿನ ಮಾರಾಟ ಪ್ರಾರಂಭಿಸಿ , ಈಗ ವಾರ್ಷಿಕವಾಗಿ 8 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ ಈ ಸಹೋದರಿಯರು.

Hoovu Fresh: ಪೂಜೆಗೆ ಹೂವು ಬೇಕಾ? ಬೆಂಗಳೂರು ಸಹೋದರಿಯರ ಹೂವುಫ್ರೆಶ್​ ವೆಬ್​ಸೈಟ್​ನಲ್ಲಿ ಸಬ್​ಸ್ಕ್ರೈಬ್​ ಮಾಡಿ
ಯೆಶೋದಾ ಮತ್ತು ರಿಯಾ ಕರುತುರಿ. Image Credit source: thebetterindia.com
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 30, 2022 | 10:57 AM

ಬೆಳಗಿನ ದಿನಪತ್ರಿಕೆ, ಹಾಲಿನ ಪ್ಯಾಕೆಟ್‌(Milk Packet) ಗಳಂತೆ ತಾಜಾ ಹೂವುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಇದ್ದರೆ ಎಷ್ಟು ಅನುಕೂಲವಲ್ಲವೇ? ಇಂತಹ ಆಲೋಚನೆಯ ಮೂಲಕ ಪ್ರಾರಂಭವಾಗಿ ಈಗ ಸಾಂಪ್ರದಾಯಿಕ(Traditional) ಹೂವಿನ ಮಾರುಕಟ್ಟೆಗೆ ಆಧುನಿಕ ತಿರುವು ಕೊಟ್ಟಿದ್ದಾರೆ ಸಹೋದರಿಯರಾದ ಯೆಶೋದಾ ಮತ್ತು ರಿಯಾ ಕರುತುರಿ. 10 ಲಕ್ಷ ರೂಪಾಯಿಗಳ ಆರಂಭಿಕ ಹೂಡಿಕೆಯೊಂದಿಗೆ ಆನ್ಲೈನ್ ಹೂವಿನ ಮಾರಾಟ ಪ್ರಾರಂಭವಾಗಿ , ಈಗ ವಾರ್ಷಿಕವಾಗಿ 8 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ ಈ ಸಹೋದರಿಯರು.

ಹೂವು ಸ್ಟಾರ್ಟ್​ಅಪ್​ ಆರಂಬಿಸಿದ್ದು ಹೇಗೆ?

ಬೆಂಗಳೂರು ಮೂಲದ ಸಹೋದರಿಯರಿಬ್ಬರು ದೈನಂದಿನ ಪೂಜೆಯ ಹೂವುಗಳಿಗಾಗಿ ಹೂವು ಫ್ರೆಶ್ ಎಂಬ ಯೋಜನೆಯನ್ನು ಕಾರ್ಯಗತಗೊಳಿಸಿದರು. 2019 ರಲ್ಲಿ, ಅವರು ಪ್ರಾರಂಭಿಸಿದ್ದು,ತಾಜಾ ಹೂವುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಪರಿಚಯಿಸಿದರು. ಇದೀಗಾ ಸಾಕಷ್ಟು ಲಾಭಗಳೊಂದಿಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನೀವು ಸಾಮಾನ್ಯವಾಗಿ ದಿನ ಪತ್ರಿಕೆಗಳಿಗೆ ಚಂದಾದಾರಗಾಗುವುದನ್ನು ನೋಡಿರಬಹುದು. ಅದೇ ಈ ರೀತಿ ಹೂವಿನ ವ್ಯಾವಹಾರದಲ್ಲೂ ದೈನಂದಿನ ಪೂಜೆಯ ಹೂವುಗಳಿಗಾಗಿ ಚಂದಾದಾರರಾಗಿವುದರ ಮೂಲಕ ಹೊಸ ಹೊಸ ಐಡಿಯಾಗಳನ್ನು ಇವರು ಪರಿಚಯಿಸಿದರು. ಬೆಂಗಳೂರು ಮೂಲದ ಫ್ಲೋರಲ್ ಸ್ಟಾರ್ಟಪ್, ಏಂಜೆಲ್ ಹೂಡಿಕೆದಾರರಿಂದ 10 ಲಕ್ಷ ರೂಪಾಯಿಗಳ ಆರಂಭಿಕ ಹೂಡಿಕೆಯೊಂದಿಗೆ ಪ್ರಾರಂಭವಾಗಿ ಈಗ ವಾರ್ಷಿಕವಾಗಿ 8 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ.

