World Heart Day 2023: ವಿಶ್ವ ಹೃದಯ ದಿನಾಚರಣೆ ಪೂರ್ವಭಾವಿಯಾಗಿ ಟ್ರಾಫಿಕ್ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಜೀವರಕ್ಷಕ ತರಬೇತಿ

|

Updated on: Aug 10, 2023 | 3:50 PM

ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನಾಚರಣೆಯ ಪೂರ್ವಭಾವಿಯಾಗಿ ಫೋರ್ಟಿಸ್ ಹಾಸ್ಪಿಟಲ್ಸ್, ನಾಗರಭಾವಿಯಲ್ಲಿ ಆಯೋಜಿಸಲಾಗಿದ್ದ ಬೇಸಿಕ್ ಲೈಫ್ ಸಪೋರ್ಟ್ ತರಬೇತಿಯನ್ನು ಮೂವತ್ತೈದು ಸಂಚಾರಿ ಪೊಲೀಸ್​ ಅಧಿಕಾರಿಗಳು ಪಡೆದರು.

World Heart Day 2023: ವಿಶ್ವ ಹೃದಯ ದಿನಾಚರಣೆ ಪೂರ್ವಭಾವಿಯಾಗಿ ಟ್ರಾಫಿಕ್ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿಯಿಂದ ಜೀವರಕ್ಷಕ ತರಬೇತಿ
ವಿಶ್ವ ಹೃದಯ ದಿನಾಚರಣೆಯ ಪೂರ್ವಭಾವಿಯಾಗಿ ಟ್ರಾಫಿಕ್ ಪೊಲೀಸರಿಗೆ ತರಬೇತಿ
Follow us on

ಬೆಂಗಳೂರು, ಆ.10: ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನಾಚರಣೆ (World Heart Day 2023)ಯ ಪೂರ್ವಭಾವಿಯಾಗಿ ಫೋರ್ಟಿಸ್ ಹಾಸ್ಪಿಟಲ್ಸ್(Fortis Hospitals) ನಾಗರಭಾವಿಯಲ್ಲಿ ಆಯೋಜಿಸಲಾಗಿದ್ದ ಬೇಸಿಕ್ ಲೈಫ್ ಸಪೋರ್ಟ್ ತರಬೇತಿಯನ್ನು ಮೂವತ್ತೈದು ಸಂಚಾರಿ ಪೊಲೀಸ್​ ಅಧಿಕಾರಿಗಳು ಪಡೆದರು. ಆಸ್ಪತ್ರೆಯ ಸಿಬ್ಬಂದಿಯವರು ತಮ್ಮ ಆಸ್ಪತ್ರೆಯ ಸುತ್ತಮುತ್ತಲಿನ ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಸುಮಾರು ಎರಡು ವಾರಗಳ ಹಿಂದೆ ಈ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು. ಇನ್ನು ಈ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಬುಧವಾರ(ಆ.9) ಮೂಲ ಜೀವರಕ್ಷಕ ತರಬೇತಿ ಹಾಗೂ ಹೃದ್ರೋಗಗಳ ಕುರಿತು ಜಾಗೃತಿ ಮೂಡಿಸಿದರು.

ಹೃದಯವನ್ನು ಜೋಪಾನ ಮಾಡಿದರೆ ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಂಡಂತೆ

ಹೌದು, ನಿಮ್ಮ ಹೃದಯವನ್ನು ಜೋಪಾನ ಮಾಡಿದರೆ ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಂಡಂತೆಯೇ. ಪ್ರತಿ ವರ್ಷ ಸೆಪ್ಟೆಂಬರ್​ 29ರಂದು ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಹೃದ್ರೋಗ ಮತ್ತು ಹೃದಯರಕ್ತನಾಳದ ಕಾಯಿಲೆಗಳ ನಿರ್ವಹಣೆಗಾಗಿ ಅದರ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕವಾಗಿ ಹಲವಾರು ಚಟುವಟಿಕೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಮುಖ್ಯವಾಗಿ ಹೃದಯರಕ್ತನಾಳದ ಕಾಯಿಲೆಯ ಲಕ್ಷಣಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಹೆಚ್ಚಿನ ತೊಡಕುಗಳನ್ನು ತಪ್ಪಿಸಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಮಾಡುತ್ತದೆ.

