ಶೀಲದ ಮೇಲೆ ಶಂಕೆ: ಚಾಕುವಿನಿಂದ ಇರಿದು ಪತ್ನಿಯನ್ನೇ ಕೊಂದ ಪಾಪಿ ಪತಿ

ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರದ್ದೂ ಎರಡನೇ ಮದುವೆ ಆಗಿತ್ತೆಂಬ ಮಾಹಿತಿ ಇರೋದಾಗಿ ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ಕುಡಿದ ಅಮಲಿನಲ್ಲಿ ಬಿಯರ್​ ಬಾಟಲಿಯಿಂದ ಹೊಡೆದು ವ್ಯಕ್ತಿಯನ್ನ ಹತ್ಯೆ ಮಾಡಿರುವ ಘಟನೆ ಬನಶಂಕರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶೀಲದ ಮೇಲೆ ಶಂಕೆ: ಚಾಕುವಿನಿಂದ ಇರಿದು ಪತ್ನಿಯನ್ನೇ ಕೊಂದ ಪಾಪಿ ಪತಿ
ಪತ್ನಿ ಕೊಂದ ಆರೋಪಿ
Image Credit source: Tv9 Kannada
Updated By: ಪ್ರಸನ್ನ ಹೆಗಡೆ

Updated on: Nov 07, 2025 | 11:17 AM

ಬೆಂಗಳೂರು, ನವೆಂಬರ್​ 07: ಶೀಲ ಶಂಕಿಸಿ ಪತಿಯೇ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಗಂಗಮ್ಮ ಲೇಔಟ್​ನಲ್ಲಿ ನಡೆದಿದೆ. ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಂಜಲಿ (20) ಮೃತ ಮಹಿಳೆಯಾಗಿದ್ದು, ಟ್ರಾವೆಲ್ಸ್ ಕಚೇರಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ರವಿಚಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪಾವಗಡ ಮೂಲದ ಅಂಜಲಿ, ಸುರಪುರ ಮೂಲದವನಾದ ರವಿಚಂದ್ರನನ್ನ ಮದುವೆಯಾಗಿದ್ದರು. ಮದುವೆ ನಂತರ ದಂಪತಿ ಅಮೃತಹಳ್ಳಿಯಲ್ಲಿ ವಾಸವಿದ್ದರು. ಪತ್ನಿಯ ಶೀಲದ ಬಗ್ಗೆ ಶಂಕಿಸಿದ್ದ ರವಿಚಂದ್ರ ಮೊಣಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಲ್ಲದೆ, ಚಾಕುವಿನಿಂದ ಕುತ್ತಿಗೆ ಇರಿದು ಬರ್ಬರ ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಿನಲ್ಲಿ ಒದ್ದಾಡಿರುವ ಅಂಜಲಿ ಕೊನೆಯುಸಿರೆಳೆದಿದ್ದಾಳೆ. ಘಟನಾ ಸ್ಥಳಕ್ಕೆ ಸೋಕೋ ಟೀಂ ಭೇಟಿ ನೀಡಿದ್ದು, ತನಿಖೆ ನಡೆಸಿದೆ.

ಇದನ್ನೂ ಓದಿ: ಚರಂಡಿಯಲ್ಲಿ ಮಹಿಳೆಯ ತಲೆಯಿಲ್ಲದ ಬೆತ್ತಲೆ ಶವ ಪತ್ತೆ

ಘಟನೆ ಬಗ್ಗೆ ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಮಾಹಿತಿ ನೀಡಿದ್ದು, ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಕೊಲೆ ನಡೆದಿದೆ. ಮೇಲ್ನೋಟಕ್ಕೆ ಪತ್ನಿ ಶೀಲ ಶಂಕಿಸಿ ಪತಿಯೇ‌ ಕೊಲೆ ಮಾಡಿದ್ದಾ‌ನೆ. ಘಟನಾ ಸ್ಥಳಕ್ಕೆ ಪಲೀಸರು ಬಂದಾಗ ಅಂಜಲಿಗೆ ಇನ್ನೂ ಜೀವ ಇರುವುದು ಕಂಡುಬಂದಿದೆ. ಹೀಗಾಗಿ ಕೋಡಲೇ ಅಮೃತಹಳ್ಳಿ ಇನ್ಸ್ ಪೆಕ್ಟರ್ ಅಂಬರೀಶ್ ಮತ್ತು ಸಿಬ್ಬಂದಿ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ, ಗಭೀರವಾಗಿ ಗಾಯಗೊಂಡಿದ್ದ ಆಕೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಅಂಜಲಿ ಮತ್ತು ರವಿಚಂದ್ರದದು ಎರಡನೇ ಮದುವೆ ಎಂಬ ಮಾಹಿತಿ ಇದ್ದು,  ಆರೋಪಿಯ ವಿಚಾರಣೆ ನಡೆಸಲಾಗತ್ತಿದೆ ಎಂದಿದ್ದಾರೆ.

ಬಿಯರ್ ಬಾಟಲಿನಿಂದ ಹೊಡೆದು ಕೊಲೆ

ಬಿಯರ್ ಬಾಟಲಿನಿಂದ ಹೊಡೆದು ವ್ಯಕ್ತಿಯಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಗರಾಜನಗರ ನಿವಾಸಿ ಸುರೇಶ್ (45) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿ ವೇಲುವನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ ವೇಲು ಹಾಗೂ ಇತರೆ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಸುರೇಶ್​ ತೆರಳಿದ್ದರು. ಆಟೋದಲ್ಲಿ ಕುಡಿದು ಇವರು ಸುತ್ತಾಟ ನಡೆಸಿದ್ದು, ಈ ವೇಳೆ ವೇಲು ಹಾಗೂ ಸುರೇಶ್ ನಡುವೆ ಕ್ಷುಲಕ ವಿಚಾರಕ್ಕೆ ಕಿರಿಕ್ ಆಗಿದೆ. ಜಗಳ ವಿಕೋಪಕ್ಕೆ ಹೋಗಿ ಸುರೇಶ್​ ಮೇಲೆ ವೇಲು ಬಿಯರ್​ ಬಾಟಲ್​ನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡು ಸುರೇಶ್​ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.