ಈ ಹೂವಿನ ವ್ಯಾಪಾರ ಇವರಿಗೆನೂ ಹೊಸದಲ್ಲ. ಅವರ ತಂದೆ ರಾಮ್ ಕರುತುರಿ ಕೀನ್ಯಾ, ಇಥಿಯೋಪಿಯಾ ಮತ್ತು ಭಾರತದಲ್ಲಿ ಗುಲಾಬಿ ತೋಟಗಳನ್ನು ಹೊಂದಿದ್ದಾರೆ. ಅವರ ಕೀನ್ಯಾದ ಫಾರ್ಮ್ 90 ರ ದಶಕದಲ್ಲಿ ವಿಶ್ವದ ಅತಿದೊಡ್ಡ ಗುಲಾಬಿ ಫಾರ್ಮ್ ಎಂದು ಗುರುತಿಸಲ್ಪಟ್ಟಿತು. ಆದ್ದರಿಂದ, ಸಹೋದರಿಯರಿಗೆ ಹೂವಿನ ಉದ್ಯಮವು ವರ್ಷಗಳಲ್ಲಿ ಉತ್ತಮವಾಗಿ ಅಭಿವೃದ್ದಿ ಹೊಂದುತ್ತಾ ಹೋಯಿತು.

ಇದನ್ನೂ ಓದಿ: ಆರೋಗ್ಯಕರ ಬೀಟ್ರೂಟ್ ಇಡ್ಲಿ ತಯಾರಿಸಿ ಸವಿಯಿರಿ ಹೂವುಗಳು ಪ್ರತಿ ದಿನ ಬಳಕೆಯಲ್ಲಿರುತ್ತದೆ . ದೇವರ ಪೂಜೆಗೆ ಮಾತ್ರವಲ್ಲದೆ ಕೂದಲಿಗೆ ಮುಡಿದುಕೊಳ್ಳುವುದು, ವಾಹನಗಳ ಅಲಂಕಾರಕ್ಕಾಗಿ, ಅಂಗಡಿಗಳು ಮತ್ತು ಕಚೇರಿಗಳಲ್ಲಿ ನೇತುಹಾಕಲು ಇಷ್ಟಪಡುತ್ತಾರೆ ಎಂದು ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರಾಗಿರುವ ಯೆಶೋದಾ ಹೇಳುತ್ತಾರೆ. ಸಾಕಷ್ಟು ಫ್ಲವರ್ ಸ್ಟಾಲ್​ಗಳು ಸಂಘಟಿತವಾಗಿದ್ದರೂ ಮತ್ತು ಪ್ರವರ್ಧಮಾನಕ್ಕೆ ಬಂದಿದ್ದರೂ, ಸಾಂಪ್ರದಾಯಿಕ ಪೂಜೆ ಹೂವಿನ ಮಾರುಕಟ್ಟೆಯು ಅದರ ಬೆಳವಣಿಗೆಯಲ್ಲಿ ತುಂಬಾ ಹಿಂದುಳಿದಿದೆ. ಸುಗ್ಗಿಯ ನಂತರ ಹೂವುಗಳನ್ನು ಹಲವಾರು ಹಂತದ ನಿರ್ವಹಣೆಯ ಮೂಲಕ ಪೂರೈಸಲಾಗುತ್ತದೆ ಮತ್ತು ಅವರು ಗ್ರಾಹಕರನ್ನು ತಲುಪುವ ಹೊತ್ತಿಗೆ ಅವು ತಮ್ಮ ತಾಜಾತನವನ್ನು ಕಳೆದುಕೊಳ್ಳುತ್ತವೆ ಎಂದು ಯಶೋದಾ ಹೇಳುತ್ತಾರೆ.

ನಿಮಗೂ ದೇವರ ಪೂಜೆಗೆ ಹೂವು ಬೇಕಾದರೆ ಇಲ್ಲಿ ಸಬ್​ಸ್ಕ್ರೈಬ್​ ಮಾಡಿ

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 10:47 am, Fri, 30 December 22

ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