ಇದನ್ನೂ ಓದಿ:Cardiac Arrest: ಹಠಾತ್ ಹೃದಯ ಸ್ತಂಭನವನ್ನು ನಿಭಾಯಿಸುವುದು ಹೇಗೆ?

ಯುವ ಸಮೂಹದಲ್ಲಿ ಹೆಚ್ಚುತ್ತಿದೆ ಹೃದಯಾಘಾತ

ಹೃದಯವು ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಪಂಪ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ಸಮಯದಲ್ಲೂ ದೇಹದ ವಿವಿಧ ಅಂಗಗಳ ರಕ್ತದ ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸುತ್ತದೆ. ಹೃದಯ ಕಾಯಿಲೆಗಳು ಕಂಡುಬಂದ ಸಂದರ್ಭದಲ್ಲಿ ಅದರ ಪಂಪ್ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದು ದೇಹದ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದ ಮಟ್ಟಿಗೆ ಕಡಿಮೆಯಾದರೆ, ಅದು ಹೃದಯ ವೈಫಲ್ಯ ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಅದರಲ್ಲೂ ಇದೀಗ ಚಿಕ್ಕ ವಯಸ್ಸಿನವರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದೆ.

ಚಿಕಿತ್ಸೆ

ಹೆಚ್ಚಿನ ರೋಗಿಗಳಲ್ಲಿ, ಔಷಧಿಗಳು ಮತ್ತು ಸರಳ ಕ್ರಮಗಳ ಮೂಲಕ ಹೃದಯ ವೈಫಲ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಕೆಲವೊಮ್ಮೆ ಆಸ್ಪತ್ರೆಗೆ ದಾಖಲಿಸಬೇಕಾದ ಮತ್ತು ಚುಚ್ಚುಮದ್ದಿನ ಅಗತ್ಯವಿರಬಹುದು. ಸಾಧ್ಯವಾದರೆ ಮೂಲ ಕಾರಣವನ್ನು ಸರಿಪಡಿಸಬೇಕು. ಇದಕ್ಕೆ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಹುದು. ಇನ್ನು ಕೆಲವು ರೋಗಿಗಳಲ್ಲಿ, ಔಷಧಿಗಳು ನಿಷ್ಪರಿಣಾಮಕಾರಿಯಾಗುವಷ್ಟು ಸ್ಥಿತಿಯು ಹದಗೆಡಬಹುದು. ಇದನ್ನು ಟರ್ಮಿನಲ್ ಹೃದಯ ವೈಫಲ್ಯ ಎಂದು ಕರೆಯಲಾಗುತ್ತದೆ. ಅಂತಹ ರೋಗಿಗಳಿಗೂ ಸಹ ಚಿಕಿತ್ಸೆಯ ಆಯ್ಕೆಗಳು ಲಭ್ಯವಿವೆ. ಅವುಗಳಲ್ಲಿ ಒಂದು ಹೃದಯ ಕಸಿ. ಹಾಗೆಂದರೆ, ಬ್ರೈನ್​ಡೆಡ್ ಆಗಿರುವ ಅಥವಾ ಮಿದುಳು ನಿಷ್ಕ್ರಿಯ ಆಗಿರುವ ಆರೋಗ್ಯಕರ ಹೃದಯವನ್ನು ಕಸಿ ಮಾಡಲಾಗುತ್ತದೆ. ಕಸಿ ಮಾಡಿದ ನಂತರ, ಕೆಲವು ನಿರ್ಬಂಧಗಳು ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಸಾಮಾನ್ಯ ಜೀವನ ನಡೆಸಬಹುದಾಗಿದೆ.

ಇನ್ನಷ್ಟು ಆರೋಗ್ಯ ಸಂಬಂಧಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