ಯುಗಾದಿ ಗಿಫ್ಟ್! ಬೆಂಗಳೂರಿನಲ್ಲಿ ಉದ್ಯಮಿ ಮನೆಯಲ್ಲಿ ಡೈಮಂಡ್, ಚಿನ್ನಾಭರಣ ಕಳ್ಳತನ

| Updated By: ಸಾಧು ಶ್ರೀನಾಥ್​

Updated on: Apr 04, 2022 | 4:13 PM

House Lift: ಬೆಂಗಳೂರಿನ ಕೋರಮಂಗಲದ 3 ಬ್ಲಾಕ್ ನಲ್ಲಿರುವ ಉದ್ಯಮಿ ರಂಜಿತಾ ಮೆಟ್ರಾನಿ ಎಂಬುವವರ ಮನೆಗೆ ನುಗ್ಗಿದ ಕಳ್ಳರು, ಮನೆಯ ಗ್ರಿಲ್ ಮತ್ತು ಬೀಗ ಮುರಿದು ಭಾರೀ ಕಳವು ಮಾಡಿದ್ದಾರೆ. ನಿನ್ನೆ ಸಂಜೆ ಮನೆ ಮಾಲೀಕರು ಊರಿನಿಂದ ವಾಪಸ್ಸು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಯುಗಾದಿ ಗಿಫ್ಟ್! ಬೆಂಗಳೂರಿನಲ್ಲಿ ಉದ್ಯಮಿ ಮನೆಯಲ್ಲಿ ಡೈಮಂಡ್, ಚಿನ್ನಾಭರಣ ಕಳ್ಳತನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಯುಗಾದಿ ಗಿಫ್ಟ್ – ಇದು ಕಳಕೊಂಡವರ ನೋವು. ಹೌದು ಉದ್ಯಮಿ ರಂಜಿತಾ ಮೆಟ್ರಾನಿ ಎಂಬುವರು ಯುಗಾದಿ ಹಬ್ಬಕ್ಕೆ ತಮಿಳುನಾಡಿಗೆ ಹೋಗಿದ್ದಾಗ ಇತ್ತ ಬೆಂಗಳೂರಿನಲ್ಲಿರುವ ಅವರ ಮನೆಯನ್ನು ಕಳ್ಳರು ದೋಚಿಸಿದ್ದಾರೆ (House theft in Koramangala Bangalore).

ಬೆಂಗಳೂರಿನ ಕೋರಮಂಗಲದ 3 ಬ್ಲಾಕ್ ನಲ್ಲಿರುವ ಉದ್ಯಮಿ ರಂಜಿತಾ ಮೆಟ್ರಾನಿ ಎಂಬುವವರ ಮನೆಗೆ ನುಗ್ಗಿದ ಕಳ್ಳರು, ಮನೆಯ ಗ್ರಿಲ್ ಮತ್ತು ಬೀಗ ಮುರಿದು ಭಾರೀ ಕಳವು ಮಾಡಿದ್ದಾರೆ. ನಿನ್ನೆ ಸಂಜೆ ಮನೆ ಮಾಲೀಕರು ಊರಿನಿಂದ ವಾಪಸ್ಸು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಧಿತ ಉದ್ಯಮಿ ರಂಜಿತಾ ಕೋರಮಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಓದಿದ್ದು ಎಂಜಿನಿಯರಿಂಗ್, ಎಂಬಿಎ -ಹಿಡಿದಿದ್ದು ಕಳ್ಳತನದ ಹಾದಿ…
ಬನಶಂಕರಿ ಪೊಲೀಸರು 7 ಮಂದಿ ಕುಖ್ಯಾತ ಅಂತರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ವಿಜಯ ಬಂಡಿ, ಹೇಮಂತ್, ಗುಣಶೇಖರ್ ರೆಡ್ಡಿ, ಭಾನುಮೂರ್ತಿ,
ಪುರುಷೋತ್ತಮ್, ಕಾರ್ತಿಕ್ ಮತ್ತು ಕಿರಣ್ ಬಂಧಿತ ಆರೋಪಿಗಳು. ಆರೋಪಿಗಳು ವಿಲಾಸಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದರು. ಯೂಟ್ಯೂಬ್, ಸಿನೆಮಾ ನೋಡಿ ಬೈಕ್ ಕಳ್ಳತನ ಕರಗತ ಮಾಡಿಕೊಂಡಿದ್ದರು. ಎಂಜಿನಿಯರಿಂಗ್, ಎಂಬಿಎ, ಡಿಪ್ಲೊಮಾ ವ್ಯಾಸಂಗ ಮಾಡಿದ್ದ ಆರೋಪಿಗಳು ಕಳ್ಳತನದ ಹಾದಿ ಹಿಡಿದಿದ್ದಾರೆ.

ಬೆಂಗಳೂರಿಗೆ ಬರುತ್ತಿದ್ದ ಆರೋಪಿಗಳು ಕದ್ದ ಬೈಕಿನಲ್ಲೇ ಯಾತ್ರಿಕರ ರೀತಿ ವಾಪಾಸಾಗುತ್ತಿದ್ದರು. ಬಂಧಿತರ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 20 ಪ್ರಕರಣಗಳು ದಾಖಲಾಗಿದ್ದವು. ಮೂರು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಗ್ಯಾಂಗ್ ಸದ್ಯ ಪೊಲೀಸರಿಗೆ ಸಿಕ್ಕಿದ್ದಾರೆ. ಬಂಧಿತರಿಂದ 68 ಲಕ್ಷ ಮೌಲ್ಯದ 30 ಬೈಕ್ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ವೀಕ್ಷಿಸಿ:
RRR: ರಾಜಮೌಳಿ ಕಲೆಗಾರಿಕೆ ಹೇಗಿದೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ ವೀಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ..

ಇದನ್ನೂ ಓದಿ:
JDS ​ನಿಂದ ಹೊರಟವರ ಪೈಕಿ ಹೊರಟ್ಟಿ 101ನೇಯವರು! ಆದರೂ ಪಕ್ಷ ಉಳಿದಿದೆ -ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ

Published On - 3:26 pm, Mon, 4 April 22